101 ಗ್ರಾಮಗಳಲ್ಲಿಲ್ಲ ಪ್ರತ್ಯೇಕ ರುದ್ರಭೂಮಿ
Team Udayavani, Jan 2, 2020, 10:41 AM IST
ಸಾಂಧರ್ಬಿಕ ಚಿತ್ರ
ಹುಬ್ಬಳ್ಳಿ: ಪ್ರತಿ ಹಳ್ಳಿಗೆ ಕನಿಷ್ಠ ಒಂದು ಸ್ಮಶಾನ ಭೂಮಿ ಕಲ್ಪಿಸಬೇಕೆಂಬ ಸರಕಾರದ ಕಾಳಜಿ ಸಮರ್ಪಕ ಅನುಷ್ಠಾನದ ಕೊರತೆ ಕಾಣುವಂತಾಗಿದೆ. ಧಾರವಾಡ ಜಿಲ್ಲೆಯ 395 ಗ್ರಾಮಗಳ ಪೈಕಿ, ಇನ್ನು 101 ಗ್ರಾಮಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲವಾಗಿದೆ.
ಅಗದಲಿದವರಿಗೆ ಮುಕ್ತಿ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಹಿಂದೆ ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಭೂಮಿಯಂತಲೇ ಗುರುತಿಸಿ ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಹೊಸಗ್ರಾಮಗಳು ಹುಟ್ಟಿಕೊಂಡಂತೆ ಮನೆ, ಕಟ್ಟಡಗಳಿಗೆ ನೀಡಿದ ಆದ್ಯತೆ ಪ್ರತ್ಯೇಕ ಸ್ಮಶಾನ ಭೂಮಿಗೆ ನೀಡಲಿಲ್ಲ. ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸುರಿಯಲಾಗುತ್ತಿದೆ. ಮಹಾನಗರ ವ್ಯಾಪ್ತಿಯೊಂದರಲ್ಲಿ ಒಂದೊಂದು ಯೋಜನೆಗಳ ವೆಚ್ಚ ಸಾವಿರಾರು ಕೋಟಿ ರೂಪಾಯಿ. ಆದರೆ ಮೂಲ ಸೌಲಭ್ಯಗಳ ಪೈಕಿ ಒಂದಾದ ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಸ್ಮಶಾನ ಭೂಮಿ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆಗಳು ಇಲ್ಲಂದತಾಗಿವೆ.
ಸರಕಾರಿ ನಿಯಮಗಳ ಪ್ರಕಾರ ಒಂದುಸ್ಮಶಾನಕ್ಕೆ ಗರಿಷ್ಠ 2 ಎಕರೆ ಭೂಮಿ ಸಾಕು. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಭೂಮಿಗೆ ಕೊರತೆಯೇನು ಇಲ್ಲ. ಆದರೂ ಜಿಲ್ಲೆಯಲ್ಲಿ 101 ಗ್ರಾಮಗಳಲ್ಲಿ ರುದ್ರ ಭೂಮಿಯಿಲ್ಲ. ಪ್ರತಿಯೊಂದು ಗ್ರಾಮಗಳಲ್ಲೂ ಮುಕ್ತಿಧಾಮ ಕಲ್ಪಿಸಬೇಕೆನ್ನುವ ಸರಕಾರದ ಕಾಳಜಿ ಕೇವಲ ಯೋಜನೆಯಾಗೇ ಉಳಿದಿದೆ.
ಇದರಿಂದ ಶವ ಸಂಸ್ಕಾರಕ್ಕಾಗಿ ಕೆಲ ಗ್ರಾಮಸ್ಥರು ಪಡಬಾರದ ಕಷ್ಟ ಪಡುವಂತಾಗಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಮಳೆಗಾದಲ್ಲಂತೂ ಸತ್ತವರ ಮನೆಯವರ ಪಾಡಂತೂ ಹೇಳತೀರದು. ಇದಕ್ಕಾಗಿಯೇ ಕೆಲ ಗ್ರಾಮಸ್ಥರು ಸ್ಮಶಾನಕ್ಕಾಗಿಯೇ ರಸ್ತೆಗಿಳಿದ ಮಾಡಿದ ಉದಾಹರಣೆಗಳಿವೆ.
ಎಲ್ಲೆಲ್ಲಿ ಕೊರತೆ: ಜಿಲ್ಲೆಯ ಎಂಟು ತಾಲೂಕುಗಳಪೈಕಿ ಕುಂದಗೋಳ ತಾಲೂಕಿನಲ್ಲಿ 57 ಗ್ರಾಮಗಳ ಪೈಕಿ 29 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 20 ಗ್ರಾಮಗಳಿದ್ದರೂ ಎಲ್ಲಾ ಗ್ರಾಮಗಳಲ್ಲಿಸ್ಮಶಾನಗಳಿವೆ. 17 ಗ್ರಾಮಗಳಲ್ಲಿ ಸರಕಾರಿ ಜಮೀನು ಗುರುತಿಸಿದ್ದು, ಮಂಜೂರಾತಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 42 ಗ್ರಾಮಗಳಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಬೇಕಾಗಿದೆ. ಇನ್ನೂ 42 ಗ್ರಾಮಗಳಲ್ಲಿ ಜಾಗ ಗುರುತಿಸಬೇಕಾಗಿದೆ. ನವಲಗುಂದ, ಅಣ್ಣಿಗೇರಿ, ಧಾರವಾಡ ಹಾಗೂ ಹುಬ್ಬಳ್ಳಿ ಗ್ರಾಮಗಳಲ್ಲಿ ಭೂಮಿ ಖರೀದಿಸಲು ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಳ್ಳ, ಕೆರೆ ದಂಡೆಯೇ ಗತಿ: ನಗರ, ಪಟ್ಟಣ, ಕೈಗಾರಿಕೆ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಗ್ರಾಮಗಳ ಭೂಮಿಗೆ ಚಿನ್ನದ ಮೌಲ್ಯ ಬರುತ್ತಿರುವುದು ಸ್ಮಶಾನ ಭೂಮಿ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಲತಲಾಂತರ ದಿಂದ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದರೂ ಭೂ ಮಾಲಿಕರ ತಕರಾರಿನಿಂದ ಸಮಸ್ಯೆಯಾಗಿಯೇ ಪರಿಣಮಿಸಿವೆ. ಮನೆಯ ಸದಸ್ಯರನ್ನು ಕಳೆದುಕೊಂಡು ದುಃಖ ಒಂದೆಡೆಯಾದರೆ ಅಂತ್ಯಸಂಸ್ಕಾರ ಮಾಡುವುದಾದರೂ ಎಲ್ಲಿ ಎನ್ನುವ ಚಿಂತೆ ಸೂತಕದ ಮನೆಗೆ ದೊಡ್ಡ ಸಮಸ್ಯೆಯಾಗಿದೆ. ಹೊಲ, ತೋಟ, ಸ್ವಂತ ಕೃಷಿ ಜಮೀನು ಹೊಂದಿದವರಿಗೆ ಇದೊಂದು ಸಮಸ್ಯೆಯಲ್ಲ. ಆದರೆ ಸ್ವಂತ ಭೂಮಿ ಇಲ್ಲದವರ ಪಾಡು ದೇವರಿಗೆ ಪ್ರೀತಿ. ಹೀಗಾಗಿಯೇ ಹಳ್ಳ, ನಾಲೆ, ಕರೆ ಅಕ್ಕಪಕ್ಕದ ಸ್ಥಳ ನೆಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿ ಕೊಡುವವರಿಲ್ಲ: ಕೆಲ ಗ್ರಾಮಗಳಲ್ಲಿ ಸರಕಾರಿ ಭೂಮಿಯಿದ್ದರೂ ರಕ್ಷಣೆಯ ಕೊರತೆ ಹಿನ್ನೆಲೆಯಲ್ಲಿ ಒತ್ತುವರಿ ಯಾಗಿವೆ. ಪ್ರತಿಯೊಂದು ಗ್ರಾಮಗಳಿಗೆ ರುದ್ರಭೂಮಿ ಕಲ್ಪಿಸಬೇಕೆನ್ನುವ ಕಾರಣಕ್ಕೆ ಸರಕಾರ ಬಿಡುಗಡೆ ಮಾಡುತ್ತಿರುವ ಹಣ ಯಾವುದಕ್ಕೂ ಸಾಲುತ್ತಿಲ್ಲ. ಜಿಲ್ಲೆಯೊಂದಕ್ಕೆ ಪ್ರತಿ ವರ್ಷ 20-22 ಲಕ್ಷ ರೂ. ಬಿಡುಗಡೆಯಾಗುತ್ತಿರುವುದು ಯಾವುದಕ್ಕೂ ಸಾಲುತ್ತಿಲ್ಲ. ಭೂಮಿಯ ಬೆಲೆ ಹೆಚ್ಚಾಗಿರುವುದರಿಂದ ಸರಕಾರ ಕೇಳುವ ದರಕ್ಕೆ ಯಾರೂ ಭೂಮಿ ಮಾರಾಟ ಮಾಡಲು ಮುಂದೆ ಬರುತ್ತಿಲ್ಲ. ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಭೂಮಿ ಖರೀದಿಸಿ ಅಭಿವೃದ್ಧಿಪಡಿಸುವುದು ಅಸಾಧ್ಯ ಎನ್ನುವಂತಾಗಿದೆ.
ಕೆಲ ಗ್ರಾಮಗಳಲ್ಲಿ ಸರಕಾರಿ ಭೂಮಿ ಲಭ್ಯತೆ ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಹಾಗೂ ನೇರ ಖರೀದಿಗೆ ಸಲ್ಲಿಸಿದ ಪ್ರಸ್ತಾವನೆಗಳು ಕೇವಲ ಪತ್ರ ವ್ಯವಹಾರಕ್ಕೆ ಸಿಮೀತವಾಗುತ್ತಿವೆ. ಬೇರೆ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ಪರಭಾರೆ ಕಾರ್ಯ ಕೂಡ ಅಷ್ಟೊಂದು ಸುಲಭವಾಗಿ ಆಗುತ್ತಿಲ್ಲ. ಇನ್ನೂ ನೇರ ಖರೀದಿಗೆ ಬೇಕಾದ ಅಗತ್ಯ ಅನುದಾನ ಕೂಡ ಬಾರದಿರುವುದು ಇಷ್ಟೊಂದು ವರ್ಷ ಕಳೆದರೂ ಪ್ರತಿಯೊಂದು ಗ್ರಾಮಕ್ಕೆ ರುದ್ರಭೂಮಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.
ಶವ ಸಂಸ್ಕಾರಕ್ಕಾಗಿ ಹಿಂದಿನಿಂದಲೂ ಪ್ರತಿಯೊಂದು ಗ್ರಾಮದಲ್ಲಿ ಒಂದಿಲ್ಲಾ ಒಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತ್ಯೇಕವಾಗಿ ಸ್ಮಶಾನ ಇಲ್ಲದ ಗ್ರಾಮಗಳಿಗೆ ಸರಕಾರದಿಂದಲೇ ಕಲ್ಪಿಸಲಾಗುತ್ತಿದೆ. ಪ್ರತ್ಯೇಕ ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸರಕಾರಿ ಭೂಮಿ ಹಾಗೂ ಖಾಸಗಿಯವರಿಂದ ಖರೀದಿಸಿ ಒದಗಿಸಲಾಗುತ್ತಿದೆ. ಅಗತ್ಯಕ್ಕೆ ಹಾಗೂ ಸರಕಾರದ ಅನುದಾನ ಮೇರೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.– ಶಿವಾನಂದ ಕರಾಳೆ, ಅಪರ ಜಿಲ್ಲಾಧಿಕಾರಿ
–ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.