ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ-ಚಿತ್ರಕ್ಕೆ ಬಣ್ಣ
Team Udayavani, Jun 3, 2019, 11:51 AM IST
ಹುಬ್ಬಳ್ಳಿ: ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದರು.
ಹುಬ್ಬಳ್ಳಿ: ವಿಕಾಸ ನಗರ ಸಿದ್ಧಲಿಂಗೇಶ್ವರ ಕಾಲೋನಿಯ ಸೂಪರ್ ಬ್ರೇನ್ ಸಂಸ್ಥೆ ಆಶ್ರಯದಲ್ಲಿ ಮಕ್ಕಳಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಹಾಗೂ ಬಸವೇಶ್ವರ ಚಿತ್ರಕ್ಕೆ ಬಣ್ಣ ತುಂಬುವ ಕಾರ್ಯಕ್ರಮ ರವಿವಾರ ನಡೆಯಿತು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗದಿಂದ ನಡೆದ ಸೈಕಲ್ ಸವಾರಿಯಲ್ಲಿ ಹಲವು ಮಕ್ಕಳು ಪಾಲ್ಗೊಂಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೂರುಸಾವಿರ ಮಠದವರೆಗೆ ಸೈಕಲ್ ಜಾಥಾ ನಡೆಸಿದರು. ನಂತರ ಮೂರುಸಾವಿರ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಕಣ್ಣು ಮುಚ್ಚಿಕೊಂಡೇ ಬಣ್ಣ ತುಂಬಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ವೈಜ್ಞಾನಿಕ ತರಬೇತಿ ನೀಡುತ್ತಿರುವ ಅನುಷಾ ಕೊರವಿ ಅವರ ಕಾರ್ಯ ಶ್ಲಾಘನೀಯ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಇಂತಹ ತರಬೇತಿಯ ಅವಶ್ಯಕತೆ ಇದೆ. ಮಕ್ಕಳ ಬೌದ್ಧಿಕ ತರಬೇತಿ ಬಗ್ಗೆ ನಾವೆಲ್ಲ ಒತ್ತು ಕೊಡಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಡಾ| ಸತೀಶ್ ಛಬ್ಬಿ ಮಾತನಾಡಿದರು. ಮಹಾಂತೇಶ ಗೋಂಗಡಶೆಟ್ಟಿ, ರುದ್ರಪ್ಪ ಹಲಗತ್ತಿ, ರಾಜಣ್ಣ ಕೊರವಿ, ನಂದಾ ಆನೆಗುಂದಿ, ಡಾ| ವಿಶ್ವನಾಥ ಕೊರವಿ, ಪ್ರಭು ಶೆಟ್ಟರ, ಪಟ್ಟಣಶೆಟ್ಟಿ, ಜೋಡಳ್ಳಿ, ಅರುಣ ಪಾಟೀಲ, ಈರಣ್ಣ ಎಮ್ಮಿ, ತರಬೇತಿದಾರೆ ಅನುಷಾ ಕೊರವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.