ನಾಳೆಯಿಂದ ಕವಿಸಂ 130ನೇ ಸಂಸ್ಥಾಪನಾ ದಿನಾಚರಣೆ
Team Udayavani, Jul 19, 2019, 8:31 AM IST
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 130ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜು. 20ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿದಿನ ಸಂಜೆ 5:30 ಗಂಟೆಗೆ ನಾಟಕ ಸಂಜೆ, ನೃತ್ಯ ಸಂಜೆ, ಹಾಸ್ಯ ಸಂಜೆ, ಸಾಂಸ್ಕೃತಿಕ ಸಂಜೆ, ಜಾನಪದ ಸಂಜೆ, ಮಕ್ಕಳ ಸಾಂಸ್ಕೃತಿಕ ಸಂಜೆ, ಸಂಗೀತ ಸಂಜೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ ಎಂದರು.
20ರಂದು ಸಂಜೆ 5:30 ಗಂಟೆಗೆ ಕವಿಸಂನ ಕುವೆಂಪು ವೇದಿಕೆಯಲ್ಲಿ ಚಲನಚಿತ್ರದ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಲಿದ್ದಾರೆ. ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಡಾ| ಶ್ರೀಪಾದ ಭಟ್ ನಿರ್ದೇಶನದಲ್ಲಿ ಉಡುಪಿಯ ಕೊಡವೂರಿನ ನೃತ್ಯ ನಿಕೇತನ ತಂಡವು ಚಿತ್ರಾ ನಾಟಕ ಪ್ರದರ್ಶನ ಮಾಡಲಿದೆ ಎಂದು ತಿಳಿಸಿದರು.
21ರಂದು ಡಾ| ದ.ರಾ. ಬೇಂದ್ರೆ ವೇದಿಕೆಯಲ್ಲಿ ಜರುಗುವ ನೃತ್ಯ ಸಂಜೆ ಕಾರ್ಯಕ್ರಮದಲ್ಲಿ ಡಾ| ಅಪ್ಪಗೆರೆ ತಿಮ್ಮರಾಜು, ಸುಜಾತಾ ರಾಜಗೋಪಾಲ ಆಗಮಿಸಲಿದ್ದಾರೆ. ಡಾ| ಎಸ್.ಎಂ. ಶಿವಪ್ರಸಾದ ಅಧ್ಯಕ್ಷತೆ ವಹಿಸಲಿದ್ದು, ಜೈ ಕಿಸಾನ್ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಹಾಗೂ ಸುಹಾಸಿನಿ ನಾರಾಯಣಕರ ಮತ್ತು ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 22ರಂದು ಡಾ| ಶಿವರಾಜ ಕಾರಂತ ವೇದಿಕೆಯಲ್ಲಿ ನಡೆಯುವ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಡಾ| ಮಹೇಶ ಹೊರಕೇರಿ ಆಗಮಿಸಲಿದ್ದಾರೆ. ಎಂ.ಡಿ. ಗೋಗೇರಿ ಅಧ್ಯಕ್ಷತೆ ವಹಿಸಲಿದ್ದು, ಎಸ್.ಪಿ. ಹೊಸಪೇಟಿ, ಎಸ್.ಆರ್. ಡೋಂಗ್ರೆ, ಸಂದೀಪರಾಜ ಹಿರೇವೆಂಕನಗೌಡರ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
23ರಂದು ಮಾಸ್ತಿ ವೆಂಕಟೇಶ ಅಯ್ಯಂಗಾರ ವೇದಿಕೆಯಲ್ಲಿ ಜರುಗುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಕವಿವಿ ಗಾಂಧಿ ಅಧ್ಯಯನ ಕೇಂದ್ರದ ಡೀನ್ ಡಾ| ಶಿವಾನಂದ ಶೆಟ್ಟರ ಆಗಮಿಸಲಿದ್ದು, ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ|ಮೃತ್ಯುಂಜಯ ಅಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ಸುಮಾ ರಾಜ್‌ಕುಮಾರ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಯಲಿದೆ.
24ರಂದು ಡಾ| ವಿ.ಕೃ. ಗೋಕಾಕ ವೇದಿಕೆಯಲ್ಲಿ ಜರುಗುವ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಡಾ| ವೈ.ಎಂ. ಯಾಕೊಳ್ಳಿ ಆಗಮಿಸಲಿದ್ದು, ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರವಾರದ ಪುರುಷೋತ್ತಮಗೌಡ ತಂಡದಿಂದ ಹಾಲಕ್ಕಿ ಗೌಡರ ಗುಮಟೆ ಪಾಂಗ್ ನೃತ್ಯ ಪ್ರಸ್ತುತ ಆಗಲಿದ್ದು, ಹುಬ್ಬಳ್ಳಿಯ ನಾಟ್ಯಭೈರವ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ ಜನಪದ ನೃತ್ಯ ವೈಭವ ಅನಾವರಣಗೊಳ್ಳಲಿದೆ. 25ರಂದು ಡಾ| ಯು.ಆರ್. ಅನಂತಮೂರ್ತಿ ವೇದಿಕೆಯಲ್ಲಿ ಜರುಗುವ ಮಕ್ಕಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿ.ಎನ್. ಕೀರ್ತಿವತಿ ಆಗಮಿಸಲಿದ್ದು, ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಮಕ್ಕಳಿಂದ ವೈವಿಧ್ಯಮ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
26ರಂದು ಡಾ| ಗಿರೀಶ ಕಾರ್ನಾಡ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ| ಹರ್ಷ ಡಂಬಳ ಆಗಮಿಸಲಿದ್ದಾರೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಜಿನದತ್ತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಗೀತ ಸಂಜೆಯಲ್ಲಿ ಗಾಯಿತ್ರಿ ಟೊಣಪಿ, ವೀಣಾ ಬಡಿಗೇರ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಸದಾನಂದ ಶಿವಳ್ಳಿ, ಸತೀಶ ತುರಮರಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.