ನಾಳೆ ಝೇಂಕರಿಸಲಿದೆ ಜಗ್ಗಲಿಗೆ, ರಣಹಲಗೆ ಸದ್ದು..
Team Udayavani, Mar 13, 2017, 2:44 PM IST
ಹುಬ್ಬಳ್ಳಿ: ಹೋಳಿ ಹಬ್ಬದ ನಿಮಿತ್ತ ಹುಬ್ಬಳ್ಳಿ ಹಲಗೆ ಹಬ್ಬ ಮಾ. 14ರಂದು ಮಧ್ಯಾಹ್ನ 3ಗಂಟೆಗೆ ನಗರದ ಮೂರುಸಾವಿರ ಮಠದ ಮೈದಾನದಲ್ಲಿ ನೆರವೇರಲಿದೆ ಎಂದು ಹಲಗಿ ಹಬ್ಬದ ಆಯೋಜಕ ಮಹೇಶ ಟೆಂಗಿನಕಾಯಿ ತಿಳಿಸಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸಂಸದ ಪ್ರಲ್ಹಾದ ಜೋಶಿ, ಮಹಾಪೌರ ಡಿ.ಕೆ.ಚವ್ಹಾಣ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ವಿಧಾನಸಭೆ ಸದಸ್ಯರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಾಜಿ ಸಚಿವರಾದ ಜಬ್ಟಾರಖಾನ ಹೊನ್ನಳ್ಳಿ, ಎ.ಎಂ. ಹಿಂಡಸಗೇರಿ, ನಿಗಮ- ಮಂಡಳಿ ಅಧ್ಯಕ್ಷರಾದ ಸದಾನಂದ ಡಂಗನವರ, ಅನ್ವರ ಮುಧೋಳ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮೊದಲಾದ ಗಣ್ಯರು ಆಗಮಿಸಲಿದ್ದಾರೆ.
ನಂತರ ಹಲಗಿ ಹಬ್ಬದ ಮೆರವಣಿಗೆ ಶ್ರೀಮಠದ ಮೈದಾನದಿಂದ ಆರಂಭವಾಗಿ ಎಸ್.ಟಿ. ಭಂಡಾರಿ ರಸ್ತೆ, ದಾಜಿಬಾನಪೇಟೆಯ ತುಳಜಾ ಭವಾನಿ ವೃತ್ತ, ಪೆಂಡಾರಗಲ್ಲಿ ಕ್ರಾಸ್, ಬೆಳಗಾವಿ ಗಲ್ಲಿ, ಜವಳಿ ಸಾಲ, ಸರಾಫಗಟ್ಟಿ ವೃತ್ತ, ಹಿರೇಪೇಟೆ, ಭೂಸಪೇಟೆ, ಬಮ್ಮಾಪೂರ ಓಣಿ, ನ್ಯೂ ಇಂಗ್ಲಿಷ್ ಸ್ಕೂಲ್ ವೃತ್ತ, ಮ್ಯಾದಾರ ಓಣಿ, ಕಂಬಾರ ಸಾಲ, ವೀರಭದ್ರೇಶ್ವರ ದೇವಸ್ಥಾನ ಮೂಲಕ ಹಳೇಹುಬ್ಬಳ್ಳಿ ದುರ್ಗದ ಬಯಲು ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ.
ಮಾರ್ಗದುದ್ದಕ್ಕೂ 10-12 ಸ್ಥಳಗಳಲ್ಲಿ ವಿವಿಧ ಸಮಾಜ-ಸಂಘಟನೆಗಳವರು ಮೆರವಣಿಗೆಕಾರರಿಗೆ ಉಪಹಾರ, ತಂಪು ಪಾನೀಯ ವಿತರಿಸುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ ಎಂದರು. ಈ ವರ್ಷದ ಹಲಗಿ ಹಬ್ಬದಲ್ಲಿ ಬಾಗಲಕೋಟೆಯ ಜನಪ್ರಿಯ ಜಗ್ಗಲಿಗೆ ಮೇಳ, ಸುಳ್ಳದ ಮಹಿಳೆಯರ ಡೊಳ್ಳಿನ ತಂಡ, ಗಂಗಾವತಿ, ಕೊಣ್ಣೂರ ತಂಡ, ಛಬ್ಬಿ, ಸುಳ್ಳ, ಪಾಳೆ, ತಾರಿಹಾಳ, ಬ್ಯಾಹಟ್ಟಿ, ಶಿವಳ್ಳಿ, ಸೂರಶೆಟ್ಟಿಕೊಪ್ಪ, ಭೋಗೆನಾಗರಕೊಪ್ಪ ಸೇರಿದಂತೆ 25 ಜಗ್ಗಲಿಗೆ ತಂಡಗಳು ಹಾಗೂ 200ಕ್ಕೂ ಅಧಿಕ ಜಗ್ಗಲಿಗೆ, ರಣಹಲಗೆ, ಹಲಗೆಗಳು ಪಾಲ್ಗೊಳ್ಳಲಿವೆ. ಕಳೆದ ಬಾರಿ 8-10 ತಂಡಗಳು ಭಾಗವಹಿಸಿದ್ದವು.
ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಹಾಗೂ ಯುವ ಜನಾಂಗಕ್ಕೆ ಹೋಳಿ ಹಬ್ಬದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಹಲಗೆ ಹಬ್ಬ ಆಯೋಜಿಸುತ್ತ ಬರಲಾಗುತ್ತಿದೆ. ಇದು ಜಾತ್ಯತೀತ ಹಾಗೂ ಪಕ್ಷಾತೀತವಾಗಿದೆ. ಇದಕ್ಕೆ ಎಲ್ಲ ಜನಾಂಗದವರು ಸಹಕಾರ ನೀಡುತ್ತ ಬರುತ್ತಿದ್ದಾರೆ ಎಂದರು. ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ರಾಮು ಮೂಲಗಿ, ಜಗದೀಶ ಬುಳ್ಳಾನವರ, ಮಲ್ಲಪ್ಪ ಶಿರಕೋಳ, ಪ್ರಕಾಶ ಶೃಂಗೇರಿ, ಹನಮಂತ ದೊಡ್ಡಮನಿ, ರವಿ ಕೊಪ್ಪದ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.