ವಿವಿಧ ರೈಲುಗಳ ಸಂಚಾರ ರದ್ದು-ಮಾರ್ಗ ಬದಲು
Team Udayavani, Nov 15, 2018, 6:35 AM IST
ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಭಾಗವಾಗಿ ನಾನ್ ಇಂಟರ್ ಲಾಕಿಂಗ್ ಕಾರ್ಯ ಹಿನ್ನೆಲೆಯಲ್ಲಿ ನ.16-27ರವರೆಗೆ ವಿವಿಧ ರೈಲುಗಳ ಸಂಚಾರ ಸಂಪೂರ್ಣ, ಭಾಗಶಃ ರದ್ದು, ಮಾರ್ಗ ಬದಲು ಹಾಗೂ ವೇಳಾಪಟ್ಟಿ ಪರಿಷ್ಕರಣೆ ಆಗಲಿದೆ.
ಮೈಸೂರು ಡಿವಿಜನ್‌ನ ಅರಸಿಕೆರೆ-ಆದಿಹಳ್ಳಿ-ಹೊನ್ನವಳ್ಳಿ-ತಿಪಟೂರು- ಕರಡಿ ರೈಲ್ವೆ ನಿಲ್ದಾಣಗಳ ಮಧ್ಯೆ ಟ್ರ್ಯಾಕ್ ಡಬ್ಲಿಂಗ್ ಮಾರ್ಗ ಹಿನ್ನೆಲೆಯಲ್ಲಿ, ನಾನ್ ಇಂಟರ್‌ಲಾಕಿಂಗ್ ಕಾರ್ಯ ಜರುಗಲಿದೆ.
ಸಂಪೂರ್ಣ ರದ್ದು: ನ.22ರಂದು ಯಶವಂತಪುರದಿಂದ ಹೊರಡಲಿದ್ದ ಯಶವಂತಪುರ-ಹರಿಹರ (16577) ರೈಲು; ನ.23ರಂದು ಹರಿಹರದಿಂದ ಹೊರಡುವ ಹರಿಹರ-ಯಶವಂತಪುರ (16578 )ರೈಲು; ನ.23 ರಿಂದ.26ರವರೆಗೆ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಅರಸಿಕೆರೆ ಪ್ಯಾಸೆಂಜರ್ (56274) ರೈಲು; ನ.24ರಿಂದ 27ರವರೆಗೆ ಅರಸಿಕೆರೆಯಿಂದ ಪ್ರಯಾಣ ಬೆಳೆಸಬೇಕಿದ್ದ
ಅರಸಿಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ (56273) ರೈಲು ಸೇವೆಯನ್ನು ರದ್ದುಪಡಿಸಲಾಗಿದೆ.
ನ.23ರಿಂದ ನ.26ರವರೆಗೆ ಪ್ರಯಾಣ ಬೆಳೆಸಬೇಕಿದ್ದ ಅರಸಿಕೆರೆ-ಮೈಸೂರು (56265/ 56266) ರೈಲು; ನ.23ರಿಂದ 27ರವರೆಗೆ ಅರಸಿಕೆರೆಯಿಂದ ಹೊರಡಲಿದ್ದ ಅರಸಿಕೆರೆ- ಮೈಸೂರು (56267) ರೈಲು; ನ.23ರಿಂದ 26ರವರೆಗೆ ಮೈಸೂರಿನಿಂದ ಪ್ರಯಾಣಿಸಲಿದ್ದ ಮೈಸೂರು-ಅರಸಿಕೆರೆ (56268) ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು: ನ.18ರಿಂದ 26ರವರೆಗೆ ಬೆಂಗಳೂರು ನಗರ-ಅರಸಿಕೆರೆ (56233) ರೈಲು ಸಂಚಾರವನ್ನು ಅಮ್ಮಸಂದ್ರ-ಅರಸಿಕೆರೆ ಮಧ್ಯೆ;ನ.19ರಿಂದ 27ರವರೆಗೆ ಅರಸಿಕೆರೆ-ಬೆಂಗಳೂರು ನಗರ (56224) ರೈಲು ಸಂಚಾರವನ್ನು ಅಮ್ಮಸಂದ್ರ-ಅರಸಿಕೆರೆ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.
ನ.21ರಿಂದ 26ರವರೆಗೆ ಚಿಕ್ಕಮಗಳೂರು- ಯಶವಂತಪುರ (56277/56278) ರೈಲು ಸಂಚಾರವನ್ನು ಕಡೂರು-ಯಶವಂತಪುರ ಮಧ್ಯೆ;ನ.19ರಿಂದ 26ರವರೆಗೆ ಹುಬ್ಬಳ್ಳಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ (17325/17326) ರೈಲು ಸಂಚಾರವನ್ನು ತುಮಕೂರು-ಬೀರೂರ ಮಧ್ಯೆ; ನ.24ರಂದು ತಾಳಗುಪ್ಪ-ಮೈಸೂರು ಪ್ಯಾಸೆಂಜರ್ (56275) ರೈಲು ಸಂಚಾರವನ್ನು ಬಿರೂರು- ಮೈಸೂರು ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.
ಮಾರ್ಗ ಬದಲಾವಣೆ: ನ.19ರಂದು ಯಶವಂತಪುರ-ಬರ್ಮಾರ ಎಕ್ಸ್‌ಪ್ರೆಸ್ (14805) ರೈಲು ನೆಲಮಂಗಲ, ಶ್ರವಣಬೆಳಗೊಳ, ಹಾಸನ,ಅರಸಿಕೆರೆ ಮಾರ್ಗದಲ್ಲಿ ಸಂಚರಿಸಲಿದ್ದು, ಮಾರ್ಗ ಮಧ್ಯೆಚಿಕ್ಕಬಾಣಾವರದಲ್ಲಿ ನಿಲುಗಡೆಗೊಳ್ಳುವುದು.
ತುಮಕೂರು ಮಾರ್ಗದಿಂದ ಬರುವ ಪ್ರಯಾಣಿಕರು ಚಿಕ್ಕಬಾಣಾವರ ಇಲ್ಲವೇ ಅರಸಿಕೆರೆಯಲ್ಲಿ ರೈಲು ಏರಬೇಕು. ರೈಲುಗಳ ನಿಲುಗಡೆ: ನ.19ರಿಂದ ನ.23ರವರೆಗೆ ಬೆಂಗಳೂರು ನಗರ-ಧಾರವಾಡ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (12725) ರೈಲು ಬಾಣಸಂದ್ರ ಹಾಗೂ ಅಮ್ಮಸಂದ್ರ ರೈಲ್ವೆ ನಿಲ್ದಾಣಗಳಲ್ಲಿ 20 ನಿಮಿಷ ನಿಲುಗಡೆಗೊಳ್ಳಲಿದೆ.
ನ.23ರಂದುತಿರುಚನಾಪಳ್ಳಿ- ಶ್ರೀ ಗಂಗಾನಗರ ಎಕ್ಸ್‌ಪ್ರೆಸ್ (22498) ರೈಲು ಬಾಣಸಂದ್ರ ರೈಲು ನಿಲ್ದಾಣದಲ್ಲಿ 40 ನಿಮಿಷ ನಿಲುಗಡೆಗೊಳ್ಳುವುದು. ನ.24ರಂದು ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (56269) ರೈಲು ಬಾಣಾವರ ನಿಲ್ದಾಣದಲ್ಲಿ 30 ನಿಮಿಷ ನಿಲುಗಡೆಗೊಂಡು ಪ್ರಯಾಣ ಮುಂದುವರಿಸುವುದು.
ಸಮಯ ಪರಿಷ್ಕರಣೆ
ನ.17ರಿಂದ ನ.19ರವರೆಗೆ ಶಿವಮೊಗ್ಗ-ಬೆಂಗಳೂರು ನಗರ (56228) ರೈಲು 120 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸುವುದು. ಅದೇ ರೀತಿ ನ.22ರಂದು 60 ನಿಮಿಷ ಹಾಗೂ ನ.27ರಂದು 80 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸಲಿದೆ. ನ.21ರಂದು ಬೆಂಗಳೂರು ನಗರ-ಹುಬ್ಬಳ್ಳಿ ಪ್ಯಾಸೆಂಜರ್ (56913) ರೈಲು 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸುವುದು. ನ.21ರಂದು ಮೈಸೂರು-ಅರಸಿಕೆರೆ ಪ್ಯಾಸೆಂಜರ್ (56266) ರೈಲು 60 ನಿಮಿಷ ತಡವಾಗಿ; ಅರಸಿಕೆರೆ-ಮೈಸೂರು ಪ್ಯಾಸೆಂಜರ್ (56265) ರೈಲು 60 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸುವುದು ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.