ಶ್ರಮಿಕ ರೈಲುಗಳಲ್ಲಿ 3.76ಲಕ್ಷ ವಲಸಿಗರ ಪ್ರಯಾಣ
Team Udayavani, Jun 29, 2020, 12:29 PM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದಿಂದ ಇಲ್ಲಿಯವರೆಗೆ 256 ಶ್ರಮಿಕ್ ರೈಲುಗಳ ಮೂಲಕ 3.76 ಲಕ್ಷ ವಲಸಿಗರನ್ನು ತವರು ರಾಜ್ಯಗಳಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಮೇ 4ರಿಂದ ಆರಂಭವಾದ ಶ್ರಮಿಕ್ ರೈಲುಗಳ ಮೂಲಕ ಮೊದಲ 13 ದಿನಗಳಲ್ಲಿ ಒಂದು ಲಕ್ಷ ಜನರು ಅವರ ರಾಜ್ಯಗಳಿಗೆ ತೆರಳಿದರೆ ನಂತರದ ಆರು ದಿನಗಳಲ್ಲಿ 2 ಲಕ್ಷ ಜನರು ಪ್ರಯಾಣಿಸಿದ್ದಾರೆ.
ರಾಜ್ಯದಿಂದ 248 ರೈಲುಗಳ ಮೂಲಕ 3.63 ಜನರುತಮ್ಮ ರಾಜ್ಯಗಳಿಗೆ ಹೋಗಿದ್ದಾರೆ. ಉಳಿದ 8 ರೈಲುಗಳು ತಮಿಳುನಾಡು ಹೊಸೂರು ನಿಲ್ದಾಣದಿಂದ 12,718 ಜನರು ಪ್ರಯಾಣ ಮಾಡಿದ್ದಾರೆ.ಬೆಂಗಳೂರು ವಿಭಾಗ 223 ಶ್ರಮಿಕ್ ರೈಲುಗಳು ಮೂಲಕ 3.28 ವಲಸಿಗರು, ಹುಬ್ಬಳ್ಳಿ ವಿಭಾಗದ 21 ರೈಲುಗಳಲ್ಲಿ 30,580 ಹಾಗೂ ಮೈಸೂರು ವಿಭಾಗದಿಂದ 12 ರೈಲುಗಳ ಮೂಲಕ 16,974 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ರಾಜ್ಯ ಸರಕಾರದ ಸಹಕಾರ ಹಾಗೂ ಬೇಡಿಕೆಯ ಮೇರೆಗೆ ಇಷ್ಟೊಂದು ವಲಸಿಗರನ್ನು ಅವರ ರಾಜ್ಯಗಳಿಗೆ ತಲುಪಿಸಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಅನುಸರಿಸಲಾಗಿದೆ. ಪ್ರಯಾಣಿಸುವ ವಲಸಿಗರ ಆರೋಗ್ಯ ತಪಾಸಣೆಯಿಂದ ಹಿಡಿದು ಆಹಾರ, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.