ಉದ್ಘಾಟನೆಗೆ ಸಿದ್ಧಗೊಂಡ ಟ್ರೀ ಪಾರ್ಕ್‌


Team Udayavani, Aug 12, 2018, 5:35 PM IST

12-agust-26.jpg

ಕೊಪ್ಪಳ: ಬರದನಾಡಿನಲ್ಲೊಂದು ಮೊಟ್ಟ ಮೊದಲ ಬಾರಿಗೆ ಅರಣ್ಯ ಇಲಾಖೆಯಿಂದ ಟ್ರೀ ಪಾರ್ಕ್‌ ಸಿದ್ಧಗೊಂಡಿದ್ದು, ಇನ್ನೇನು ಉದ್ಘಾಟನೆಗೆ ಕಾಯುತ್ತಿದೆ. ಸಾಲು ಮರದ ತಿಮ್ಮಕ್ಕನ ಹೆಸರಿನ ಈ ಪಾರ್ಕ್‌ನಲ್ಲಿ ಪರಿಸರ ಉಳಿಸಿ ಎನ್ನುವ ಜಗೃತಿ ಸಂದೇಶ, ವನ್ಯ ಜೀವಿಗಳ ಕಲಾಕೃತಿಗಳು ಜನರ ಕಣ್ಮನ ಸೆಳೆಯುತ್ತಿವೆ.

ಹೌದು, ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಯ್ದಿಟ್ಟ ಹಾಗೂ ಸಂರಕ್ಷಿತ ಅರಣ್ಯವಿದೆ. ಈ ಮೊದಲು ಸರ್ಕಾರ ಇರುವ ಅರಣ್ಯವನ್ನು ಉಳಿಸಿಕೊಂಡು ಹೋಗಲು ಹರಸಾಹಸ ಮಾಡುತ್ತಿತ್ತು. ಆದರೂ ಅರಣ್ಯ ಪ್ರದೇಶ ಅನ್ಯರ ಹಾವಳಿಗೆ ತುತ್ತಾಗಿ ಗಿಡಗಳೆಲ್ಲವೂ ನಾಶವಾಗುತ್ತಿದ್ದವು. ಇದನ್ನು ಅವಲೋಕಿಸಿ ಅರಣ್ಯ ಪ್ರದೇಶದಲ್ಲಿಯೇ ಪಾರ್ಕ್‌ ವ್ಯವಸ್ಥೆ ಮಾಡಲು ಮುಂದಾಗಿ ಟ್ರೀ ಪಾರ್ಕ್‌ ನಿರ್ಮಿಸಲು ಸಜ್ಜಾಗಿದೆ. 

ಕೊಪ್ಪಳ ತಾಲೂಕಿನ ಕಿರ್ಲೋಸ್ಕರ್‌ ಕಾರ್ಖಾನೆ ಸಮೀಪದಲ್ಲಿಯೇ 50 ಹೆಕ್ಟೇರ್‌ ಪ್ರದೇಶದಲ್ಲಿ ಟ್ರೀ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯು ಹಗಲಿರುಳು ಪಾರ್ಕ್‌ನಲ್ಲಿ ನಾನಾ ಬಗೆಯ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ವಿವಿಧ ಭಾಗದಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ. ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

ಪಾರ್ಕ್‌ನಲ್ಲಿ ವಿಶೇಷತೆ ಏನು?: ಈ ಪಾರ್ಕ್‌ನಲ್ಲಿ ಮರ ಬೆಳೆಸಿ ಎನ್ನುವ ಜಾಗೃತಿಯ ಸಂದೇಶ ಬೀರುವ ಶಾಲಾ ಮಕ್ಕಳ ವಿವಿಧ ಕಲಾಕೃತಿಗಳಿವೆ. ಶಾಲಾ ಮಕ್ಕಳು ಮರವನ್ನು ಕಡಿಯಬೇಡಿ ಎಂದು ಗಿಡವನ್ನಿಡಿದು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಮರ ಕಡಿದರೆ ಭವಿಷ್ಯದಲ್ಲಿ ಮನುಕಲದ ಪರಿಸ್ಥಿತಿ ಏನಾಗಲಿದೆ ಎನ್ನವು ಎಚ್ಚರಿಕೆಯನ್ನೂ ನೀಡಲಾಗಿದೆ. ಜೊತೆಗೆ ಜಿಂಕೆ, ಆನೆ, ಸಿಂಹ, ಅನೆಗೊಂಡ, ಕರಡಿ, ಮೊಲ ಸೇರಿದಂತೆ ನಾನಾ ಬಗೆಯ ವನ್ಯ ಜೀವಿಗಳ ಸಂತತಿ ಉಳಿಸುವ ಹಾಗೂ ಯುವ ಪೀಳಿಗೆಯ ಗಮನ ಸೆಳೆಯುವ ಕಲಾಕೃತಿಗಳನ್ನು ಇಡಲಾಗಿದೆ. ಅಲ್ಲದೇ, ವರ್ಷ ಪೂರ್ತಿ ಹಸಿರಾಗಿರುವ ನಾನಾ ಬಗೆಯ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ.

ಬರದ ನಾಡಿನಲ್ಲಿ ಹಸಿರು ವನ: ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶವಾಗಿದೆ. ಸತತ ಮಳೆಯ ಕೊರತೆಯಿಂದ ಹಸಿರು ಎನ್ನುವುದೇ ಜನರ ಕಣ್ಣಿಗೆ ಮರೆಯಾಗುತ್ತಿದೆ. ಇಂತಹ ನೆಲದಲ್ಲಿ ಹಸಿರು ಗಂಟೆ ಮೊಳಗಿಸಲು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ತರಲು ಸರ್ಕಾರವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅರಣ್ಯ ಇಲಾಖೆಯ ಮೂಲಕ ಟ್ರೀ ಪಾರ್ಕ್‌ ನಿರ್ಮಾಣಕ್ಕೆ ಸಜ್ಜಾಗಿದೆ. ಈ ಪಾರ್ಕಿಗೆ ಹೆಸರಾಂತ ಸಾಲು ಮರದ ತಿಮ್ಮಕ್ಕನ ಹೆಸರನ್ನಿಡಲು ಸರ್ಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿನ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಹಾಗೂ ಅರಣ್ಯ ಪ್ರದೇಶ ತೋರಿಸಲು ಅಂತಹ ಯಾವುದೇ ಸುವ್ಯವಸ್ಥಿತ ವನ್ಯಧಾಮವಿಲ್ಲ. ಅನ್ಯ ಜಿಲ್ಲೆಗಳಿಗೆ ಪ್ರವಾಸ ಬೆಳೆಸಿ ಮಕ್ಕಳಿಗೆ ಕಾಡಿನ ಚಿತ್ರಣ ತೋರಿಸಬೇಕಾಗುತ್ತಿದೆ. ಆದರೆ ಇನ್ಮುಂದೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಪಾರ್ಕ್‌ ನಿರ್ಮಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಿದೆ. ಬರದ ನಾಡಿನಲ್ಲೊಂದು ವನ್ಯಧಾನ ತೆಲೆ ಎತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಸುಮಾರು 50 ಹೆಕ್ಟೇರ್‌ ಪ್ರದೇಶದಲ್ಲಿ ಟ್ರೀ ಪಾರ್ಕ್‌ನ್ನು ನಾವು ನಿರ್ಮಿಸಿದ್ದು, ಇದೇ ಆ.15 ರಂದು ಅರಣ್ಯ ಇಲಾಖೆ ಸಚಿವರು ಉದ್ಘಾಟನೆ ಮಾಡಲಿದ್ದಾರೆ. ಪಾರ್ಕ್‌ನಲ್ಲಿ ಪರಿಸರ ಸಂರಕ್ಷಣೆ ಕುರಿತು ಮಕ್ಕಳ ಕಲಾಕೃತಿಗಳ ಮೂಲಕ ಜಾಗೃತಿಯ ಸಂದೇಶ ನೀಡುವ ವ್ಯವಸ್ಥೆ ಮಾಡಿದೆ. ಅಲ್ಲದೇ, ವನ್ಯಜೀವಿಗಳ ಕಲಾಕೃತಿಗಳನ್ನು ಇಡಲಾಗಿದೆ.
 ಎ.ಎಚ್‌. ಮುಲ್ಲಾ,
ವಲಯ ಅರಣ್ಯಾಧಿಕಾರಿ, ಕೊಪ್ಪಳ ವಿಭಾಗ

ದತ್ತು ಕಮ್ಮಾರ

ಟಾಪ್ ನ್ಯೂಸ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.