ಕೋಗಿಲಗೇರಿಯಲ್ಲಿ ಅತಿಕ್ರಮಣದ್ದೇ ಸದ್ದು!
22ರಂದು ಡಿಸಿ ಗ್ರಾಮವಾಸ್ತವ್ಯ,25 ಪ್ರಮುಖ ಅಂಶಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಜ್ಜು
Team Udayavani, Feb 17, 2021, 5:15 PM IST
ಧಾರವಾಡ: ಈ ಗ್ರಾಮದ ಕೆರೆ ಕಟ್ಟೆ ಒಡೆದು ಹೋಗಿ ಎರಡು ವರ್ಷವಾದರೂ ಇನ್ನೂ ದುರಸ್ತೆಯಾಗಿಲ್ಲ. ಸುತ್ತಲಿನಗ್ರಾಮಗಳ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಪೂರೈಸುವ ಶಾಲೆಯ ಜಾಗ ಅತಿಕ್ರಮಣಕ್ಕೆ ಒಳಗಾಗಿ ಸಮಸ್ಯೆ ನ್ಯಾಯಾಲಯದ ಮೆಟ್ಟಿಲೇರಿದೆ. ಕೆರೆಯಂಗಳ, ತೊರೆಗಳ ಮಡಿಲು, ಅರಣ್ಯಭೂಮಿ, ಕಂದಾಯ ಭೂಮಿಗೂ ಅತಿಕ್ರಮಣದ ನಂಟು ಬಿಟ್ಟಿಲ್ಲ.
ಈ ಗ್ರಾಮದ ಹೆಸರು ಕೋಗಿಲಗೇರಿ, ಆದರೆ ಕೋಗಿಲೆಗಳು ಗೂಡುಕಟ್ಟಲು ಇಲ್ಲಿ ಈಗ ಕುರುಚಲು ಕಾಡೇ ಇಲ್ಲ.ಫೆ.22ರಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲಅವರು ವಾಸ್ತವ್ಯ ಮಾಡಲಿರುವ ಅಳ್ನಾವರ ತಾಲೂಕಿನಕೋಗಿಲಗೇರಿ ಗ್ರಾಮದ ಪ್ರಸ್ತುತ ಚಿತ್ರಣ ಇದು.ಕಂದಾಯ ಇಲಾಖೆ ಯೋಜನೆಯನ್ವಯ ಅಂದುಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜಿಲ್ಲೆಯಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ವಾಸ್ತವ್ಯಹೂಡಲಿದ್ದು, ಸ್ಥಳೀಯ ಕಂದಾಯ ಸಮಸ್ಯೆಗಳು, ಸಾಮಾಜಿಕಪಿಂಚಣಿ ಯೋಜನೆಗಳ ಸಮಸ್ಯೆಗಳು, ಸರ್ಕಾರವೇ ನಿಗದಿ ಪಡಿಸಿರುವ ಒಟ್ಟು 25 ಪ್ರಮುಖ ಅಂಶಗಳ ಅನುಷ್ಠಾನಕ್ಕೆಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅರವಟ್ಟಿಗೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕೋಗಿಲಗೇರಿ ಗ್ರಾಮ 1800 ಜನಸಂಖ್ಯೆಯೊಂದಿದ್ದು, 3 ಜನ ಗ್ರಾಪಂ ಸದಸ್ಯರನ್ನು ಹೊಂದಿದೆ. ಆದರೆ ಕಳೆದ 10 ವರ್ಷಗಳಿಂದ ಗ್ರಾಪಂನಲ್ಲಿ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನದ ಅವಕಾಶ ಈ ಗ್ರಾಮದ ಸದಸ್ಯರಿಗೆ ಒಲಿದಿಲ್ಲ.
ಕೋಗಿಲಗೇರಿ ಸಮಸ್ಯೆಗಳೇನು? :
ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಸದ್ಯಕ್ಕೆ ಇರುವ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿವೆ. ಭತ್ತದ ಕಣಜ ಮತ್ತು ಹಿಂಗಾರಿನಲ್ಲಿ ದೇಶಿ ಧಾನ್ಯಗಳನ್ನು ಬೆಳೆಯುತ್ತಿದ್ದ ಗ್ರಾಮದಲ್ಲಿ ಇದೀಗ ಕಬ್ಬು ಏಕಚಕ್ರಾಧಿಪತ್ಯ ಸಾಧಿಸಿದ್ದು, ರೈತರಆರ್ಥಿಕ ಸ್ಥಿತಿ ತಕ್ಕಮಟ್ಟಿಗಿದೆ ಅಷ್ಟೇ. ಇನ್ನುಳಿದಂತೆ ಗ್ರಾಮದಲ್ಲಿಚಂದ್ರಪ್ಪ ಗೌಡರ ಕುಟುಂಬಸ್ಥರು ದಾನರೂಪದಲ್ಲಿ ನೀಡಿದಜಾಗೆ ಮತ್ತು ಶಾಲೆಯಲ್ಲಿಯೇ ಗ್ರಾಮದ ಎಲ್ಲಾ ಮಕ್ಕಳುಈ ವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಇತ್ತೀಚಿನವರ್ಷಗಳಲ್ಲಿ ಈ ಶಾಲೆಯ ಜಾಗೆ ಅತಿಕ್ರಮಣಕ್ಕೆ ಒಳಗಾಗಿದೆ ಎನ್ನುವ ಆರೋಪವಿದೆ. ಕಂದಾಯ ಇಲಾಖೆ ಪಡ ಜಮೀನು ಅಲ್ಲಲ್ಲಿ ಅತಿಕ್ರಮಣವಾಗಿರುವ ಕುರುಹುಗಳು ಗ್ರಾಮದಲ್ಲಿವೆ. ಗ್ರಾಮದ ಕೆರೆಯಂಗಳ, ಹಳ್ಳಗಳು, ತೊರೆ, ಕಂದಾಯ ಭೂಮಿ,ಅರಣ್ಯಭೂಮಿ ಸೇರಿದಂತೆ ಎಲ್ಲೆಲ್ಲಿ ನುಗ್ಗಲು ಸಾಧ್ಯವಿದೆಯೋ ಅಲ್ಲೆಲ್ಲ ಭೂಗಳ್ಳರು ಕೈಚಳಕ ತೋರಿಸಿಯಾಗಿದೆ.
ತಹಶೀಲ್ದಾರ್ ವಾಸ್ತವ್ಯ :
ಜಿಲ್ಲಾಧಿಕಾರಿ ವಾಸ್ತವ್ಯ ಹೂಡುವ ಕೋಗಿಲಗೇರಿಗ್ರಾಮ ಹೊರತು ಪಡಿಸಿ 6 ತಾಲೂಕಿನ ಗ್ರಾಮಗಳಲ್ಲಿ ಆಯಾ ತಹಶೀಲ್ದಾರ್‌ಗಳು ಫೆ.20 ರಂದೇ ಭೇಟಿನೀಡಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗೆಸ್ಪಂದಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಳ್ನಾವರತಹಶೀಲ್ದಾರ್ ಅಮರೇಶ ಪಮ್ಮಾರ ಜಿಲ್ಲಾಧಿಕಾರಿಜತೆ ಕೊಗಿಲಗೇರಿಯಲ್ಲಿರಲಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಹುಬ್ಬಳ್ಳಿ
ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ, ಕುಂದಗೋಳ ತಹಶೀಲ್ದಾರ್ ಬಸವರಾಜ ಮೆಳವಂಕಿ ತಾಲೂಕಿನ ಗುಡನಕಟ್ಟಿ, ನವಲಗುಂದ ತಹಶೀಲ್ದಾರ್ ನವೀನಹುಲ್ಲೂರ ತಾಲೂಕಿನ ಕುಮಾರಗೊಪ್ಪ, ಅಣ್ಣಿಗೇರಿತಹಶೀಲ್ದಾರ್ ಕೊಟ್ರೇಶ ಗಾಳಿ ಅವರು ತಾಲೂಕಿನತುಪ್ಪದಕುರಟ್ಟಿ, ಧಾರವಾಡ ತಹಶೀಲ್ದಾರ್‌ಸಂತೋಷ ಬಿರಾದಾರ ತಾಲೂಕಿನ ಕಲಕೇರಿ, ಕಲಘಟಗಿ ತಹಶೀಲ್ದಾರ್ ಅಶೋಕ ಶಿಗ್ಗಾಂವಿಶಿಗ್ಗನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆವರೆಗೆ ವಾಸ್ತವ್ಯ ಮಾಡಲಿದ್ದಾರೆ. ಅಲ್ಲದೇ ಸರ್ಕಾರ ನಿಗದಿ ಪಡಿಸಿದ 25 ಪ್ರಮುಖಅಂಶಗಳನ್ನು ಪರಿಗಣಿಸಿ ಹಳ್ಳಿಗರಿಗೆ ಸ್ಪಂದಿಸುವಂತೆಎಲ್ಲಾ ತಾಲೂಕು ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.
ಸಮಸ್ಯೆಗಳ ಸರಮಾಲೆ :
ಅಧಿಕಾರಗಳು ವಾಸ್ತವ್ಯ ಮಾಡುವ ಎಲ್ಲಾ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಶುದ್ಧ ಕುಡಿವ ನೀರಿನ ಸಾಮಾನ್ಯ ಸಮಸ್ಯೆ ಇದ್ದು, ಸರ್ಕಾರಿ ಜಾಗ ಅತಿಕ್ರಮಣವಾಗಿರುವುದು ಗೋಚರಿಸುತ್ತಿದೆ. ಧಾರವಾಡ ತಾಲೂಕಿನ ಕಲಕೇರಿ ಗ್ರಾಮಸ್ಥರಿಗೆ ಅಳ್ನಾವರ ರಸ್ತೆಗೆ ಸಂಪರ್ಕ ಕಲ್ಪಿಸುವ 6 ಕಿಮೀ ರಸ್ತೆ ಹಾಗೂ ಅರಣ್ಯ ಇಲಾಖೆ ನಾಕಾ ಮೂಲಕ ಗೋವಾರ ರಸ್ತೆ ಸಂಪರ್ಕಿಸುವ 3 ಕಿಮೀ ರಸ್ತೆ ಅಭಿವೃದ್ಧಿ ದಶಕಗಳಿಂದ ಹಾಗೆ ಉಳಿದಿದೆ. ಇದೀಗ ರೈತರು ಕಬ್ಬು ಸಾಗಾಣಿಕೆಗೆ ಪ್ರತಿವರ್ಷ ಹರಸಾಹಸ ಪಡಬೇಕಿದೆ. ಈ ರಸ್ತೆಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಇದಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಂದಾಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು :
ಗ್ರಾಮವಾಸ್ತವ್ಯ ಕಾರ್ಯಕ್ರಮ ಸರ್ಕಾರದ ಕಂದಾಯ ಇಲಾಖೆಯಿಂದಲೇ ನಡೆಯುತ್ತಿರುವುದರಿಂದ ಹೆಚ್ಚಾಗಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗೆ ಸರ್ಕಾರ ಸೂಚಿಸಿದೆ. ಹೀಗಾಗಿ ಅಂದು ಬೆಳಗ್ಗೆ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿ ಪರಿಹರಿಸುವ ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಲಾಗುತ್ತಿದೆ. ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಪೋತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸುವುದು. ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು, ಬಿಟ್ಟು ಹೋದ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಆದೇಶ ನೀಡಲಿದ್ದಾರೆ.
ನಮ್ಮೂರು ಕಾಡಿನ ಸೆರಗಿನಲ್ಲಿದ್ದು, ಧಾರವಾಡ ಮತ್ತು ಅಳ್ನಾವರ ಸಂಪರ್ಕಿಸುವ ರಸ್ತೆಗಳೇ ಸರಿಯಾಗಿ ಅಭಿವೃದ್ಧಿಯಾಗಿಲ್ಲ. ಜಿಲ್ಲಾಧಿಕಾರಿಗಳು ಈ ಬಾರಿಯಾದರೂ ಕಲಕೇರಿ-ಹೊನ್ನಾಪುರ ಮತ್ತು ಕಲಕೇರಿ ನಾಕಾ ಮೂಲಕ ಗೋವಾ ರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸಬೇಕು. –ಎನ್.ಎಸ್. ಬಾಂಗಡಿ,ಕಲಕೇರಿ ಗ್ರಾಮಸ್ಥ
ವಿನಯ್ ಕುಲಕರ್ಣಿ ಅವರು ಶಾಸಕರಾಗಿದ್ದಾಗ ನಿರ್ಮಿಸಿದ್ದ ಸಣ್ಣ ಕೆರೆ ಒಡೆದು ಹೋಗಿದೆ. ಅದನ್ನು ಮರಳಿ ನಿರ್ಮಿಸಬೇಕಿದೆ. 13 ಎಕರೆ ಕೆರೆ ಕೋಡಿ ಒಡೆದಿದ್ದು ಅದನ್ನು ಮರಳಿ ದುರಸ್ತಿ ಮಾಡಿಸಿಯೇ ಇಲ್ಲ. ಮಳೆಗಾಲದಲ್ಲಿ ಮತ್ತೆ ಮಳೆ ಬಂದರೆ ಇನ್ನಷ್ಟು ತೊಂದರೆಯಾಗಲಿದೆ. -ಕಲ್ಮೇಶ ಬಡಿಗೇರ, ಗ್ರಾಪಂ ಮಾಜಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.