![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 13, 2019, 5:03 PM IST
ನವಲಗುಂದ: ಪಟ್ಟಣದ ಕೆವಿಜಿ ಬ್ಯಾಂಕ್ ಮುಂದೆ ಕಾಯುತ್ತಿರುವ ಜನರು.
ನವಲಗುಂದ: ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಬೇಕಾಗಿದ್ದು, ಅದನ್ನು ಪಡೆಯಲು, ತಿದ್ದುಪಡಿ ಮಾಡಿಸಿಕೊಳ್ಳಲು ಇರುವ ವ್ಯವಸ್ಥೆ ಹೈರಾಣಾಗಿಸಿದೆ. ದಿನಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಡಿಜಿಟಲ್ ಯುಗದಲ್ಲಿ ಇಂದಿಗೂ ಸಾಧ್ಯವಾಗದಿರುವುದು ತಾಲೂಕಿನ ನೆರೆ ಪೀಡಿತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದ ಕೆವಿಜಿ ಬ್ಯಾಂಕ್ ಮುಂದೆ ನೂರಾರು ಜನ ಆಧಾರ ಕಾರ್ಡ್ ತಿದ್ದುಪಡಿ, ಇತರೆ ಕೆಲಸಕ್ಕಾಗಿ ರವಿವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು.
ಮೂರು ಕೇಂದ್ರಗಳು: ತಾಲೂಕಿನ ವ್ಯಾಪ್ತಿಯಲ್ಲಿ ಮೂರು ಆಧಾರ್ ಕೇಂದ್ರಗಳು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಎರಡು ಕಡೆ ಅಂದರೆ ಕೆವಿಜಿ ಬ್ಯಾಂಕ್‌ನಲ್ಲಿ ಹಾಗೂ ಎಸ್‌ಬಿಎಂ(ಎಸ್‌ಬಿಐ)ನಲ್ಲಿ ಖಾಸಗಿಯವರು ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೊಂದು ಕೇಂದ್ರ ಸ್ಥಳೀಯ ಅಂಚೆ ಕಚೇರಿಯಲ್ಲಿದೆ.
ಅಂಚೆ ಕಚೇರಿಯ ಕೇಂದ್ರದಲ್ಲಿ ಕಂಪ್ಯೂಟರ್ ಸಿಬ್ಬಂದಿ ಇಲ್ಲ, ಆಧಾರ್ ಕಾರ್ಡ್ ಮಾಡುವುದಿಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ. ಇನ್ನೆರಡು ಆಧಾರ್ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಟೋಕನ್ ನೀಡಿ ನಿಗದಿತ ದಿನಾಂಕದಂದು ಆಗಮಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಜನರು ಅಲೆದಾಡುವಂತಾಗಿದೆ.
ಪ್ರಸ್ತುತ ನೆರೆಯಿಂದ ಹಲವು ಗ್ರಾಮಗಳು ಪೀಡಿತವಾಗಿದ್ದು, ಜನರು ಮನೆ-ಜಮೀನು ಪರಿಸ್ಥಿತಿ ಸರಿಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೇ ಮೊರಬ, ಬೆಳವಟಗಿ ಇತರೆ ಗ್ರಾಮದವರು ತಮ್ಮ ಆಧಾರ ಕಾರ್ಡ್ ತಿದ್ದುಪಡಿಗಾಗಿ ಒಂದು ದಿನ ಮುಂಚಿತವಾಗಿ ಗ್ರಾಮದಿಂದ ಬಂದು ಸರದಿ ಸಾಲಿನಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ತಿಂಗಳೇ ಬೇಕಾದೀತು: ನೆರೆಹಾವಳಿಯಿಂದ ಮನೆಗಳಲ್ಲಿ ನೀರು ಹೋಗಿ ತಮ್ಮ ಕಾಗದ ಪತ್ರಗಳು ಜಖಂಗೊಂಡಿರುವವರು ಸರಕಾರಿ ಸವಲತ್ತು ಪಡೆದುಕೊಳ್ಳುವುದು ಕಷ್ಟದ ಕೆಲಸವಾಗುತ್ತದೆ. ಪ್ರವಾಹದಲ್ಲಿ ರೇಶನ್ ಕಾರ್ಡ್, ಆಧಾರ ಕಾರ್ಡ್, ಓಟಿನ ಕಾರ್ಡ್ ಇತರೆ ಕಾಗದಪತ್ರಗಳನ್ನು ಕಳೆದುಕೊಂಡಿದ್ದರೆ ಅವುಗಳಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ತಾಲೂಕಾಡಳಿತ ಇತ್ತ ಗಮನ ಹರಿಸಬೇಕಿದೆ. ಆಧಾರ ಕಾರ್ಡ್ ತಿದ್ದುಪಡಿ, ಇನ್ನಿತರ ಕಾಗದಪತ್ರಗಳನ್ನು ಜನರಿಗೆ ಪಡೆಯುವಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.
ಆಧಾರ ಕಾರ್ಡ್ ತಿದ್ದುಪಡಿ ಮಾಡೂದು ದೊಡ್ಡ ತೊಂದರೆ ಇದೆ. ಹೊಲ, ಮನೆ ಕೆಲಸ ಬಿಟ್ಟು ಇದಕ್ಕ ನಿಂದಿರಬೇಕು. ಇದಕ್ಕ ಬ್ಯಾರಿ ಪರಿಹಾರ ಇಲ್ಲನ್ರಿ ಸಾಕಾಗೈತ್ರಿಪ್ಪಾ. ಎಲ್ಲಾ ಆನ್‌ಲೈನ್ ಅಂತಾರಾ, ಬೆಳಗ್ಗೆ 5ಕ್ಕೆ ಬಂದು ಕಾಯೋದು ತಪ್ಪುದಿಲ್ಲ.•ಸುರೇಶ ಅಣ್ಣಿಗೇರಿ, ನವಲಗುಂದ ನಿವಾಸಿ
ನಮ್ಮ ಗ್ರಾಮಕ್ಕೆ ಪ್ರವಾಹ ಬಂದು ಪಟ್ಟಣಕ್ಕೆ ಬರಲು ರಸ್ತೆ ಕೆಟ್ಟಿದೆ. ಇನಾಂಹೊಂಗಲದ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬೆಳಗ್ಗೆ 5ಕ್ಕೆ ಬಂದಿದ್ದೆ. ಬ್ಯಾಂಕ್‌ನವರು ಟೋಕನ್ ನೀಡಿದ ಮೇಲೆ ಮತ್ತೂಮ್ಮೆ ಬಂದು ನಮ್ಮ ಆಧಾರ ಕಾರ್ಡ್ ತಿದ್ದುಪಡಿ ಮಾಡಿಸಬೇಕು. ಈ ವ್ಯವಸ್ಥೆಯಿಂದ ಬಹಳ ಬೇಸರವಾಗಿದೆ. ಎಲ್ಲದಕ್ಕೂ ಆಧಾರ ಕಾರ್ಡ್ ಕಡ್ಡಾಯವಾಗಿದ್ದರಿಂದ ಯಾವಾಗ ಹೇಳುತ್ತಾರೋ ಆಗ ಮತ್ತೆ ಅಲೆದಾಡಬೇಕಿದೆ.•ನಾಗಪ್ಪ ಹದ್ದಣ್ಣವರ, ಮೊರಬ ಗ್ರಾಮಸ್ಥ
•ಪುಂಡಲೀಕ ಮುಧೋಳೆ
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.