ದೇಶಪಾಂಡೆ ಪ್ರತಿಷ್ಠಾನದಿಂದ ಉ.ಕ.ದಲ್ಲಿ ಬದಲಾವಣೆ ಪರ್ವ
Team Udayavani, Jan 26, 2017, 12:39 PM IST
ಹುಬ್ಬಳ್ಳಿ: ಉದ್ಯಮಕ್ಕೆ ಉತ್ತೇಜನ ಜತೆಗೆ ಸಾಮಾಜಿಕ ಸೇವೆಗಳೊಂದಿಗೆ ಉತ್ತರ ಕರ್ನಾಟಕದಲ್ಲಿ ಬದಲಾವಣೆ ಪರ್ವಕ್ಕೆ ದೇಶಪಾಂಡೆ ಪ್ರತಿಷ್ಠಾನ ಮಹತ್ವದ ಹೆಜ್ಜೆ ಇರಿಸಿದ್ದು, ಕಳೆದ ಹತ್ತು ವರ್ಷಗಳಲ್ಲಿ ಈ ಯತ್ನದ ಫಲ ದೊರೆಯತೊಡಗಿದೆ ಎಂದು ವಿಧಾನಸಭೆಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ದೇಶಪಾಂಡೆ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಸಣ್ಣ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿ ಹಾಗೂ ಜನರ ಮನೋಭಾವ ಬದಲಾವಣೆ ನಿಟ್ಟಿನಲ್ಲಿ ಡಾ| ಗುರುರಾಜ ದೇಶಪಾಂಡೆ ಅವರು ಹೊಂದಿರುವ ಕನಸುಗಳು ಹಂತ-ಹಂತವಾಗಿ ನನಸಾಗತೊಡಗಿವೆ. ಸಣ್ಣ-ಸಣ್ಣಉದ್ಯಮಿಗಳಿಗೆ ಉತ್ತೇಜನ ಮೂಲಕ ಉದ್ಯಮ ವಲಯ ವೃದ್ಧಿಗೆ ಪ್ರತಿಷ್ಠಾನ ಮುಂದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಕೌಶಲ ಅಭಿವೃದ್ಧಿ ಹಾಗೂ ನವೋದ್ಯಮಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ಡಾ| ದೇಶಪಾಂಡೆಯವರು ಕೆಲ ವರ್ಷಗಳ ಹಿಂದೆಯೇ ಈ ಕಾರ್ಯ ಕೈಗೊಂಡಿದ್ದಾರೆ. ಕೌಶಲ ಅಭಿವೃದ್ಧಿ ಹಾಗೂ ಇನ್‌ಕುಬೇಷನ್ ಕೇಂದ್ರ ಆರಂಭಿಸಿದ್ದಾರೆ. ಕೃಷಿ ಕ್ಷೇತ್ರಕ್ಕೂ ಮಹತ್ವ ನೀಡಿದೆ ಎಂದರು.
ಮೌನ ಕ್ರಾಂತಿ: ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶಪಾಂಡೆ ಪ್ರತಿಷ್ಠಾನ ಈ ಭಾಗದ ಅಭಿವೃದ್ಧಿ, ಕೌಶಲ ತರಬೇತಿ, ನವೋದ್ಯಮ ದೃಷ್ಟಿಯಿಂದ ಮೌನಕ್ರಾಂತಿಗೆ ಮುಂದಾಗಿದೆ ಎಂದರು. ದೇಶದ ಒಟ್ಟು ಆಂತರಿಕ ಬೆಳವಣಿಗೆ ದರದಲ್ಲಿ ಕೈಗಾರಿಕಾ ವಲಯದ ಪಾಲಿನಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮದ ಪಾಲು ಶೇ.45ರಷ್ಟು ಆಗಿದ್ದರೆ, ರಫ್ತು ವಹಿವಾಟಿನಲ್ಲಿ ಶೇ.45ರಷ್ಟು ಪಾಲು ಹೊಂದಿದೆ.
ಇಂತಹ ಸಣ್ಣ ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಕಾರ್ಯವನ್ನು ದೇಶಪಾಂಡೆ ಪ್ರತಿಷ್ಠಾನ ಮಾಡುತ್ತಿದೆ ಎಂದರು. ಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಮಾತನಾಡಿ, 40 ವರ್ಷದ ಹಿಂದೆ ನಾನು ಒಬ್ಬ ನವೋದ್ಯಮಿಯಾಗಿದ್ದೆ. ಇಂದು ಎಂಬಿಎ ಪದವೀಧರರು ಉದ್ಯಮ ಕೌಶಲ ಇದೆ ಎಂದು ಹೇಳುತ್ತಿದ್ದು, ಉದ್ಯಮ ಯೋಜನೆಗೆ ಮುಂದಾಗಿ ಎಂದರೆ ಅದು ಕೊಡಿ, ಇದು ಕೊಡಿ ಎಂದು ಹೇಳುತ್ತಾರೆ.
ಅವರಿಗೆ ನೋವು ಸಹಿಸುವ ಶಕ್ತಿ ಅವರಿಗಿಲ್ಲ. ಆದರೆ, ಸಣ್ಣ-ಪುಟ್ಟ ಉದ್ಯಮದಾರರು ಇರುವ ಸಂಪನ್ಮೂಲದಲ್ಲೇ, ಎದುರಾಗುವ ನೋವು ನುಂಗಿಕೊಂಡು ಉದ್ಯಮ ಕಟ್ಟುತ್ತಾರೆ. ಅವರಿಗೆ ಉತ್ತೇಜನ ನೀಡಿಕೆಗೆ ಪ್ರತಿಷ್ಠಾನ ಮುಂದಾಗಿದೆ ಎಂದರು. ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಇಂದ್ರನಿಲ್ ಭಾಂಜಾ ಮಾತನಾಡಿ, ನವೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಎಸ್‌ಬಿಐ ಗೋಕುಲರಸ್ತೆಯಲ್ಲಿ ನೂತನ ಶಾಖೆ ಆರಂಭಿಸಿದೆ.
ಇಲ್ಲಿ ಮಾರ್ಗದರ್ಶನ, ಆರ್ಥಿಕ ನೆರವು ಇನ್ನಿತರ ಸಹಕಾರಗಳ ಮಾಹಿತಿ ಲಭ್ಯವಾಗುತ್ತದೆ ಎಂದರು. ವಿಜಯಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಯಳ್ಳೂರ ಮಾತನಾಡಿದರು. ದೇಶಪಾಂಡೆ ಪ್ರತಿಷ್ಠಾನದ ಜಯಶ್ರೀ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ಡಾ| ನೀಲಂ ಮಹೇಶ್ವರಿ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ನವೋದ್ಯಮಿಗಳಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. ನವೋದ್ಯಮ ಸಾಧಕರು, ಮಾರ್ಗದರ್ಶಕರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.