ತೆರೆಯದ ಮುಚ್ಚು ಹರಾಜು ಕಟ್ಟೆ
Team Udayavani, Jan 12, 2020, 10:29 AM IST
ಧಾರವಾಡ: ಇಲ್ಲಿನ ಎಪಿಎಂಸಿ ವ್ಯಾಪ್ತಿಯ ಮಾಳಾಪುರ ಶಹರ ಜಾನುವಾರುಗಳ ಮಾರುಕಟ್ಟೆ ಪ್ರಾಂಗಣದಲ್ಲಿ ಲಕ್ಷಾಂತರ ಹಣ ವ್ಯಯಿಸಿ ಅಭಿವೃದ್ಧಿ ಕಾರ್ಯಗಳೇನೋ ಆಗಿವೆ. ಆದರೆ ಜನಬಳಕೆಗೆ ಮಾತ್ರ ಇನ್ನೂ ಮರೀಚಿಕೆಯಾಗಿದೆ. 2-3 ದಶಕದ ಇತಿಹಾಸ ಹೊಂದಿರುವ ಒಟ್ಟು 11 ಎಕರೆ 23 ಗುಂಟೆ ವ್ಯಾಪ್ತಿಯ ಈ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ಜಾನುವಾರು ಹರಾಜು ಮಾರುಕಟ್ಟೆ ನಡೆಯುತ್ತಾ ಬಂದಿದೆ.
ಮಳೆ-ಬಿಸಿಲು-ಚಳಿ ಅನ್ನದೇ ವ್ಯಾಪಾರ ಸಾಗಿ ಬಂದಿದ್ದು, ಇದೀಗ ಪರಿಸ್ಥಿತಿ ಬದಲಾಗಿದೆ. ಬಿಸಿಲು-ಮಳೆಯಿಂದ ರಕ್ಷಣೆ ಪಡೆಯಲು 200 ಜಾನುವಾರು ಕಟ್ಟಲು ಮುಚ್ಚು ಹರಾಜು ಕಟ್ಟೆ ನಿರ್ಮಾಣ ಆಗಿದೆ. ಅದರ ಪಕ್ಕದಲ್ಲಿಯೇ ವಾಹನಗಳಿಂದ ಜಾನುವಾರು ಇಳಿಸಲು ಹಾಗೂ ದನಕ್ಕೆ ಕುಡಿಯಲು ನೀರಿನ ತೊಟ್ಟಿಯ ಜೊತೆಗೆ ರೈತರ ಅನುಕೂಲಕ್ಕಾಗಿ ಶೌಚಾಲಯ ಕಟ್ಟಲಾಗಿದೆ. ಇಷ್ಟೆಲ್ಲಾ ನಿರ್ಮಾಣ ಮಾಡಿದ್ದರೂ ಇವೆಲ್ಲವಕ್ಕೂ ಉದ್ಘಾಟನೆ ಭಾಗ್ಯ ಲಭ್ಯವಾಗದೇ ರೈತಾಪಿ ಸಮುದಾಯಕ್ಕೆ ಪ್ರಯೋಜನವಿಲ್ಲದಂತಾಗಿದೆ.
ಸೌಕರ್ಯಗಳ ಕೊರತೆ: ಮಾರುಕಟ್ಟೆಗೆ ಬೇರೆ-ಬೇರೆ ಜಿಲ್ಲೆಗಳಿಂದ ಅಷ್ಟೇ ಅಲ್ಲದೇ ಅಕ್ಕ-ಪಕ್ಕದ ರಾಜ್ಯಗಳಿಂದಲೂ ಜಾನುವಾರುಗಳು ಬರುತ್ತವೆ. ಬೇರೆ ರಾಜ್ಯದವರೂ ದನ ಖರೀದಿಸಲು ಇಲ್ಲಿ ಬರುತ್ತಾರೆ. ಆದರೆ ಮೂಲಸೌಕರ್ಯಗಳಿಲ್ಲದೇ ಸೊರಗಿರುವ ಈ ಮಾರುಕಟ್ಟೆಯಲ್ಲಿ ದನಗಳನ್ನು ಕಟ್ಟಲು ಕಲ್ಲು ಹೂತಿದ್ದು, ಒಂದಿಷ್ಟು ಕಡೆ ಕಲ್ಲುಗಳೇ ಇಲ್ಲದ ಕಾರಣ ರೈತರೇ ತಾವೇ ಕಲ್ಲು ತಂದಿಟ್ಟು ದನಗಳನ್ನು ಕಟ್ಟುವ ಪರಿಸ್ಥಿತಿ ಇದೆ. ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿದ್ದ ಮರಗಳನ್ನು ಕಡಿದು ಹಾಕಿದ್ದು, ನೆರಳಿಲ್ಲದ ಕಾರಣ ರೈತರು ಬಿಸಿಲಿನಲ್ಲಿಯೇ ವ್ಯಾಪಾರ ಮಾಡುವಂತಾಗಿದೆ. ರೈತರ ದಾಹ ನೀಗಿಸಲು ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.
ಮುಕ್ತವಾಗಲಿ ಕಟ್ಟೆ: ವಿನಯ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಮುಚ್ಚು ಹರಾಜು ಕಟ್ಟೆಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ನಬಾರ್ಡ್ ಸಂಸ್ಥೆಯ ಡಬ್ಲೂಐಎಫ್ 2013-14ನೇ ಯೋಜನೆಯಡಿ 1.38 ಕೋಟಿ ವೆಚ್ಚದಲ್ಲಿ ಮಾಳಾಪುರ ಶಹರ ಕ್ಯಾಟಲ್ ಮಾರುಕಟ್ಟೆ ಪ್ರಾಂಗಣದಲ್ಲಿ ಮುಚ್ಚು ಹರಾಜು ಕಟ್ಟೆ ನಿರ್ಮಿಸಲಾಗಿದ್ದು, ಈ ಕಟ್ಟೆಯೊಳಗೆ ದನಗಳಿಗೆ ಮೇವು ಹಾಕಲು ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲಿಯೇ ಜಾನುವಾರುಗಳಿಗೆ ನೀರು ಕುಡಿಸಲು ತೊಟ್ಟಿ ನಿರ್ಮಾಣ ಆಗಿದ್ದು, ಆದರೆ ಆ ತೊಟ್ಟಿಯಲ್ಲಿ ನೀರೇ ಇಲ್ಲ. ಶೌಚಾಲಯ ನಿರ್ಮಾಣ ಮಾಡಿದ್ದರೂ ಬಾಗಿಲು ಹಾಕಿರುವ ಕಾರಣ ಅದರ ಪಕ್ಕದಲ್ಲಿಯೇ ರೈತರು ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಈಗಲೂ ರೈತರು ಪ್ರಾಂಗಣದ ಹೊರ ಆವರಣದಲ್ಲಿಯೇ ವ್ಯಾಪಾರ ಮುಂದುವರಿಸಿದ್ದಾರೆ. ಆದಷ್ಟು ಬೇಗ ಈ ಹರಾಜು ಕಟ್ಟೆ ಬಳಕೆಗೆ ಮುಕ್ತವಾಗಬೇಕೆಂಬುದು ರೈತರು ಹಾಗೂ ದಲ್ಲಾಳಿಗಳ ಮನವಿಯಾಗಿದೆ.
ಕುರಿ ಮಾರುಕಟ್ಟೆ ಆಧುನೀಕರಣ: ಮಾಳಾಪುರ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದಂತೆ ಕುರಿ ಮತ್ತು ಮೇಕೆಗಳ ಮಾರುಕಟ್ಟೆ ಆಧುನೀಕರಣ ಮಾಡುವ 10 ಲಕ್ಷ ರೂ.ಕಾಮಗಾರಿಗೆ ಅನುಮೋದನೆ ಲಭಿಸಿದೆ. ಅದಕ್ಕಾಗಿ ಜಾಗವನ್ನೂ ಮೀಸಲಿಟ್ಟು,ನಿರ್ಮಾಣ ಜವಾಬ್ದಾರಿ ಹೊತ್ತಿರುವ ಲ್ಯಾಂಡ್ ಆರ್ಮಿಯವರು ಬಂದು ಜಾಗ ಹಸ್ತಾಂತರ ಮಾಡಿಕೊಂಡು ಕಾಮಗಾರಿಗೆ ಚಾಲನೆ ಕೊಡಬೇಕಿದೆ. ಈ ಮಾರುಕಟ್ಟೆಯಲ್ಲಿ ಕುರಿಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ,
ತೂಕ ಮಾಡುವ ಯಂತ್ರ, ನೀರು ಕುಡಿಸಲು ತೊಟ್ಟಿ ಸೇರಿದಂತೆ ಇನ್ನಿತರ ಸೌಕರ್ಯಗಳು ದೊರೆಯಲಿವೆ ಎಂದು ಧಾರವಾಡ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಎಸ್.ಎಂ. ಮನ್ನೂರ “ಉದಯವಾಣಿ’ಗೆ ತಿಳಿಸಿದರು. ಕುರಿ ಮಾರುಕಟ್ಟೆ ಆಧುನೀಕರಣಕ್ಕೆ ಎಪಿಎಂಸಿ ಜಾಗ ನಿಗದಿ ಮಾಡಿ ನಾಲ್ಕೈದು ತಿಂಗಳಾದರೂ ಲ್ಯಾಂಡ್ ಆರ್ಮಿಯವರು ಬಂದು ಜಾಗ ಹಸ್ತಾಂತರ ಮಾಡಿಕೊಂಡು ಕಾಮಗಾರಿ ಚಾಲನೆ ಆರಂಭಿಸಿಲ್ಲ. ಈ ಭಾಗದ ಶಾಸಕರು ಇತ್ತ ಲಕ್ಷéವಹಿಸಿ ಈ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜೊತೆಗೆ ನಿರ್ಮಾಣ ಆಗಿರುವ ನಾಲ್ಕು ಮುಚ್ಚು ಹರಾಜು ಕಟ್ಟೆಗಳನ್ನು ರೈತರಿಗೆ ಮುಕ್ತಗೊಳಿಸುವ ಕಾರ್ಯ ಮಾಡಬೇಕಿದೆ.
ಎಲೆ ವ್ಯಾಪಾರವೂ ಆರಂಭವಾಗಲಿ : ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹೋಲ್‌ಸೇಲ್ ಎಲೆ ವ್ಯಾಪಾರಕ್ಕಾಗಿಯೇ 2017-18ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂದಾಜು 55 ಲಕ್ಷ ರೂ.ಗಳಲ್ಲಿ ಮೂರು ಮುಚ್ಚು ಹರಾಜು ಕಟ್ಟೆ ನಿರ್ಮಾಣ ಮಾಡಲಾಗಿದೆ. ಈಗ ಹಳೇ ಎಪಿಎಂಸಿಯಲ್ಲಿ ನಡೆಯುತ್ತಿರುವ ಹೋಲ್ ಸೇಲ್ ಎಲೆ ವ್ಯಾಪಾರ ಈ ಕಟ್ಟೆಗೆ ಸ್ಥಳಾಂತರ ಆಗಬೇಕಿದೆ. ಇದಲ್ಲದೇ 11 ಎಕರೆ 23 ಗುಂಟೆಯ ಪ್ರಾಂಗಣದಲ್ಲಿಯೇ ಈಗಾಗಲೇ 2 ಎಕರೆಯಲ್ಲಿ ಆಗ್ನಿಶಾಮಕದಳ ಕಚೇರಿ ಇದ್ದು, ಒಟ್ಟು ಈ ಜಾಗಕ್ಕೆ ಕಟ್ಟಿರುವ ಕಾಂಪೌಂಡ್ ಒಂದೆರಡು ಕಡೆ ಹೊಡೆದು ಹೋಗಿದೆ. ಹೀಗಾಗಿ ರಾತ್ರಿ ಅಕ್ರಮ ಚಟುವಟಿಕೆಗಳಿಗೆ ತಾಣ ಆಗುತ್ತಿದ್ದು, ಕಾಂಪೌಂಡ್ ದುರಸ್ತಿ ಜೊತೆಗೆ ಕಾವಲುಗಾರರನ್ನೂ ನೇಮಿಸುವ ಕಾರ್ಯ ಮಾಡಬೇಕಿದೆ.
ರೈತರ ಅನುಕೂಲಕ್ಕಾಗಿ ಮುಚ್ಚು ಹರಾಜು ಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಶಾಸಕರ ಜೊತೆಗೂಡಿ ಉದ್ಘಾಟನೆ ಮಾಡುತ್ತೇವೆ. ಇದರ ಜೊತೆಗೆ ಹಳೆ ಎಪಿಎಂಸಿಯಲ್ಲಿ ನಡೆಯುವ ಹೋಲ್‌ಸೇಲ್ ಎಲೆ ಮಾರುಕಟ್ಟೆಯನ್ನೂ ಈ ಮುಚ್ಚು ಹರಾಜು ಕಟ್ಟೆಗೆ ಸ್ಥಳಾಂತರ ಮಾಡುತ್ತೇವೆ. –ಮಹಾವೀರ ಜೈನ್, ಅಧ್ಯಕ್ಷ, ಎಪಿಎಂಸಿ, ಧಾರವಾಡ
–ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.