ಕಾಲುವೆ ಅವ್ಯವಹಾರ ತನಿಖೆಗೆ ಆಗ್ರಹ
Team Udayavani, Feb 12, 2020, 10:49 AM IST
ಧಾರವಾಡ: ನವಲಗುಂದ ತಾಲೂಕಿನಲ್ಲಿ ಹಾದು ಹೋಗಿರುವ ಮಲಪ್ರಭಾ ಬಲದಂಡೆ ಮತ್ತು ಅಲ್ಲಿನ ಸಣ್ಣ ಕಾಲುವೆಗಳ ರಸ್ತೆ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಉಪಾಧ್ಯಕ್ಷ ಶಿವಾನಂದ ಕರಿಗಾರ ದೂರಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಬಲದಂಡೆ ಕಾಲುವೆ ನವಲಗುಂದ ತಾಲೂಕಿನಲ್ಲಿ ಹಾದು ಹೋಗಿದೆ. ಇಲ್ಲಿನ ಕಾಲುವೆ ಮತ್ತು ಉಪ ಕಾಲುವೆಗಳ ಪಕ್ಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಅದರೆ ಅದರಲ್ಲಿ ಕಳಪೆ ಕಾಮಗಾರಿಯಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಕುರಿತು ತನಿಖೆ ನಡೆಸಬೇಕು. ತನಿಖಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಈ ಕಾಮಗಾರಿಗಳು ಜಿಪಂ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಇಲ್ಲಿ ಚರ್ಚೆ ಅನವಶ್ಯಕ ಎಂದು ಜಿಪಂ ಸಿಇಒ ಡಾ| ಸತೀಶ ಪ್ರತಿಕ್ರಿಯೆ ನೀಡಿದರು. ಆಗ ಲೋಕಾಯುಕ್ತಕ್ಕೂ ಈ ಕುರಿತು ದೂರು ನೀಡಬೇಕಿದೆ ಎಂದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಗ್ರಹಿಸಿದರು. ಇದಲ್ಲದೇ ಜಿಲ್ಲೆಯಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಡಿಪಿ ಸಭೆಯಲ್ಲಿ ಒಮ್ಮತದಿಂದ ಠರಾವು ಪಾಸ್ ಮಾಡಲಾಯಿತು.
ರೈತರಿಗಾಗದ ಅನುಕೂಲ: ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸುವ ಕುರಿತು ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಶೇಂಗಾ ಮುಂಗಾರು ಬೆಳೆ, ಇದೀಗ ಹಿಂಗಾರು ಬೆಳೆ ಬಂದಾಗ ಅದರ ಖರೀದಿ ಕೇಂದ್ರ ತೆರೆಯಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಯಾವ ಬೆಳೆ ಯಾವಾಗ ರೈತರ ಕೈಗೆ ಬರುತ್ತದೆಯೋ ಆಗ ಖರೀದಿ ಕೇಂದ್ರ ತೆರೆದರೆ ಮಾತ್ರ ಅವರಿಗೂ ಅನುಕೂಲ ಆಗಲಿದೆ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ಕುಂದಗೋಳ ತಾಲೂಕಿನ 5 ಸ್ಥಳಗಳಲ್ಲಿ ಆರಂಭಿಸಿರುವ ಶೇಂಗಾ ಖರೀದಿ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ ಎಂದು ರೈತರು ದೂರು ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರರು ಸಹ ತನಿಖೆ ನಡೆಸಿ ವರದಿ ನೀಡಿದ್ದಾರೆ. ಬೆಳೆ ದರ್ಶಕ ಆ್ಯಪ್‌ನಲ್ಲಿರುವ ಬೆಳೆ ಬೇರೆ, ಖರೀದಿ ಕೇಂದ್ರದ ತಂತ್ರಾಂಶದಲ್ಲಿ ರೈತರ ಬೆಳೆಯೇ ಬೇರೆಯಾಗಿದೆ. ಆದಷ್ಟು ಶೀಘ್ರ ಗೊಂದಲ ಬಗೆಹರಿಸಲು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಸೂಚನೆ ನೀಡಿದರು.
ಗೊಂದಲ ಸರಿಪಡಿಸುವ ಕಾರ್ಯ: ಕುಂದಗೋಳ ತಾಲೂಕು ಯರಿಬೂದಿಹಾಳ ಗ್ರಾಮದಲ್ಲಿ ಜೋಳಕ್ಕೆ ವಿಮೆ ಹಣ ತುಂಬ ಕಡಿಮೆ ಬಂದಿದೆ. ಈ ಕುರಿತು ರೈತರು ದೂರು ನೀಡಿದ್ದು, ಪರಿಶೀಲಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಸೂಚಿಸಿದರು. ಬಿತ್ತನೆ ಕ್ಷೇತ್ರಕ್ಕಿಂತ ವಿಮಾ ಕಟ್ಟಿರುವ ಕ್ಷೇತ್ರ ಜಾಸ್ತಿಯಾಗಿರುವ ಕುರಿತು ತುಸುಗೊಂದಲವಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕಾಮಗಾರಿಗೆ ಸಮಯ ನೀಡಿ: ಕುಂದಗೋಳ, ನವಲಗುಂದ ತಾಲೂಕಿನ ಬಹುತೇಕ ಗ್ರಾಮಗಳ ಕೆರೆಗಳಿಗೆ ಮಲಪ್ರಭಾ ಬಲದಂಡೆ ಮೂಲಕ ನೀರು ಬಿಡಲಾಗುತ್ತಿದೆ. ಇದರಿಂದ ಕಾಲುವೆಗಳ ಕಾಮಗಾರಿಗಳ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ಕೆರೆಗಳಿಗೆ ನೀರು ಬಿಟ್ಟು ಕಾಮಗಾರಿಗೆ ಸಮಯ ನೀಡಬೇಕು ಎಂದು ಸಭೆಗೆ ನೀರಾವರಿ ಇಲಾಖೆ ಅಧಿಕಾರಿ ಮನವಿ ಮಾಡಿದರು. ಒಂದು ಬಾರಿ ನೀರು ಬಿಟ್ಟರೆ ಕೆರೆ ತುಂಬಿದ ನಂತರ ಮೂರು ತಿಂಗಳು ನೀರಿನ ಅಗತ್ಯತೆ ಇಲ್ಲ. ಹೀಗಾಗಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಾಮಗಾರಿ ನಡೆಸುವಂತೆ ಜಿಪಂ ಸಿಇಒ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.