ಸೌಲಭ್ಯ ಸದುಪಯೋಗವಾಗಲಿ
Team Udayavani, Jul 28, 2018, 4:11 PM IST
ಸವದತ್ತಿ: ನಿರಂತರ ಪರಿಶ್ರಮದಿಂದ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಅತ್ಯುತ್ತಮ ಸೌಕರ್ಯಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ.ಬಿ.ಹೆಗ್ಗಣವರ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿ.ಕಾಂ. ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮತ್ತು ಘಟಕಗಳ ಮುಖ್ಯಸ್ಥ ಪ್ರೊ| ಎಂ.ಎ. ಡೊಂಬರ್ ಅವರು ಶಿಸ್ತು ಪಾಲನೆ ಮತ್ತು ವಾಣಿಜ್ಯ ಸಂಘದ ಕುರಿತು, ಡಾ| ಎನ್.ಆರ್. ಸವತೀಕರ್ ಅವರು ಸರ್ಕಾರದಿಂದ ಮತ್ತು ಸ್ಥಳೀಯ ಸಂಸ್ಥೆ ಹಾಗೂ ದಾನಿಗಳಿಂದ ದೊರೆಯುವ ವಿದ್ಯಾರ್ಥಿ ವೇತನದ ಮಾಹಿತಿ ನೀಡಿದರು.
ಪ್ರೊ| ಕೆ. ರಾಮರೆಡ್ಡಿಯವರು ಕಾಲೇಜು ವಾರ್ಷಿಕ ಪತ್ರಿಕೆ ಕುರಿತು, ಡಾ| ಅರುಂಧತಿ ಬದಾಮಿ ಅವರು ಮಹಿಳಾ ಸಬಲೀಕರಣ ಘಟಕದ ಕುರಿತು, ಪ್ರೊ| ಎಂ.ಜೆ.ಹಡಗಲಿ ಅವರು ಪರಂಪರೆ ಕೂಟ ಮತ್ತು ಯುಥ್ ರೆಡ್‌ಕ್ರಾಸ್ ಯುನಿಟ್ ಕುರಿತು, ಪ್ರೊ| ಬಿ.ಎಸ್. ಬಳಿಗೇರ ಪಾಟೀಲ ಅವರು ಆಟೋಟ ಹಾಗೂ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಕುರಿತು ಪ್ರೊ| ಎಂ.ಸಿ.ಹಾದಿಮನಿ ಹಾಗೂ ಗ್ರಂಥಾಲಯದ ಕುರಿತು ಪ್ರೊ| ಕವಿತಾ ರಂಗನಗೌಡರ ಅವರು ಮಾಹಿತಿ ನೀಡಿದರು. ಪ್ರಾಚಾರ್ಯ ಡಾ| ಎಸ್.ಸಿ. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಡಾ| ಅರುಂಧತಿ ಬದಾಮಿ ಸ್ವಾಗತಿಸಿದರು. ಪ್ರೊ| ಮಂಜುನಾಥ ಚಿಕರೆಡ್ಡಿ ವಂದಿಸಿದರು. ಪ್ರೊ| ಜಿ.ಆರ್. ಬಡಿಗೇರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.