ವಾಕರಸಾ ಸಂಸ್ಥೆಗೆ ಪಿಎಸ್‌ಯು ಅವಾರ್ಡ್-17
Team Udayavani, Feb 1, 2017, 12:35 PM IST
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯಲ್ಲಿ ಜಾರಿಗೊಳಿಸಲಾದ ತಂತ್ರಾಂಶದ ಆಧಾರಿತ ರಜೆ ಅರ್ಜಿ ನಿರ್ವಹಣಾ ವ್ಯವಸ್ಥೆಗೆ ಪಿಎಸ್‌ಯು ಅವಾರ್ಡ್-2017ರ ಪುರಸ್ಕಾರ ದೊರೆತಿದೆ. ಸಂಸ್ಥೆಯ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ರಜೆಯನ್ನು ಮಾನವ ಆಧಾರಿತ ಪದ್ಧತಿಯಲ್ಲಿ ನೀಡಲಾಗುತ್ತಿತ್ತು.
ಇದರಿಂದ ಎಲ್ಲಾ ಸಿಬ್ಬಂದಿಗೆ ಸಮರ್ಪಕ ರಜೆ ಮಂಜೂರಾತಿ ಮಾಡಲು ಅನಾನುಕೂಲವಾಗುತ್ತಿತ್ತು. ಇದನ್ನು ಮನಗಂಡು ಆಡಳಿತದಲ್ಲಿ ಪಾರದರ್ಶದಕತೆಯೊಂದಿಗೆ ಕಾರ್ಮಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ “ಸ್ಮಾರ್ಟ್ ಲೀವ್ ಅಪ್ಲಿಕೇಶನ್ ಮ್ಯಾನೇಜಮೆಂಟ್ ಸಿಸ್ಟಮ್’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿತ್ತು.
ಇದಕ್ಕಾಗಿ 6 ಸಾವಿರ ರೂ. ವೆಚ್ಚ ಮಾಡಲಾಗಿತ್ತು. ಇದರಿಂದಾಗಿಸಂಸ್ಥೆಯ ಎಲ್ಲಾ 49 ಘಟಕಗಳಿಗೆ ಖರೀದಿಸಬೇಕಾದ ರಜೆ ಕಿಯೊಸ್ಕ್ ಯಂತ್ರಗಳಿಗೆ ತಗಲುವ 4 ಕೋಟಿ ರೂ. ಹಣವು ಉಳಿತಾಯವಾಗಿದೆ. ಈ ತಂತ್ರಾಂಶದ ಕುರಿತು ಪಿಎಸ್‌ಯು ಸಮ್ಮಿಟ್ ದೆಹಲಿಯಿಂದ ಆಹ್ವಾನಿಸಲಾದ ಪಿಎಸ್‌ಯು ಅವಾರ್ಡ್-2017ಕ್ಕೆಸಂಸ್ಥೆಯಿಂದ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನು ಪರಿಗಣಿಸಿ ವಾಕರಸಾ ಸಂಸ್ಥೆಗೆ ಪಿಎಸ್‌ಯು ಅವಾರ್ಡ್-2017 ಪ್ರಶಸ್ತಿ ಲಭಿಸಿದೆ. ಮಂಗಳವಾರ ದೆಹಲಿಯಲ್ಲಿ ಆಯೋಜಿಸಲಾದ 3ನೇ ಇಲೆಟ್ಸ್ ಪಿಎಸ್ ಯು ಸಮ್ಮಿಟ್ 2017ರ ಸಮಾರಂಭದಲ್ಲಿ ಗೌವರ್ನಿಂಗ್ ಮಿನಿಸ್ಟ್ರೀ ಆಫ್ ಶಾಪಿಂಗ್‌ನ ವಿನಿತ್ ಗೋಯಂಕಾ ಅವರು ವಾಕರಗೆ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಂಸ್ಥೆಯ ಪರವಾಗಿ ಮುಖ್ಯ ಗಣಕವ್ಯವಸ್ಥಾಪಕ ಡಾ| ಕೆ.ಎನ್. ಇಂಗಳಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ವಾಕರಸಾ ಸಂಸ್ಥೆಯ ಎಲ್ಲಾ ಅಧಿಕಾರಿ ಮತ್ತು ನೌಕರರ ಪರಿಶ್ರಮದ ಪ್ರತಿಫಲವಾಗಿದೆ. ಆದ್ದರಿಂದ ಈ ಪ್ರಶಸ್ತಿಯನ್ನು ಸಮಗ್ರ ನೌಕರರ ವರ್ಗಕ್ಕೆ ಸಮರ್ಪಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆರ್. ವಿನೋತ್‌ಪ್ರಿಯಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.