ವಾಕರಸಾ ವಾಟ್ಸ್‌ಆ್ಯಪ್‌ಗೆ “ತಾಂತ್ರಿಕ’ ಅಡ್ಡಿ!
Team Udayavani, Mar 14, 2017, 3:11 PM IST
ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಹಾಗೂ ಬಸ್ ನಿಲ್ದಾಣಗಳ ಸ್ಥಿತಿ ಹಾಗೂ ದೂರುಗಳ ಕುರಿತಾದ ಮಾಹಿತಿ ನೀಡಲು ಸಂಸ್ಥೆ ವಾಟ್ಸ್‌ಆ್ಯಪ್ ಸೇವೆ ಆರಂಭಿಸಿದ್ದಾಗಿ ಘೋಷಣೆ ಮಾಡಿ, ಮೊಬೈಲ್ ಸಂಖ್ಯೆ ನೀಡಿತ್ತಾದರೂ ಇದುವರೆಗೂ ಆ ಸೇವೆಯೇ ಆರಂಭವಾಗದಾಗಿದೆ.
ವಾಟ್ಸ್‌ಆ್ಯಪ್ ಸೇವೆ ಆರಂಭಿಸುವ ಮೂಲಕ ಸಾರ್ವಜನಿಕರಿಂದಲೇ ಸಮಸ್ಯೆಗಳನ್ನು ಅರಿಯಲು, ಅಗತ್ಯ ಸುಧಾರಣೆ ಸಲಹೆ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದರು.
ವಾಟ್ಸ್‌ಆ್ಯಪ್ ಸೇವೆ ಆರಂಭಿಸಿದ್ದೇವೆ. ಅಲ್ಲಿ ಬರುವ ಮಾಹಿತಿಯನ್ನುಪರಿಶೀಲಿಸಿ ಅಗತ್ಯ ಕ್ರಮ ಹಾಗೂ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿ 15 ದಿನ ಕಳೆದಿವೆ. ಸಾರ್ವಜನಿಕರು ಸಂಸ್ಥೆ ನೀಡಿದ ಸಂಖ್ಯೆಯನ್ನು ಸಂಪರ್ಕಿಸಿದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಸೇವೆ ಕಾರ್ಯಗತಗೊಂಡಿಲ್ಲ ಎಂಬ ಮಾಹಿತಿ ಬರತೊಡಗಿದೆ.
ಆರು ಜಿಲ್ಲೆಗಳನ್ನು ಪ್ರತಿನಿಧಿಸುವ ವಾಯವ್ಯ ಸಾರಿಗೆ ಸಂಸ್ಥೆಗೆ ತನ್ನವ್ಯಾಪ್ತಿಯ ವಿಭಾಗ, ಡಿಪೋ, ಬಸ್ ನಿಲ್ದಾಣಗಳ ಸಮಸ್ಯೆ, ಸಾರ್ವಜನಿಕರ ಕುಂದು-ಕೊರತೆ, ಬಸ್ ಗಳ ನೈಜ ಹಾಗೂ ಸಚಿತ್ರ ಮಾಹಿತಿ ಪಡೆಯಲು ವಾಟ್ಸ್‌ಆ್ಯಪ್ ಸೇವೆ ಸಹಕಾರಿಯಾಗಲಿದೆ. ತಮ್ಮೂರಿನ ಬಸ್-ಬಸ್ ನಿಲ್ದಾಣ ಇನ್ನಿತರ ಸಮಸ್ಯೆ, ಸಲಹೆಗಳನ್ನು ಸುಲಭವಾಗಿ ಸಂಸ್ಥೆ ಮುಖ್ಯಸ್ಥರಿಗೆ ರವಾನಿಸಬಹುದು. ಆದರೂ ಸದ್ಯಕ್ಕಂತೂ ಆ ಸೇವೆ ಸಾರ್ವಜನಿಕರಿಗೆ ಲಭ್ಯವಿಲ್ಲ.
ವಿಳಂಬಕ್ಕೆ ತಾಂತ್ರಿಕ ಕಾರಣವಂತೆ: ತಾಂತ್ರಿಕ ಯುಗದಲ್ಲಿ ಒಂದು ವಾಟ್ಸ್‌ಆ್ಯಪ್ ಸೇವೆ ಒದಗಿಸುವುದು ಸಂಸ್ಥೆಗೆ ದೊಡ್ಡ ಸಮಸ್ಯೆ ಏನಲ್ಲ. ಸಂಸ್ಥೆ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಫೆ. 17ರಂದೇ ವಾಟ್ಸ್ ಆ್ಯಪ್ ಸೇವೆ ಘೋಷಿಸಿದ್ದರೂ “ಸಾರ್ವಜನಿಕ ವಾಟ್ಸ್‌ಆ್ಯಪ್’ ಸಂಖ್ಯೆ 7760991687ಗೆ ಸಂಪರ್ಕ ಮಾಡಿದರೂ ಪ್ರಯೋಜನ ಆಗುತ್ತಿಲ್ಲ.
ಈ ಸೇವೆ ಒದಗಿಸಲು ಇರುವ ತಾಂತ್ರಿಕ ಅಡಚಣೆಯಾದರೂ ಏನುಎನ್ನುವುದು ನಗು ತರಿಸುವ ಸಂಗತಿ. ವಾಕರಸಾ ಸಂಸ್ಥೆಯ ವಾಟ್ಸ್ ಆ್ಯಪ್ ಸೇವೆಗೆ ನೀಡಿದ ಮೊಬೈಲ್ ಬೇಸಿಕ್ ಮಾದರಿಯದ್ದಾಗಿದೆ. ಇದರಿಂದ ಕೆಲ ತಾಂತ್ರಿಕ ಸಮಸ್ಯೆಗಳುಉದ್ಭವಿಸಿವೆ. ಯಾವುದೇ ಪೂರ್ವಸಿದ್ಧತೆ ಹಾಗೂ ಯೋಜನೆ ಇಲ್ಲದೆಯೇ ವಾಟ್ಸ್ ಆ್ಯಪ್ ಸಂಖ್ಯೆ ಬಿಡುಗಡೆ ಮಾಡಲಾಗಿದೆ. ಇದೇ ಕಾರಣಕ್ಕಾಗಿ ಈ ವ್ಯವಸ್ಥೆ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎನ್ನಲಾಗಿದೆ.
* ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.