ರಾಮರಾಜ್ಯದ ಪರಿಕಲ್ಪನೆ ಕೊಟ್ಟಿದ್ದು ವಾಲ್ಮೀಕಿ
Team Udayavani, Oct 6, 2017, 12:29 PM IST
ಧಾರವಾಡ: ಮಾನವೀಯ ಮೌಲ್ಯ ಹಾಗೂ ಆದರ್ಶಗಳನ್ನೊಳಗೊಂಡ ರಾಮ ರಾಜ್ಯದ ಕಲ್ಪನೆಯನ್ನು ಇಡೀ ಜಗತ್ತಿಗೆ ನೀಡಿದ ಶ್ರೇಯಸ್ಸು ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ನಗರದ ಕವಿಸಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲ ದೇಶ ಮತ್ತು ರಾಜ್ಯಗಳಿಗೆ ಕಲ್ಯಾಣ ಮತ್ತು ರಾಮ ರಾಜ್ಯದ ಕಲ್ಪನೆ ದೊರೆತದ್ದು ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಿಂದ. ಮಹಾತ್ಮ ಗಾಂಧೀಜಿ ಯವರೂ ಕೂಡ ಈ ಕೃತಿಯಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಧಾರವಾಡದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಸೂಕ್ತ ನಿವೇಶನ ಒದಗಿಸುವುದಾಗಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಸೀತಾ ಮಾತೆಗೆ ತನ್ನ ಆಶ್ರಮದಲ್ಲಿ ರಕ್ಷಣೆ ನೀಡಿ, ಲವ-ಕುಶರಿಗೆ ಬಿಲ್ವಿದ್ಯೆಯನ್ನು ಕಲಿಸಿಕೊಟ್ಟ ಮಹರ್ಷಿ ವಾಲ್ಮೀಕಿ ಸ್ತ್ರೀ ಪರವಾದ ಚಿಂತಕನಾಗಿದ್ದ. ಸಮುದಾಯದ ಮಹಿಳೆಯರು ಶಿಕ್ಷಿತರಾದರೆ ಸಮಾಜದ ಏಳ್ಗೆ ಸಾಧ್ಯ ಎಂದರು. ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಶರಣಮ್ಮ ಎ.ಗೊರೇಬಾಳ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ| ಪ್ರಕಾಶ ಬೆನ್ನೂರ, ಯಲ್ಲಪ್ಪ ಜಾರಿ, ಹನುಮಂತಪ್ಪ ಬಂಟನವರ್, ಬಸಮ್ಮ ಮಾಳಗಿ,ಪಾರ್ವತೆಮ್ಮ ಜೋಗನಾಯ್ಕರ್, ಚೇತನ್ ಡಿ.ಕರಡೋಣಿ ಹಾಗೂ ಎಸ್ ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಬಸವರಾಜ ಕೆ.ಚನ್ನೂರ ಸೇರಿದಂತೆ 10 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಬಿಡುಗಡೆ ಮಾಡಲಾಗಿರುವ ಸಹಾಯಧನದ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ,ಧಾರವಾಡ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್, ಹಿರಿಯ ಸಾಹಿತಿ ಮೋಹನ ನಾಗಮ್ಮನವರ,
ಮುಖಂಡರಾದ ಸುರೇಶಬಾಬು ತಳವಾರ, ವೈ.ಬಿ. ಕಾಟ್ಕರ್, ಲಕ್ಷ್ಮಣ ಬಕ್ಕಾಯಿ, ತಾ.ಪಂ. ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ್, ಶಿವರಾಜ ಕಲ್ಲಿಗನೂರ, ವೈ.ಎ. ಹುಲ್ಲಾರ್, ಡಿಡಿಪಿಐ ಎನ್. ಎಚ್. ನಾಗೂರ, ಡಿಎಚ್‌ಒ ಡಾ| ಆರ್. ಎಂ.ದೊಡ್ಡಮನಿ, ಬಿ.ಎಸ್. ದೊಡ್ಡಮನಿ, ಪುರುಷೋತ್ತಮ, ಮಂಜುನಾಥ ಡೊಳ್ಳಿನ, ಕಮಲಾ ತಳವಾರ ಇದ್ದರು. ನವೀನ್ ಶಿಂತ್ರೆ ಸ್ವಾಗತಿಸಿದರು. ವೈ.ಎ.ನಾಗಮ್ಮನವರ್ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹೆಮ್ಮಾಡಿ; 4 ರಸ್ತೆ ಸೇರುವಲ್ಲಿ ಒಂದೂ ತಂಗುದಾಣವಿಲ್ಲ!
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.