ವೇದಾಧ್ಯಯನ ಬ್ರಾಹ್ಮಣರಿಗೆ ಸ್ವಾಭಿಮಾನದ ಸಂಕೇತ
Team Udayavani, May 21, 2017, 4:22 PM IST
ಹುಬ್ಬಳ್ಳಿ: ಬ್ರಾಹ್ಮಣರಿಗೆ ವೇದಾಧ್ಯಯನ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಮನೆಯಲ್ಲಿ ಒಬ್ಬರಾದರೂ ವೇದಾಧ್ಯಯನ ಮಾಡಲೇಬೇಕೆಂದು ಶಿವಮೊಗ್ಗದ ಶ್ರೀ ಕೂಡಲಿ ಶೃಂಗೇರಿಮಠದ ಡಾ| ಅಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಕರೆ ನೀಡಿದರು. ಇ
ಲ್ಲಿನ ವಿದ್ಯಾನಗರದ ಶ್ರೀ ಮರಾಠಾ ಭಾರತಿ ಮಠದ ಮರಾಠಾ ಭವನದಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿದಂಬರಲೀನ ಶ್ರೀ ಮಾರ್ತಾಂಡ ದೀಕ್ಷಿತರು ಬಡ್ಲಿ (ಅರವಿಂದಪ್ಪನವರು) ಅವರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬ್ರಾಹ್ಮಣರು ಮೊದಲು ಉಪನಯನ ನಂತರ ಮಕ್ಕಳನ್ನು ವೇದಾಧ್ಯಯನಕ್ಕೆ ಗುರುಗಳ ಬಳಿ ಕಳುಹಿಸುತ್ತಿದ್ದರು. ಈಗ ಮಕ್ಕಳನ್ನು ಉಪನಯನಕ್ಕೂ ಮೊದಲು ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳಿಗೆ 8 ವರ್ಷಕ್ಕೆ ಉಪನಯನ ಮಾಡಿಸಬೇಕು. ಬ್ರಾಹ್ಮಣರ ಜನಸಂಖ್ಯೆ ಕ್ಷೀಣಿಸುತ್ತಿದೆ.
ಜೊತೆಗೆ ವೇದಾಧ್ಯಯನ ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ವೇದಶಾಸ್ತ್ರಗಳು ನಶಿಸಬಾರದು. ಅದನ್ನು ಪೋಷಿಸಿ, ಬೆಳೆಸಬೇಕು. ವೇದಾಧ್ಯಯನ ಸ್ವಾಭಿಮಾನವಾಗಿದ್ದು, ಮನೆಗೊಬ್ಬರು ಕನಿಷ್ಟ ನಾಲ್ಕು ವೇದಾಧ್ಯಯವನ್ನಾದರೂ ಮಾಡಬೇಕು. ಆನಂತರ ಲೌಕಿಕ ಅಧ್ಯಯನ ಮಾಡಬೇಕು.
ಬ್ರಾಹ್ಮಣರು ಎಂದಿಗೂ ಮೀಸಲಾತಿ ಕೇಳಿದವರಲ್ಲ. ಅಧ್ಯಯನವಂತರಾದರೆ ಯಾವುದೇ ಮೀಸಲಾತಿ ಕೇಳುವ ಅಗತ್ಯತೆಯೂ ಇಲ್ಲವೆಂದರು. ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು “ವೇದ ವಾಙ್ಮಯ ಉತ್ತೇಜಕ ಸಭಾ’ ಉದ್ಘಾಟಿಸಿದರು.
ಸಂಸದ ಪ್ರಹ್ಲಾದ ಜೋಶಿ ಅವರು “ಮಾರ್ತಂಡೋ ಜ್ಞಾನಭಾಸ್ಕರಃ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮಾರ್ತಂಡ ದೀಕ್ಷಿತರ ಜ್ಞಾನ, ತಪಸ್ಸು, ಅವರ ಜೀವನದ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಅಗಡಿಯ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ, ಬಾಬುಳಗಾಂವ್‌ನ ಕರ್ಕಿಹಳ್ಳಿಯ ಗುರುಚಿದಂಬರ ದೀಕ್ಷಿತರು, ಗುರ್ಲಹೊಸೂರನ ಪ್ರಸನ್ನ (ಬಾಹು) ದೀಕ್ಷಿತರು ಮಾತನಾಡಿ, ಮಾರ್ತಂಡ ದೀಕ್ಷಿತರು ನಿರಾಡಂಬರಿಗಳಾಗಿದ್ದರು.
ಕಲ್ಲಿನಂತಿದ್ದ ಶಿಷ್ಯವರ್ಗವನ್ನು ಮೂರ್ತಿಯನ್ನಾಗಿ ರೂಪಿಸಿ, ಸಮಾಜಮುಖೀ ಕಾರ್ಯ ಮಾಡಿದರು. ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು ಎಂದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಇಂದು ಬ್ರಾಹ್ಮಣರ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ವಿಪ್ರರೆಲ್ಲ ಜಾಗೃತರಾಗಬೇಕು. ಸಂಘಟಿತರಾಗಬೇಕಿದೆ. ಪರಶುರಾಮನಂತೆ ಹೋರಾಟ ಮಾಡಬೇಕಿದೆ. ವಿಪ್ರರು ಯಾವುದೇ ಜಾತಿಯ ವಿರೋಧಿಗಳಲ್ಲ.
ಡಾ|ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ವಿಪ್ರರೆ ಪ್ರಮುಖವಾಗಿ ಅವರಿಗೆ ಸಹಾಯ ಮಾಡಿದ್ದರು ಎಂದರು. ಬಡ್ಲಿ (ಪುಣೆ)ಯ ಅಶೋಕ ದೀಕ್ಷಿತರು, ಬಡ್ಲಿಯ ಗಂಗಾಧರ ದೀಕ್ಷಿತರು ಮೊದಲಾದವರಿದ್ದರು. ಶಂಕರಭಟ್ಟ ಜೋಶಿ ಸ್ವಾಗತಿಸಿದರು. ನರಸಿಂಹರಾವ್ ಸೋಮಲಾಪುರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.