ದ್ರಾಕ್ಷಿಯಲ್ಲ, ತರಕಾರಿ-ಹಣ್ಣಿನ ವೈನ್ ಬಂತು!
Team Udayavani, Jan 19, 2020, 10:34 AM IST
ಧಾರವಾಡ: ದ್ರಾಕ್ಷಾರಸ ಮದಿರೆಯಾಗಿ ಮತ್ತೇರಿಸುವುದು ಇತಿಹಾಸದಲ್ಲಿತ್ತು. ಅದೇ ದ್ರಾಕ್ಷಾರಸ ವೈನ್ ಎಂಬ ಹೆಸರಿನೊಂದಿಗೆ ಆಧುನಿಕ ಜಗತ್ತಿನಲ್ಲಿ ಹೆಸರಾಗಿದೆ.
ಇದೀಗ ಬರೀ ದ್ರಾಕ್ಷಾರಸ ಮಾತ್ರವಲ್ಲ, ಹತ್ತು ಬಗೆಯ ಹಣ್ಣು ಮತ್ತು ತರಕಾರಿಗಳಿಂದಲೂ ವೈನ್ ತಯಾರಿಸಬಹುದು ಮತ್ತು ಅದು ದೇಹಕ್ಕೆ ತುಂಬಾ ಉಪಯುಕ್ತ ಎನ್ನುವ ಅಂಶವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ತೋರಿಸಿಕೊಟ್ಟಿದೆ.
ಧಾರವಾಡ ಕೃಷಿ ವಿವಿಯ ಆಹಾರ ತಾಂತ್ರಿಕತೆ, ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ವಿಭಾಗವು ಹಣ್ಣು ಮತ್ತು ತರಕಾರಿ ವೈನ್ ಸಿದ್ಧಗೊಳಿಸಿದ್ದು, ಹತ್ತು ಬಗೆಯ ಹಣ್ಣು-ತರಕಾರಿಗಳನ್ನು ಇದಕ್ಕೆ ಬಳಸಿಕೊಂಡಿದೆ. ದ್ರಾಕ್ಷಾ ರಸವನ್ನು ವೈನ್ ಆಗಿ ಪರಿವರ್ತಿಸುವ ಮಾದರಿಯಲ್ಲೇ ಈ ಹಣ್ಣು ಮತ್ತು ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗೋಡಂಬಿ, ಮೂಸಂಬಿ, ಲಿಂಬೆಹಣ್ಣು, ಪೈನಾಪಲ್ ಮತ್ತು ದ್ರಾಕ್ಷಿಯು ಹಣ್ಣಿನ ವೈನ್‌ಗೆ ಬಳಕೆಯಾದರೆ, ಗಜ್ಜರಿ, ಬಿಟರೂಟ್ ನಂತರ ಗಡ್ಡೆ ತರಕಾರಿಗಳಿಂದಲೂ ವೈನ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನು ಬೆಲ್ಲವನ್ನೇ ಬಳಸಿಕೊಂಡು ವೈನ್ ಸಿದ್ಧಗೊಳಿಸಿದ್ದು ಕೃಷಿ ವಿವಿಯ ವಿಜ್ಞಾನಿಗಳ ನಿರಂತರ ಶ್ರಮಕ್ಕೆ ಸಿಕ್ಕ ಫಲವಾಗಿದೆ.
ಯಾಕೆ ವೈನ್?: ವೈನ್‌ಗೆ ಬರೀ ದ್ರಾಕ್ಷಿ ಮಾತ್ರ ಬಳಕೆಯಾಗುತ್ತಿದ್ದು, ಇನ್ನಿತರ ಹಣ್ಣುಗಳು ಸಿಗುವ ಪ್ರದೇಶದಲ್ಲಿ ಇದನ್ನು ಮೌಲ್ಯವರ್ಧನ ಗೊಳಿಸುವ ಪ್ರಯತ್ನ ಇದಾಗಿದೆ. ಕರಾವಳಿಯಲ್ಲಿ ಹೆಚ್ಚಿಗೆ ಗೋಡಂಬಿ ಹಣ್ಣು ಸಿಗುತ್ತಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಗಜ್ಜರಿ ಮತ್ತು ಲಿಂಬೇಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕರೆ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ವೈನ್‌ಗೆ ಉತ್ತಮ ಮಾರುಕಟ್ಟೆ ಕೂಡ ಇದ್ದು, ರೈತರು ಸ್ಥಳೀಯವಾಗಿಯೇ ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಳ್ಳಬಹುದು ಎಂಬುದು ತರಕಾರಿ ಮತ್ತು ಹಣ್ಣು ವೈನ್ ಸಂಶೋಧಕರ ಅಭಿಪ್ರಾಯ.
ಬೇಕರಿ ಉತ್ಪನ್ನ: ಕೃಷಿ ವಿವಿಯ ಆಹಾರ ಭದ್ರತೆ ಮತ್ತು ಪೌಷ್ಟಿಕ ವಿಭಾಗವೂ ಈಗಾಗಲೇ ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ಸಿದ್ಧಗೊಳಿಸಿ ಮೌಲ್ಯವರ್ಧಿಸುವ ತರಬೇತಿಯನ್ನು ರೈತರಿಗೆ ನೀಡುತ್ತಿದೆ. ಸಿರಿಧಾನ್ಯಗಳಿಂದ ಬಿಸ್ಕೆಟ್, ಬ್ರೆಡ್, ಬೇಕರಿ ತಿನಿಸುಗಳನ್ನು ಸಿದ್ಧಗೊಳಿಸಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ.
ನಾಲ್ಕು ವರ್ಷಗಳಿಂದ ತರಕಾರಿ, ಹಣ್ಣಿನ ವೈನ್ ತಯಾರಿಕೆ ಪ್ರಯತ್ನ ಮತ್ತು ಪ್ರಯೋಗ ನಡೆಯುತ್ತಿತ್ತು. ಈ ವರ್ಷ ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಇನ್ನಷ್ಟು ಸುಲಭ ವಿಧಾನದಲ್ಲಿ ರೈತರು ಸಿದ್ಧಗೊಳಿಸುವಂತೆ ಮಾಡುವ ಪ್ರಯೋಗ ಮುಂದುವರಿದಿದೆ. -ಡಾ| ಸಂತೋಷ, ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗ, ಕೃಷಿ ವಿವಿ ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.