ಮಹಿಳಾ ಮೋರ್ಚಾದಿಂದ ವೇಣು ಗೋ-ಬ್ಯಾಕ್ ಪ್ರತಿಭಟನೆ
Team Udayavani, Oct 17, 2017, 12:55 PM IST
ಧಾರವಾಡ: ಲೈಂಗಿಕ ಆರೋಪ ಹೊತ್ತಿರುವ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರು ಮರಳಿ ಹೋಗುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಸೋಮವಾರ ಪ್ರತಿಭಟನೆ ನಡೆಸಿತು.
ಇಲ್ಲಿನ ಕೊಂಡವಾಡ ಓಣಿಯ ಮನೆ ಮೆನೆಗೆ ಕಾಂಗ್ರೆಸ್ ಪ್ರಚಾರ ಪರಿಶೀಲನೆಗಾಗಿ ಆಗಮಿಸಿದ್ದ ವೇಣುಗೋಪಾಲ ಅವರ ವಿರುದ್ಧ, ವೇಣುಗೋಪಾಲ ಗೋ ಬ್ಯಾಕ್ (ಮರಳಿ ಹೋಗಿ) ಎಂದು ಘೋಷಣೆ ಕೂಗಿದ ಮಹಿಳಾ ಬಿಜೆಪಿ ಕಾರ್ಯಕರ್ತೆಯರು, ಲೈಂಗಿಕ ಆರೋಪ ಹೊತ್ತಿರುವ ವ್ಯಕ್ತಿ ಧಾರವಾಡದ ಮನೆಗಳಿಗೆ ಹೋಗಿ ತಮ್ಮ ಪಕ್ಷದ ಸಾಧನೆ ಪ್ರಚಾರ ಮಾಡುತ್ತಿದ್ದಾರೆ.
ಅವರಿಗೆ ಈ ನೈತಿಕತೆ ಇಲ್ಲ. ಹೀಗಾಗಿ ಕೂಡಲೇ ಅವರು ವಾಪಸ್ ಹೋಗಬೇಕು ಎಂದು ಘೋಷಣೆಗಳನ್ನು ಕೂಗಿದರು. ಕೊಂಡವಾಡ ಓಣಿಯ ಒಂದು ಬದಿಯಲ್ಲಿ ಈ ಹೋರಾಟ ನಡೆಯುತ್ತಿದ್ದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಕಾಂಗ್ರೆಸ್ ಕಾರ್ಯಕರ್ತರು, ವೇಣುಗೋಪಾಲ ಅವರನ್ನು ಓಣಿಯ ಆ ತುದಿಯ ಮನೆಗಳಿಗೆ ಕರೆದುಕೊಂಡು ಹೋಗಿ ಮನೆ ಮನೆಗೆ ಭೇಟಿ ಮಾಡಿಸಿದರು.
ಇದರಿಂದ ಇನ್ನಷ್ಟು ಕೋಪಗೊಂಡ ಕಾರ್ಯಕರ್ತರು ವೇಣುಗೋಪಾಲ ವಿರುದ್ಧ ಘೋಷಣೆ ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.