ಮೂಗಿಗೆ ನಿಂಬೆ ರಸ ಹಾಕಿದರೆ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ: ವಿಜಯ ಸಂಕೇಶ್ವರ
Team Udayavani, Apr 25, 2021, 1:48 PM IST
ಹುಬ್ಬಳ್ಳಿ: ಕೋವಿಡ್-19 ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವುದಿಂದ ಅರ್ಧ ಗಂಟೆಯಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಸಮಸ್ಯೆ ಸರಿ ಹೋಗಲಿದೆ, ಇದನ್ನು ನಾನು, ನನ್ನ ಕುಟುಂಬ ಹಾಗೂ ಸುಮಾರು 200 ಜನರಿಗೆ ಸೂಚಿಸಿದ್ದೆ ಇದರಿಂದ ಪರಿಣಾಮಕಾರಿ ಫಲಿತಾಂಶ ಬಂದಿದೆ ಎಂದು ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ತಿಳಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂಬೆ ಹಣ್ಣಿನ ರಸ ಹಾಕಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಂಡಿದ್ದೇನೆ. ದಿನಕ್ಕೆ ಎರಡು ಬಾರಿ 3-4 ಹನಿಗಳನ್ನು ಹಾಕಿಕೊಳ್ಳಬೇಕು. ಹೀಗೆ ಹಾಕಿಕೊಳ್ಳುವುದರಿಂದ 30-45 ನಿಮಿಷದಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬರಲಿದೆ. ಇದರಂದ ಉಸಿರಾಟದ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರಲಿದೆ ಇದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಿ ಶೇ. 80 ರಷ್ಟು ಆಸ್ಪತ್ರೆ ಹಾಸಿಗೆ ಖಾಲಿಯಾಗಲಿವೆ. ಈ ಮನೆಮದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಹಸುಗಳಿಗೆ ಬಾಳೆಹಣ್ಣು ತಿನ್ನಿಸಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್
ಈ ವಿಧಾನವನ್ನು ನಾನು, ನಾನು, ನನ್ನ ಕುಟುಬ ಸೇರಿದಂತೆ ಸುಮಾರು 200 ಜನರಿಗೆ ಹೇಳಿದ್ದೇನೆ. 30ರಿಂದ 45 ನಿಮಿಷದಲ್ಲಿ ಕಫ ಹೊರ ಬಂದು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿದೆ. ಇದನ್ನರಲ್ಲಿ ಅನುಸರಿಸಿದವರು ವಾಪಸ್ಸು ಕರೆ ಮಾಡಿ ಫಲಿತಾಂಶ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರು ಇದನ್ನು ಅನುಸರಿಸುವುದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ವಿಧಾನದ ಅನುಸರಿಸುವ ಜತೆಗೆ ವೈದ್ಯಕೀಯ ಸಲಹೆ, ಚಿಕಿತ್ಸೆ ಅನುಸರಿಸಿಬೇಕು ಎಂದು ತಿಳಿಸಿದರು.
ಉಚಿತ ಘೋಷಣೆ ಸರಿಯಲ್ಲ: ಕೇಂದ್ರ ಹಾಗೂ ರಾಜ್ಯ ಸರಕಾರ ಉಚಿತ ಪಡಿತರ ಘೋಷಣೆ ಮಾಡಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಬಹುತೇಕ ಕೈಗಾರಿಕೆಗಳು ಕಾರ್ಮಿಕ ಸಮಸ್ಯೆ ಅನುಭವಿಸುತ್ತಿವೆ. ಪ್ರಧಾನಿ ನರೆಂದ್ರ ಮೋದಿಯವರು 80 ಕೋಟಿ ಜನರಿಗೆ ಉಚಿತ ಪಡಿತರ ಘೋಷಣೆ ಸರಿಯಲ್ಲ. ಕಡು ಬಡವರನ್ನು ಗುರುತಿಸಿ ತಲುಪಿಸುವ ವ್ಯವಸ್ಥೆ ಮಾಡಬೇಕಿತ್ತು. ಇನ್ನೂ ಇಂತಹ ಸಂದರ್ಭದಲ್ಲಿ ಚುನಾವಣಾ ರ್ಯಾಲಿ, ಕುಂಬ ಮೇಳ ಸರಿಯಲ್ಲ. ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿವೆ. ಈ ಸಂದರ್ಭದಲ್ಲಿ ಜನರು ಜಾಗೃತಿಯಿಂದ ಇರಬೇಕು ಎಂದು ಸಂಕೇಶ್ವರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.