ವಿನಯ್ ಕುಲಕರ್ಣಿ ಕುದುರೆ ಸವಾರಿ
Team Udayavani, Apr 25, 2019, 2:46 PM IST
ಧಾರವಾಡ: ಅಂಬಾ ಎಂದು ಕೂಗುವ ಹಸುಗಳನ್ನುಸಂತೈಸುವುದು..ಎರಡು ದಿನಗಳ ಹಿಂದಷ್ಟೇ ಜನ್ಮತಾಳಿದ ಕುದುರೆ ಮರಿಯೊಂದಿಗೆ ಆಟವಾಡುತ್ತ ಕಾಲಹರಣ..ಕುರಿಗಳ ಆರೋಗ್ಯ ತಪಾಸಣೆ.. ಹಾಲಿನ ಲೆಕ್ಕ ಪರಿಶೀಲನೆ..ಮಧ್ಯಾಹ್ನ ಮತ್ತೆ ಜನರೊಂದಿಗೆ ಬೆರೆತು ಮದುವೆ, ತಿಥಿ ಕಾರ್ಯಗಳಲ್ಲಿ ಭಾಗಿ..ಒಟ್ಟಿನಲ್ಲಿ ರಿಲ್ಯಾಕ್ಸ್ ಮೂಡ್…
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಚುನಾವಣೆ ಮರುದಿನ ಬುಧವಾರ ಇಡೀ ದಿನ ತಮ್ಮ ಮನೆ-ಡೈರಿ ಮತ್ತು ಜನರೊಂದಿಗೆ ಬೆರೆತು ಪೂರ್ಣ ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆದರು.
ಬೆಳಗ್ಗೆ ಬೇಗ ಎದ್ದು ಡೈರಿಯತ್ತ ಪ್ರಯಾಣ ಬೆಳೆಸಿದ ವಿನಯ್, ಇಡೀ ಡೈರಿ ತುಂಬಾ ಸುತ್ತಾಡಿ ಅಲ್ಲಿ ಕೆಲಸ ಮಾಡುವ ಆಳುಗಳಿಂದ ಪ್ರತಿ ಆಕಳ ಆರೋಗ್ಯ, ಅವುಗಳ ಆರೈಕೆ ಸೇರಿದಂತೆ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಷ್ಟೇಯಲ್ಲ ಅನಾರೋಗ್ಯಕ್ಕೊಳಗಾಗಿದ್ದ ಕೆಲವು ಆಕಳುಗಳನ್ನು ಖುದ್ದು ಪರಿಶೀಲನೆ ನಡೆಸಿ ತಪಾಸಣೆಗೆ ಸೂಚಿಸಿ ಅವುಗಳಿಗೆ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಿದರು.
ಕಳೆದ ಎರಡು ದಿನಗಳ ಹಿಂದಷ್ಟೇ ಜನ್ಮತಾಳಿದ ಅವರ ನೆಚ್ಚಿನ ಕುದುರೆಯ ಮರಿಯನ್ನು ಆರೈಕೆ ಮಾಡಿ ಅದರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ಇನ್ನು ಪಕ್ಕದಲ್ಲೇ ಇರುವ ಆಡು-ಕುರಿಗಳ ದೊಡ್ಡಿಗೂ ಹೋಗಿ ಅವುಗಳ ವ್ಯವಸ್ಥೆ ಪರಿಶೀಲಿಸಿ, ಅಲ್ಲಿನ ಕೆಲಸಗಾರರಿಗೆ ಸೂಕ್ತ ಕ್ರಮಗಳ ಕುರಿತು ಮಾಹಿತಿ-ಸಲಹೆ ನೀಡಿದರು.
ನಂತರ ಡೈರಿಗೆ ಬರುತ್ತಿದ್ದ ಅವರ ಅಭಿಮಾನಿಗಳೊಂದಿಗೆ ನಿನ್ನೆ ನಡೆದ ಚುನಾವಣೆ ಕುರಿತು ಸಾಕಷ್ಟು ವಿಚಾರಗಳನ್ನು ಚರ್ಚಿಸಿದರು. ಧಾರವಾಡ ಗ್ರಾಮೀಣ, ಕಲಘಟಗಿ, ಕುಂದಗೋಳ, ಶಿಗ್ಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿನ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರೊಂದಿಗೂ ರಾಜಕೀಯ ವಿಚಾರಗಳನ್ನು ಚರ್ಚಿಸಿದರು. ಮಧ್ಯಾಹ್ನ ಡೈರಿಯಲ್ಲಿಯೇ ಕಾರ್ಯಕರ್ತರೊಂದಿಗೆ ಊಟ ಮಾಡಿದರು. ನಂತರ ಮನೆಗೆ ತೆರಳಿ ಕುಟುಂಬದವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆದರು.
ಮದುವೆಗೂ ಭೇಟಿ: ಮಧ್ಯಾಹ್ನ ನಂತರ ಕಮಲಾಪೂರದಲ್ಲಿರುವ ಸಿದ್ದು ಸಪೂರಿ ಎಂಬುವರ ಮನೆಯಲ್ಲಿ ನಡೆಯುತ್ತಿದ್ದ ಮಂಗಳ ಕಾರ್ಯವೊಂದರಲ್ಲಿ ಪಾಲ್ಗೊಂಡು ಶುಭ ಕೋರಿದ ವಿನಯ್, ನಂತರ ಲಕಮಾಪೂರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರನ್ನು ಹಾರೈಸಿದರು. ನಂತರ ಬಸವರಾಜ ಮಟ್ಟಿ ಎನ್ನುವರ ಮನೆಯಲ್ಲಿನ ದುಃಖ ತಪ್ತ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಚುನಾವಣೆಯಲ್ಲಿ ಎಲ್ಲಾ ಸಮುದಾಯ ಜನರು ನನ್ನ ಕೈ ಹಿಡಿದಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಾನು ವ್ಯವಸ್ಥಿತವಾಗಿ ಚುನಾವಣೆ ಕಾರ್ಯ ನಿರ್ವಹಿಸಿದ್ದು, ಹೀಗಾಗಿ ಗೆಲುವು ಖಚಿತ. ನಮ್ಮ ಶ್ರಮ ಮತ್ತು ನನ್ನ ಸೇವೆಗೆ ಜನರು ಈ ಬಾರಿ ಖಂಡಿತಾ ನನಗೆ ದೊಡ್ಡ ಜಯ ಕೊಡುತ್ತಾರೆ. ಯಶಸ್ಸು ಸಿಕ್ಕೇಸಿಗುತ್ತದೆ.
•ವಿನಯ್ ಕುಲಕರ್ಣಿ, ಮೈತ್ರಿ ಪಕ್ಷದ ಅಭ್ಯರ್ಥಿ.
ನನ್ನ ಪತಿಯ ಜನಸೇವೆಗೆ ಈ ಬಾರಿ ಖಂಡಿತಾ ಜಯ ಸಿಗುವ ವಿಶ್ವಾಸವಿದೆ. ಅವರು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ್ದಾರೆ. ಈ ಬಾರಿ ಖಂಡಿತಾ ಜಯ ನಮ್ಮದೇ. ಅವರು ದಣಿವರಿಯದೇ ಕೆಲಸ ಮಾಡುವ ಗುಣ ಹೊಂದಿದ್ದಾರೆ. ಇದೀಗ ಮತ್ತೇ ಕುಂದಗೋಳ ಉಪ ಚುನಾವಣೆ ಬರುತ್ತಿದ್ದು ಅದಕ್ಕೆ ತಯಾರಿ ನಡೆಸುತ್ತಿದ್ದಾರೆ.
•ಶಿವಲೀಲಾ,ವಿನಯ್ ಕುಲಕರ್ಣಿ ಪತ್ನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.