ವ್ಯಕ್ತಿಗಿಂತ ಸದ್ಗುಣಗಳ ಪೂಜೆ ಅವಶ್ಯ
Team Udayavani, Apr 10, 2017, 1:25 PM IST
ಹುಬ್ಬಳ್ಳಿ: ಹಿಂಸೆ, ಮೂಢನಂಬಿಕೆ, ಅಶಾಂತಿಗೆ ಭಗವಾನ ಮಹಾವೀರರು ಎಂದಿಗೂ ಆಸ್ಪದ ನೀಡಿಲ್ಲ ಎಂದು ಜಂಗಲೇವಾಲ್ ಬಾಬಾ ಶ್ರೀ ಚಿನ್ಮಯಸಾಗರ ಮಹಾರಾಜರು ಹೇಳಿದರು. ತಾಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದಲ್ಲಿ ರವಿವಾರ ನಡೆದ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀರ್ಥಂಕರ ಮಹಾವೀರರು ಸದಾ ಅಹಿಂಸಾ ಪರಮೋಧರ್ಮ ಎಂದು ನಡೆದವರು. ಅಹಿಂಸಾ ಮಾರ್ಗದಿಂದಲೇ ಎಲ್ಲವನ್ನು ಸಾಧಿಸಬಹುದು ಎಂಬುದನ್ನು ತೋರಿಸಿದವರು ಮಹಾವೀರರು. ತಮ್ಮ ಜೀವಿತಾವಧಿಯಲ್ಲಿ ಎಂದು ಜಾತಿ-ಮತ-ಪಂಥ ಎಂದು ಭೇದಭಾವ ಮಾಡದೆ ಎಲ್ಲರು ಒಂದೇ ಎನ್ನುವಂತೆ ಮಾಡಿದವರು ಎಂದರು.
ಸಮಾಜದಲ್ಲಿ ಸಾವಿರಾರು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಒಂದು ಹೊತ್ತಿನ ಊಟವಿಲ್ಲದೆ ಪರಿತಪಿಸುತ್ತಿದ್ದಾರೆ. ಅಂಥವರ ನೆರವಿಗಾಗಿ ನಾವೆಲ್ಲರೂ ಮುಂದಾಗಬೇಕು. ಆದಿವಾಸಿಗಳು, ದಲಿತರ ಅಭಿವೃದ್ಧಿಗೆ ಕೈ ಜೋಡಿಸಬೇಕು. ಹಿಂಸೆ, ದಬ್ಟಾಳಿಕೆ, ದೌರ್ಜನ್ಯ ಇವೆಲ್ಲವನ್ನು ತ್ಯಜಿಸುವ ಮೂಲಕ ಅಹಿಂಸಾ ಮಾರ್ಗದಿಂದ ಮುನ್ನೆಡೆದರೇ ಮಾತ್ರ ಈ ಸಮಾಜಕ್ಕೆ ಒಂದು ನೆಲೆ ಇದೆ.
ಅಹಿಂಸಾ ಮಾರ್ಗದಿಂದಲ್ಲೇ ಈ ದೇಶ ಸದೃಡವಾಗಲು ಸಾಧ್ಯ. ಭಗವಾನ ಮಹಾವೀರರ ತತ್ವ-ಸಿದ್ದಾಂತಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಒಂದಾಗಬೇಕು ಎಂದರು. ಸಮಾಜದಲ್ಲಿ ವ್ಯಕ್ತಿ ಪೂಜೆ ಮುಖ್ಯವಲ್ಲ. ಸದ್ಗುಣಗಳು ಪೂಜೆ, ಅಹಿಂಸಾ ಮಾರ್ಗದ ಪೂಜೆ ನಡೆಯಬೇಕು.
ಯುವ ಪೀಳಿಗೆಗೆ ದುಶ್ಚಟಗಳ ದಾಸರಾಗದಂತೆ ತಡೆಯುವ ಮೂಲಕ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಎಂದರು. ತಹಶೀಲ್ದಾರ ಶಶಿಧರ ಮಾಡ್ಯಾಳ ಮಾತನಾಡಿದರು. ಬಿ.ಎ. ಪಾಟೀಲ ಭಗವಾನ ಮಹಾವೀರ ಜಯಂತ್ಯುತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರೊ| ಪಿ.ಎಸ್. ಧರಣೇಪ್ಪನವರ, ಆದಪ್ಪನವರ, ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟೆ, ವಿಮಲ ತಾಳಿಕೋಟೆ, ಕಾಗೇನವರ, ರಾಜೇಂದ್ರ ಬೀಳಗಿ, ರಮೇಶ ಕೋಠಾರಿ, ಅಮೃತ ಜೈನ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್.ವೈ. ಹೊಸಮನಿ, ಅಪರ್ ತಹಶೀಲ್ದಾರ ನಾಯ್ಕ, ಶಿರಸ್ತೆದಾರ ಅಂಗಡಿ, ಮಠದ ಸೇರಿದಂತೆ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.