ಶೆಟ್ಟರ ಗೆಲ್ಲಿಸಲು ವೀರಶೈವ ಲಿಂಗಾಯತ ಪ್ರಮುಖರ ಪ್ರತಿಜ್ಞೆ
Team Udayavani, Apr 30, 2023, 9:27 AM IST
ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯದ ವಿವಿಧ ಒಳಪಂಗಡಗಳ ಪ್ರಮುಖರು ಹು-ಧಾ ಕೇಂದ್ರ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್ ಮುಖಂಡ ಬಂಗಾರೇಶ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಪ್ರಮುಖರು ಕೈ ಎತ್ತುವ ಮೂಲಕ ಗೆಲ್ಲಿಸುವ ಪ್ರತಿಜ್ಞೆಗೈದರು. ಮಾಜಿ ಸಿಎಂ ಜಗದೀಶ ಶೆಟ್ಟರ
ಮಾತನಾಡಿ, ತಮಗೆ ಬಿಜೆಪಿಯಲ್ಲಿ ಆಗಿರುವ ಅಪಮಾನ, ಸ್ವಾಭಿಮಾನಕ್ಕೆ ಧಕ್ಕೆ ತಂದ ವಿದ್ಯಮಾನಗಳನ್ನು ವಿವರಿಸಿದರು. ಸಮಾಜದ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಂಗಾರೇಶ ಹಿರೇಮಠ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಗದೀಶ ಶೆಟ್ಟರ ಅವರಿಗೆ ಮತ್ತೆ ಅತ್ಯುನ್ನತ ಸ್ಥಾನ ದೊರೆಯುವ ಅವಕಾಶವಿದೆ. ನಾವೆಲ್ಲರೂ ಶೆಟ್ಟರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
ನೀಲಕಂಠ ಅಸೂಟಿ, ಪ್ರೊ| ಐ.ಜಿ. ಸನದಿ, ಅನಿಲಕುಮಾರ ಪಾಟೀಲ ಮಾತನಾಡಿ, ಜಗದೀಶ ಶೆಟ್ಟರ ಅವರು
ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದರಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ. ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದು, ಶೆಟ್ಟರ ಅವರು ಗೆಲುವಿನ ನಗೆ ಬೀರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡದೆ ನಾವೆಲ್ಲರೂ
ಶೆಟ್ಟರ ಗೆಲುವಿಗೆ ಶ್ರಮಿಸೋಣ ಎಂದರು. ಮುಖಂಡರಾದ ಬಾಪುಗೌಡ ಪಾಟೀಲ, ಶಿವಪುತ್ರಪ್ಪ ಕಮತರ, ಮಲ್ಲಿಕಾರ್ಜುನ ಸಾವಕಾರ, ಸದಾಶಿವಯ್ಯ ಹಿರೇಮಠ, ಕಲ್ಲಪ್ಪ ಯಲಿವಾಳ, ಆರ್.ಕೆ. ಪಾಟೀಲ, ಎಂ.ಎಸ್. ಪಾಟೀಲ, ಸುನಿಲ ಮಠಪತಿ, ಸರೋಜ ಹೂಗಾರ, ಸುನಿತಾ ಹುರಕಡ್ಲಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
Dharwad; 50 ಮಠಾಧೀಶರ ಸಭೆ: ಲಿಂಗಾಯತ ಧರ್ಮದ ಅಸ್ಮಿತೆ ಕಾಪಾಡುವ ಉದ್ದೇಶ
Dharwad: ಉಪನೋಂದಣಿ ಕಚೇರಿ ವಿದ್ಯುತ್ ಕಟ್ : ಸಾರ್ವಜನಿಕರ ಪರದಾಟ
Dharwad: ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಷಣಕ್ಕೆ ಸಚಿವ ಲಾಡ್ ಆಕ್ಷೇಪ
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.