ಅನಾಹುತ ಸಂಭವಿಸಿದ ನಂತರವೇ ಎಚ್ಚರಾಗೋದಾ?
Team Udayavani, Nov 22, 2017, 12:49 PM IST
ಹುಬ್ಬಳ್ಳಿ: ಅದು ಸರಿಸುಮಾರು ಒಂದುವರೆ ಶತಮಾನದ ಇತಿಹಾಸ ಹೊಂದಿದ ಶಾಲೆ. ಕಟ್ಟಡ ಶಿಥಿಲಗೊಂಡು ಯಾವಾಗ ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು, ಶಿಕ್ಷಕರು ದಿನದೂಡಬೇಕಾಗಿದೆ. ಕಟ್ಟಡ ಅಪಾಯಕರ ಸ್ಥಿತಿಯಲ್ಲಿದ್ದರೂ ಇದರ ತೆರವಿಗೆ ಶಿಕ್ಷಣ ಇಲಾಖೆ ಇನ್ನೂ ಮನಸ್ಸು ಮಾಡಿಲ್ಲ.
ಏನಾದರೂ ಅನಾಹುತವಾದ ಮೇಲೆ ನೋಡಿದರಾಯಿತು ಎಂದು ಕುಳಿತಿದೆಯೋ ಏನೋ. -ಇದು, ಇಲ್ಲಿನ ಪೆಂಡರಾಗಲ್ಲಿಯ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 2ರ ದುಸ್ಥಿತಿ. 1861ರಲ್ಲಿ ಆರಂಭವಾದ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವೇದಿಕೆಯಾಗಿದೆ.
ಇದೇ ಶಾಲೆಯಲ್ಲಿ ಕಲಿತ ಅನೇಕರು ಉತ್ತಮ ಸ್ಥಾನದಲ್ಲಿಯೂ ಇದ್ದಾರೆ. ಕಟ್ಟಡ ಶಿಥಿಲಗೊಂಡಿದೆ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಶಿಕ್ಷಣ ಇಲಾಖೆ ತನ್ನ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂಬ ಆರೋಪ ಪಾಲಕರದ್ದು.
ಶಾಲೆಯ ಹೊರಭಾಗದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಕಟ್ಟಡದ ಸುತ್ತಲು ಇರುವ ಸಜ್ಜಾ ಕಿತ್ತು ಹೋಗಿದೆ. ಒಳಭಾಗದಲ್ಲಿರುವ ಕಟ್ಟಡ ಗೋಡೆಗೆ ಹೊಂದಿಕೊಂಡು ಸೋರುತ್ತಿದೆ. ಮಳೆ ಬಂದರೆ ಮಕ್ಕಳು ಸೋರಿಕೆ ಕಟ್ಟಡದಲ್ಲೇ ಪಾಠ ಕೇಳಬೇಕು.
ಶೌಚಾಲಯದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಇಂದೋ ನಾಳೆಯೋ ಬೀಳುವಂತಿದೆ. ಈ ಹಿಂದೆ ಇದೇ ಕಟ್ಟಡದಲ್ಲಿದ್ದ ಪ್ರೌಢಶಾಲೆಯ ಮುಖ್ಯಾಧ್ಯಾಪಕರ ಕೊಠಡಿಯಲ್ಲಿ ಮೇಲ್ಭಾಗದ ಸಜ್ಜಾ ಕುಸಿದು ಬಿದ್ದಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ.
ಮೇಲ್ಛಾವಣಿ ಕುಸಿದು ಬಿದ್ದಾಗ ಮಕ್ಕಳು ಹಾಗೂ ಸಿಬ್ಬಂದಿ ಗಾಯಗೊಂಡಿದ್ದರು. ನ. 20ರಂದು ಶಾಲೆಯ ಗೋಡೆಯ ಭಾಗ ಕುಸಿದು ಬಿದ್ದು ಇಬ್ಬರು ಆಯಾಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಕ್ಕಳ ಮೇಲೆ ಗೋಡೆ ಬಿದ್ದರೆ ಗತಿ ಏನು ಎಂಬುದು ಶಿಕ್ಷಕರು ಹಾಗೂ ಪಾಲಕರ ಆತಂಕವಾಗಿದೆ.
ಕಟ್ಟಡದಲ್ಲಿ ಒಟ್ಟು 17 ಕೊಠಡಿಗಳಿದ್ದು ಸುಮಾರು 7 ಶಿಕ್ಷಕರು ಹಾಗೂ 128 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರೌಢಶಾಲೆಯ ಕಟ್ಟಡ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಪ್ರಾಥಮಿಕ ಶಾಲೆ ಮಾತ್ರ ಹಳೇ ಕಟ್ಟಡದಲ್ಲಿಯೇ ಮುಂದುವರಿದಿದೆ.
ಹಲವು ಬಾರಿ ಮನವಿ: ಶಾಲೆ ಕಟ್ಟಡ ನವೀಕರಣಕ್ಕೆ 2012 ಹಾಗೂ 2014ರಲ್ಲಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲವಾಗಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ಶಾಲೆ ಕೆಲಸಕ್ಕೆ ಹಾಜರಾಗಿ ಮೇಲ್ಭಾಗ ಕೊಠಡಿ ಸ್ವತ್ಛತೆಗೆ ತೆರಳಿದ್ದಾಗ ಕಟ್ಟಡ ಗೋಡೆ ಕುಸಿದು ಬಿತ್ತು.
ಗೋಡೆಯ ಸಿಮೆಂಟ್ ಗಿಲಾವ್ ಮಾಡಿರುವ ಪದರುಗಳು ಮೈ ಮೇಲೆಲ್ಲಾ ಬಿದ್ದವು. ನಮಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಕ್ಕಳಿದ್ದರೆ ಏನು ಗತಿ ಎಂಬುದು ಶಾಲೆಯ ಆಯಾಗಳಾದ ವಿದ್ಯಾ ನಾಶಿಪುಡಿ ಹಾಗೂ ಶೋಭಾ ಹಡಪದ ಅವರ ಮಾತು.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.