ವಾಲ್ಮಿಗೆ ಮತ್ತೆ ಜೀವಕಳೆ
Team Udayavani, Jul 12, 2018, 5:05 PM IST
ಹುಬ್ಬಳ್ಳಿ: ಸುಮಾರು ಮೂರು ದಶಗಳಿಂದ ಆರಂಭಗೊಂಡು ಕಾಲನಂತರದಲ್ಲಿ ತನ್ನ ವೈಭವದ ಸ್ಥಿತಿ ಕಳೆದುಕೊಂಡು ಇದ್ದೂ ಇಲ್ಲದಂತಿದ್ದ, ರಾಜ್ಯಕ್ಕೆ ಜಲ-ನೆಲ ನಿರ್ವಹಣೆಗೆ ಮಹತ್ವದ ವೇದಿಕೆಯಾಗಿದ್ದ ಧಾರವಾಡದ ವಾಲ್ಮಿಗೆ ಇದೀಗ ಮತ್ತೆ ಜೀವಕಳೆ ಚಿಗುರೊಡೆಯತೊಡಗಿದೆ.
ಆರಂಭದಲ್ಲಿ ಅವಿಭಜಿತ ಕಲಬುರಗಿ ಜಿಲ್ಲೆಯ ಭೀಮರಾಯನಗುಡಿಯಲ್ಲಿ ಮೈದಳೆದಿದ್ದ ಜಲ ಮತ್ತು ನೆಲ ನಿರ್ವಹಣೆ ಸೊಸೈಟಿ(ವಾಲ್ಮಿ), ನಂತರದಲ್ಲಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಾಗಿ ಧಾರವಾಡಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಧಾರವಾಡದಲ್ಲಿಯೇ ಶಾಶ್ವತವಾಗಿ ನೆಲೆ ನಿಂತಿದೆ. ರೈತರು ಹಾಗೂ ಎಂಜನಿಯರ್ ಗಳಿಗೆ ನೀರು ಮತ್ತು ಮಣ್ಣಿನ ನಿರ್ವಹಣೆ ಕುರಿತಾಗಿ ತರಬೇತಿ, ಮಾಹಿತಿ ನೀಡುವ ನಿಟ್ಟಿನಲ್ಲಿ ವಾಲ್ಮಿ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಮಳೆ ಅಭಾವ, ನೀರಿನ ಕೊರತೆ ಹೆಚ್ಚುತ್ತ ಸಾಗಿದ್ದು, ನೀರು ನಿರ್ವಹಣೆಗೆ ಅನಿವಾರ್ಯತೆ ಎದುರಾಗುತ್ತಿದ್ದು, ವಾಲ್ಮಿಯ ಸಂಶೋಧನೆ, ಸಲಹೆ, ಮಾರ್ಗದರ್ಶನ, ತರಬೇತಿ ಹೆಚ್ಚು ಹೆಚ್ಚು ಪ್ರಸ್ತುತತೆ ಪಡೆಯತೊಡಗಿದೆ.
ರಾಜ್ಯದಲ್ಲಿ ಜಲ-ನೆಲ ನಿರ್ವಹಣೆ ಉದ್ದೇಶದೊಂದಿಗೆ 1985ರಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೀಮರಾಯನಗುಡಿಯಲ್ಲಿ ಆರಂಭಗೊಂಡ ವಾಲ್ಮಿ ಸೊಸೈಟಿ, 1986, ಜೂ.16ರಂದು ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾಗಿತ್ತು. ನಂತರ 1986ಕ್ಕೆ ಧಾರವಾಡಕ್ಕೆ ಸ್ಥಳಾಂತರಗೊಂಡಿತ್ತು. ವಾಲ್ಮಿ ಸಂಸ್ಥೆ ವ್ಯಾಪ್ತಿಯಲ್ಲಿ ಸುಮಾರು 137 ಎಕರೆ ಜಮೀನು ಇದ್ದು, ಇದರಲ್ಲಿ ಸುಮಾರು 53 ಎಕರೆ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ಹಾಗೂ ಸುಮಾರು 14 ಎಕರೆ ತೋಟಗಾರಿಕೆ ಬೆಳೆಗಳಿಗೆ ಬಳಕೆಯಾಗುತ್ತಿದೆ. ನೀರು ಮತ್ತು ಮಣ್ಣಿನ ನಿರ್ವಹಣೆ ತರಬೇತಿಗೆಂದು ಬರುವ ರೈತರ ವಾಸ್ತವ್ಯಕ್ಕೆಂದು ಸುಮಾರು 100 ಹಾಸಿಗೆಗಳ ವಸತಿ ಗೃಹವಿದ್ದು, ಇದು ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಮಸೂರಿನಲ್ಲಿನ ವಸತಿಗೃಹದಷ್ಟೇ ಹಲವು ಸೌಲಭ್ಯಗಳನ್ನು ಹೊಂದಿದೆ. ಇದರ ಜತೆಗೆ ವಾಲ್ಮಿಅಧಿಕಾರಿಗಳು, ಸಿಬ್ಬಂದಿ ಇನ್ನಿತರರಿಗೆಂದು ಸುಮಾರು 195 ವಸತಿ ಗೃಹಗಳನ್ನು ಹೊಂದಿದೆ. ರೈತರು ಹಾಗೂ ಎಂಜನಿಯರ್‌ಗಳಿಗೆ ನೀರು ಮತ್ತು ಮಣ್ಣಿನ ನಿರ್ವಹಣೆ ತರಬೇತಿ, ಪ್ರಾತ್ಯಕ್ಷಿಕೆಗೆ ಹಲವು ಸಲಕರಣೆ, ಮಾದರಿಗಳನ್ನು ಸಂಸ್ಥೆ ಹೊಂದಿದೆ. ಅತ್ಯುತ್ತಮ ಆಡಳಿತ ಭವನವೂ ಇದೆ.
ಜಲ-ನೆಲ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ಜ್ಞಾನ, ವಿಜ್ಞಾನ ಪ್ರೋತ್ಸಾಹಿಸುವುದು, ರೈತರಿಗೆ, ಕೃಷಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ(ಕಾಡಾ), ನೀರಾವರಿ ನಿಗಮಗಳು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ, ಜಲ-ನೆಲ ನಿರ್ವಹಣೆಯಲ್ಲಿ ಸಂಶೋಶನೆ, ಮಾರ್ಗದರ್ಶನ, ವಿಶ್ವವಿದ್ಯಾಲಯಗಳು, ಸಂಬಂಧಿತ ಶೈಕ್ಷಣಿಕ, ತರಬೇತಿ ಸಂಸ್ಥೆಗಳೊಂದಿಗೆ ಸಹಯೋಗದ ಉದ್ದೇಶ ವಾಲ್ಮಿಯದ್ದಾಗಿದೆ.
ಪಾಳುಬಿದ್ದ-ತುಕ್ಕು ಹಿಡಿದ ಸ್ಥಿತಿ: ವಾಲ್ಮಿ ಸಂಸ್ಥೆ ಕೆಲವು ಭಾಗವನ್ನು ಐಐಟಿಗೆ ನೀಡಲಾಗಿದೆ. ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೆ ವಾಲ್ಮಿಯ ನಿರ್ದೇಶಕರ ವಸತಿ ಗೃಹ ಹಾಗೂ ಸಿಬ್ಬಂದಿ ವಸತಿ ಗೃಹ ಸೇರಿದಂತೆ ಅನೇಕ ಕಟ್ಟಡಗಳು ಪಾಳು ಅನೇಕ ಕಟ್ಟಡಗ ಪಾಳು ಬಿದ್ದ ಸ್ಥಿತಿಯಲ್ಲಿವೆ. ತರಬೇತಿ ಕೋಣೆಗಳು ವಿವಿಧ ಸಾಮಗ್ರಿ, ಪರಿಕರಗಳನ್ನು ಸಂಗ್ರಹಿಸುವ ಗೋದಾಮು ರೂಪ ಪಡೆದಿದ್ದವು. ಕೆಲವೊಂದು ವಾಹನಗಳು ಬಳಕೆಯಾಗದೆ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದವು. ರೈತರಿಗೆ ಪ್ರಾತ್ಯಕ್ಷಿಕೆ ಸ್ಥಳಗಳಲ್ಲಿ ಮುಳ್ಳುಕಂಟಿ ಬೆಳೆದು ನಿಂತ ಸ್ಥಿತಿಯಲ್ಲಿದ್ದವು. ತರಬೇತಿಗೆಂದು ಬರುವ ರೈತರಿಗೆ ವಸತಿ ವ್ಯವಸ್ಥೆ ಒದಗಿಸಲು ನಿರ್ಮಿಸಿದ ಕಟ್ಟಡವನ್ನು ಐಐಟಿಗೆ ನೀಡಲಾಗಿದ್ದು, ಅದು ಇದೀಗ ವಿದ್ಯಾರ್ಥಿನಿಯರ ಹಾಸ್ಟೆಲ್ ಆಗಿದೆ. ಕೆಲವೊಂದು ಕಟ್ಟಡಗಳನ್ನು ಐಐಟಿಯವರು ನವೀಕರಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ತರಬೇತಿ ಕೋಣೆಗಳಲ್ಲಿ ಕೆಲವು ನವೀಕರಣಗೊಂಡಿವೆ. ಒಂದೆರಡು ವಾಹನಗಳು ಪುನರ್ ಬಳಕೆ ಆಗುತ್ತಿವೆ. ಅನೇಕ ಕಡೆ ಮುಳ್ಳು ಕಂಟಿಗಳನ್ನು ತೆಗೆಯಲಾಗಿದ್ದು, ಸುಮಾರು 250 ವಿವಿಧ ಸಸಿಗಳನ್ನು ನೆಡಲಾಗುತ್ತಿದೆ. ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ. ವಾಲ್ಮಿಪ್ರಾಂಗಣದಲ್ಲಿ ಮತ್ತೆ ಜೀವಕಳೆ ಮರುಳಿಸುವ ಆಶಾಭಾವನೆ ಗೋಚರಿಸುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಅಗತ್ಯ ಆರ್ಥಿಕ ನೆರವು ಕಲ್ಪಿಸಬೇಕಾಗಿದೆ.
ನೀರು ಮತ್ತು ಮಣ್ಣಿನ ಸಮರ್ಪಕ ನಿರ್ವಹಣೆ ಕುರಿತ ವಾಲ್ಮಿಯ ಮಹತ್ವದ ಧ್ಯೇಯ ರೈತರ ಮನ-ಹೊಲಗಳಿಗೆ ತಲುಪಬೇಕು. ನೀರು ಬಳಕೆ ಲೆಕ್ಕಾಚಾರ, ಮಳೆ, ಹವಾಮಾನ ಬದಲಾವಣೆಯನ್ನು ರೈತರು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವಂತಾಗಬೇಕು. ವಾಲ್ಮಿಯ ಸುಧಾರಣೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಡಾ| ರಾಜೇಂದ್ರ ಪೋದ್ದಾರ,
ನಿರ್ದೇಶಕರು, ವಾಲ್ಮಿಧಾರವಾಡ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.