ತುಮರಿಕೊಪ್ಪ ಗ್ರಾಮಸ್ಥರಿಗೆ ಜಲಬೇನೆ
•ಗಲೀಜು ಟ್ಯಾಂಕ್‌ಗಳು•ಆಸ್ಪತ್ರೆಯೇ ತವರುಮನೆ•ಜನರ ಕಾಳಜಿ ಯಾವಾಗ?
Team Udayavani, Aug 2, 2019, 9:08 AM IST
ಕಲಘಟಗಿ: ನೀರಿನ ಟ್ಯಾಂಕ್‌ಗಳ ಅಸ್ವಚ್ಛತೆಯಿಂದ ಜನರು ಹಲವು ರೋಗಗಳಿಂದ ನರಳುವಂತಾಗಿದೆ. ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಇಂತಹದೆ ಪರಿಸ್ಥಿತಿ ನಿರ್ಮಾಣಗೊಂಡಿದ್ದು ತುಮರಿಕೊಪ್ಪ ತಾಜಾ ಉದಾಹರಣೆಯಾಗಿದೆ. ಕುಡಿಯುವ ನೀರಿನ ಅವ್ಯವಸ್ಥೆ, ಅಸಮರ್ಪಕ ನೀರಿನ ಟ್ಯಾಂಕ್‌ಗಳ ವ್ಯವಸ್ಥೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿವೆ.
ತಾಲೂಕಾಸ್ಪತ್ರೆ ಈಗ ತುಮರಿಕೊಪ್ಪ ಜನತೆಯ ತವರುಮನೆಯಂತಾಗಿದೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಲಿಸಿದರೆ ತುಮರಿಕೊಪ್ಪದ ಜನರೇ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಹಾಗೂ ಮಲೇರಿಯಾ ರೋಗದಿಂದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಎಲ್ಲ ಕಾಯಿಲೆಗಳಿಗೆ ಮುಖ್ಯ ಕಾರಣ ಗ್ರಾಮಕ್ಕೆ ಬಿಡುತ್ತಿರುವ ನೀರು ಎಂಬ ದೂರು ಜನರಿಂದ ಕೇಳಿಬರುತ್ತಿದೆ.
ಈ ಗ್ರಾಮದಲ್ಲಿರುವ 2 ನೀರಿನ ಟ್ಯಾಂಕ್‌ಗಳು ಅಸ್ವಚ್ಛತೆಯಿಂದ ಕೂಡಿವೆ. ಟ್ಯಾಂಕ್‌ಗಳ ಒಳಗಡೆ ಮುರಿದು ಬಿದ್ದ ಸಿಮೆಂಟಿನ ತುಂಡುಗಳು, ಗಿಡ-ಮರಗಳ ಎಲೆಗಳು, ತುಕ್ಕು ಹಿಡಿದು ಮುರಿದು ಬಿದ್ದಿರುವ ಕಬ್ಬಿಣದ ತುಂಡುಗಳು, ಟ್ಯಾಂಕ್‌ಗೆ ಮುಚ್ಚಳವೇ ಇಲ್ಲದಿರುವುದರಿಂದ ಹೊಲಸು ತುಂಬಿಕೊಂಡು ಗಬ್ಬು ನಾರುತ್ತಿವೆ. ಇದೇ ನೀರನ್ನು ಊರಿನ ಜನತೆ ಕುಡಿಯಲು ಉಪಯೋಗಿಸುತ್ತಿದ್ದು, ಮಲೇರಿಯಾದಂತಹ ರೋಗಗಳಿಗೆ ಮುಖ್ಯ ಕಾರಣವಾಗಿದೆ.
ಮುನ್ನೆಚ್ಚರಿಕೆಗೆ ಸೂಚನೆ: ತೀವ್ರವಾದ ಮೈ ಕೈನೋವು, ತಲೆ ನೋವು, ಜ್ವರ ವಾಂತಿ ಭೇದಿ ಜನರಲ್ಲಿ ಕಂಡುಬಂದು ಮಲೇರಿಯಾದಂತ ದೈತ್ಯ ರೋಗಕ್ಕೆ ಕಾರಣವಾಗುತ್ತದೆ. ಜನರು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಇಂತಹ ರೋಗಗಳಿಂದ ದೂರ ಇರಬಹುದು. ನಲ್ಲಿಯಿಂದ ಬಂದ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಹೆಚ್ಚು ದಿನ ನೀರನ್ನು ಸಂಗ್ರಹಿಸಿ ಇಡಬಾರದು. ಶುದ್ಧ ಘಟಕದ ನೀರನ್ನು ಕುಡಿಯಬೇಕು. ಮನೆಯಲ್ಲಿ ನೀರು ಸಂಗ್ರಹದ ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ.
ಗ್ರಾಮದ ಜನರು ಮನೆಯಲ್ಲಿರುವ ನೀರು ಶೇಖರಿಸಿಡುವ ಸಾಮಗ್ರಿ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಮುಖ್ಯ ಟ್ಯಾಂಕ್‌ನಿಂದ ಬರುವ ನೀರು ಶುದ್ಧವಾಗಿರದೇ ಇರುವುದು ಎಲ್ಲ ರೋಗಗಳಿಗೆ ಕಾರಣವಾಗಿದೆ. ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ನಾಮಕಾವಸ್ಥೆ ಕಾರ್ಯ ಜರುಗಿಸುತ್ತಿದ್ದು, ಬಹುತೇಕ ಘಟಕಗಳು ಸ್ಥಗಿತಗೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನ ಹರಿಸಬೇಕಿದೆ. ಎಲ್ಲ ಗ್ರಾಮಗಳ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.
•ಪ್ರಭಾಕರ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.