ಧಾರವಾಡದಲ್ಲಿ 12ದಿನಕ್ಕೊಮ್ಮೆ ನೀರು!

•24 ಗಂಟೆ ನೀರು ಪೂರೈಕೆ ನಗರದಲ್ಲೇ ಹಾಹಾಕಾರ •ಬತ್ತಿದ ನೀರಸಾಗರ ಕೆರೆ, ಮಲಪ್ರಭಾ ಮೇಲೆ ಒತ್ತಡ

Team Udayavani, May 17, 2019, 11:32 AM IST

hubali-tdy-9..

ಧಾರವಾಡ: 24/7 ನೀರು ಪೂರೈಕೆ ಸೌಲಭ್ಯದ ದೇಶದ ಮೊದಲ ಮಹಾನಗರ ಎಂಬ ಹಣೆಪಟ್ಟಿ ಹೊತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವಳಿ ನಗರದಲ್ಲಿಯೇ 10-12ದಿನಕ್ಕೊಮ್ಮೆ ನೀರು ನೀಡುತ್ತಿದ್ದು, ಕೆಲವೊಂದು ಹಳ್ಳಿಗಳಿಗೆ ಬೇಸಿಗೆ ಮೊದಲೇ ಟ್ಯಾಂಕರ್‌ ನೀರು ಆಸರೆಯಾಗಿದೆ.ಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡ

ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ 24/7 ನೀರು ಪೂರೈಕೆ ಯೋಜನೆ ಇದೆ. ಜಿಲ್ಲೆಯ ಕೆಲವೊಂದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಇನ್ನು ಕೆಲವು ಕಡೆ ಪ್ರಸ್ತಾವನೆ ಹಂತದಲ್ಲಿದೆ. ಹಳೇ ಹುಬ್ಬಳ್ಳಿಗೆ ಆಸರೆಯಾಗಿದ್ದ ನೀರಸಾಗರ ಕೆರೆ ಬತ್ತಿದೆ. ಮಲಪ್ರಭಾ ನದಿಯ ಜಲಾಯಶ ನೀರಿನ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.

ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆ ಮೇಲೆಯೇ ಅವಳಿನಗರ, ಕೆಲವೊಂದು ಹಳ್ಳಿಗಳು ಅವಲಂಬನೆಯಾಗಿವೆ. ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ, ನೀರು ಪೂರೈಕೆಯಲ್ಲಿ ಸೋರಿಕೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದು, ಕುಡಿಯುವ ನೀರಿನ ಬವಣೆ ಹೆಚ್ಚುವಂತೆ ಮಾಡಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಇದು ಇನ್ನಷ್ಟು ಹೆಚ್ಚುತ್ತಿದೆ.

ಮಲಪ್ರಭಾ ನದಿ ಜಲಾಶಯದಿಂದ ಸಗಟು ನೀರು ಪೂರೈಕೆಗೆ ಮತ್ತೂಂದು ಪೈಪ್‌ಲೈನ್‌ ಹಾಕಲು ಅಂದಾಜು 24 ಕೋಟಿ ರೂ.ಗಳ ಪ್ರಸ್ತಾವನೆ ಇದೆಯಾದರೂ ಪಾಲಿಕೆಯಿಂದಲೇ ಹಣ ಭರಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆಗೆ ಮೀನಮೇಷ ತೋರಿತ್ತು. ಈಗಲೂ ಯೋಜನೆ ಅತಂತ್ರ ಸ್ಥಿತಿಯಲ್ಲಿಯೇ ಉಳಿಯುವಂತಾಗಿದೆ.

ಒಂದು ಕಡೆ ಹಳೇ ಹುಬ್ಬಳ್ಳಿಗೆ ನೀರು ಪೂರೈಕೆಯ ನೀರಸಾಗರ ಕೆರೆ ಮಳೆ ಕೊರತೆಯಿಂದ ಬತ್ತಿ ಹೋಗಿದೆ. ಇನ್ನೊಂದು ಕಡೆ ಮಲಪ್ರಭಾ ನದಿ ಜಲಾಶಯ ಮೇಲಿನ ನೀರಿನ ಅವಲಂಬನೆ ಹೆಚ್ಚುತ್ತಿದೆ. ಮಹಾನಗರದಲ್ಲಿ ಹೊಸ ಬಡಾವಣೆಗಳು ಹೆಚ್ಚುತ್ತಲೇ ಸಾಗಿವೆ. ಕಳಸಾ-ಬಂಡೂರಿ ನಾಲಾ ಯೋಜನೆಯಿಂದ 5.6 ಟಿಎಂಸಿ ಆಡಿ ನೀರು, ಕಾಳಿ ನದಿ ಯೋಜನೆಯಿಂದ ನೀರು ಹೀಗೆ ಯೋಜನೆಗಳು ಕಾಗದಗಳಲ್ಲಿ ಮೊಳಗುತ್ತಿವೆಯಾದರೂ, ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಸಹಕಾರಿಯಂತೂ ಆಗುತ್ತಿಲ್ಲ.

ಖಾಸಗಿ ಕೊಳವೆ ಬಾವಿಗಳಿಂದಲೂ ನೀರು: ಜಿಲ್ಲೆಯಲ್ಲಿ 17 ಖಾಸಗಿ ಒಡೆತನದ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಅವುಗಳಿಂದಲೂ ನೀರು ಪೂರೈಸುವ ಕಾರ್ಯ ಸಾಗಿದೆ. ಧಾರವಾಡ ತಾಲೂಕಿನ ತಡಕೋಡ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ನೂಲ್ವಿ, ಅಂಚಟಗೇರಿ, ಅಗಡಿ, ಸುಳ್ಳ, ಕಲಘಟಗಿ ತಾಲೂಕಿನ ಮುಕ್ಕಲ್, ಕಂಪ್ಲಿ, ಅರಳಿಹೊಂಡ, ಹಟಕಿನಾಳ, ಕುಂದಗೋಳದ ಹಿರೇಗುಂಜಾಳದ ಖಾಸಗಿ ಒಡೆತನದ ಕೊಳವೆ ಬಾವಿಗಳು ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ತಮ್ಮದೇ ಸೇವೆ ನೀಡುತ್ತಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ನೀರಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಖಾಸಗಿ ಬೋರವೆಲ್ಗಳನ್ನೂ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇದಲ್ಲದೇ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳು ಕಾರ್ಯ ನಿರ್ವಹಿಸುತ್ತಿದ್ದು, ನೀರಿನ ಕುರಿತಂತೆ ದೂರು ಬಂದ ತಕ್ಷಣವೇ ಸ್ಪಂದನೆ ನೀಡಲಾಗುತ್ತಿದೆ.
-ರಾಜಶೇಖರ ಮುನವಳ್ಳಿ, ಕಾರ್ಯ ನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಧಾರವಾಡ
ಕೊಳವೆ ಬಾವಿಗಳೇ ಆಧಾರ:

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 338 ಹಳ್ಳಿಗಳಿದ್ದು, 2 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳಿವೆ. 72 ಹಳ್ಳಿಗಳಿಗೆ ಮಲಪ್ರಭಾ ನೀರು ಪೂರೈಕೆ ಇದ್ದರೆ ಉಳಿದ 316 ಗ್ರಾಮಗಳಿಗೆ ಕೊಳವೆ ಬಾವಿಗಳೇ ಆಧಾರ. ಈ ಪೈಕಿ ಕೆಲವೊಂದಿಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇದ್ದರೆ ಕೆಲವೊಂದಿಷ್ಟು ಕೊಳವೆ ಬಾವಿ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ 5 ಕೋಟಿ ರೂ. ಹಣ ನೀಡಿದೆ. ನೀರಿನ ಕೊರತೆ ನೀಗಿಸಲು 75 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
.ಶಶಿಧರ ಬುದ್ನಿ

ಟಾಪ್ ನ್ಯೂಸ್

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

18-bng

Bengaluru: ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ

17-bng

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

15-bng

Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.