ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ
Team Udayavani, Oct 28, 2020, 8:53 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಇಂದು ನಡೆದ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಶೇ.70.11 ರಷ್ಟು ಮತದಾನ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ಶೇ.68.65 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.67.89 ರಷ್ಟು, ಗದಗ ಜಿಲ್ಲೆಯಲ್ಲಿ ಶೇ.74.59 ರಷ್ಟು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.71.08 ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ 13282 ಪುರುಷ ಮತದಾರರಿದ್ದರೆ ಆ ಪೈಕಿ 9867 ಜನ ಮತದಾನ ಮಾಡಿದ್ದಾರೆ. 8263 ಜನ ಮಹಿಳಾ ಮತದಾರರಿದ್ದರೆ ಆ ಪೈಕಿ 4926 ಜನ ಮತದಾನ ಮಾಡಿದ್ದಾರೆ. ಇತರೆ 4 ಜನ ಮತದಾರರಿದ್ದರೆ ಅವರಾರೂ ಮತದಾನ ಮಾಡಿಲ್ಲ. ಒಟ್ಟು 21549 ಜನ ಮತದಾರರ ಪೈಕಿ 14793 ಜನ ಮತದಾನ ಮಾಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 16220 ಜನ ಪುರುಷ ಮತದಾರರಿದ್ದರೆ ಆ ಪೈಕಿ 11699 ಜನ ಮತದಾನ ಮಾಡಿದ್ದರೆ, 7378 ಮಹಿಳಾ ಮತದಾರರ ಪೈಕಿ 4324 ಜನ ಹಕ್ಕು ಚಲಾಯಿಸಿದ್ದಾರೆ. ಇತರೆ 5 ಜನ ಇದ್ದರೆ ಇವರಾರೂ ಮತದಾನ ಮಾಡಿಲ್ಲ. ಒಟ್ಟಾರೆ 23603 ಜನ ಮತದಾರರ ಪೈಕಿ ಹಾವೇರಿ ಜಿಲ್ಲೆಯಲ್ಲಿ 16023 ಜನ ಮತದಾನ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ 10979 ಜನ ಪುರುಷ ಮತದಾರರಿದ್ದರೆ ಆ ಪೈಕಿ 8579 ಜನ ಮತದಾನ ಮಾಡಿದ್ದರೆ, ಒಟ್ಟು 4998 ಜನ ಮಹಿಳಾ ಮತದಾರರ ಪೈಕಿ 3339 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯೂ ಇತರೆ ಒಬ್ಬರು ಮತದಾರರಿದ್ದು, ಅವರೂ ಮತ ಚಲಾವಣೆ ಮಾಡಿಲ್ಲ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 7113 ಜನ ಪುರುಷ ಮತದಾರರಿದ್ದು, ಈ ಪೈಕಿ 5519 ಜನ ಮತದಾನ ಮಾಡಿದ್ದಾರೆ. 6034 ಮಹಿಳಾ ಮತದಾರರ ಪೈಕಿ 3826 ಜನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಇತರೆ ಒಬ್ಬರು ಮತದಾರರಿದ್ದು, ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಜಿಲ್ಲೆಯ ಒಟ್ಟು 13148 ಮತದಾರರ ಪೈಕಿ 9346 ಜನ ಮತದಾನ ಮಾಡಿದ್ದಾರೆ.
ನಾಲ್ಕೂ ಜಿಲ್ಲೆ ಸೇರಿದಂತೆ 35664 ಜನ ಪುರುಷರು, 16415 ಮಹಿಳಾ ಮತದಾರರು ಹಾಗೂ ಇತರೆ ಒಬ್ಬರು ಸೇರಿದಂತೆ ಒಟ್ಟು 74278 ಮತದಾರರ ಪೈಕಿ 52080 ಮತದಾರರು ಮತದಾನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.