ಅವಳಿ ನಗರ ಅಭಿವೃದ್ಧಿಗೆ ಹೊರಟ್ಟಿ ಕೊಡುಗೆ ಏನು?
Team Udayavani, Nov 22, 2017, 12:49 PM IST
ಹುಬ್ಬಳ್ಳಿ: ಶಿಕ್ಷಕರ ಮತಕ್ಷೇತ್ರದಿಂದ ಕಳೆದ 30 ವರ್ಷಗಳಿಂದ ಆಯ್ಕೆಯಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಬಸವರಾಜ ಹೊರಟ್ಟಿ ಅವರು ಹು-ಧಾ ಅಭಿವೃದ್ಧಿಗೆ ತಮ್ಮ ಕೊಡುಗೆ ಏನೆಂಬುದನ್ನು ಮೊದಲು ತಿಳಿಸಲಿ. ಇನ್ನುಳಿದವರು ಅವಳಿ ನಗರಕ್ಕೆ ಏನು ಮಾಡಿದ್ದಾರೆಂಬುದರ ಬಗ್ಗೆ ಧ್ವನಿಸುರುಳಿ ಹರಿಬಿಡುವ ಮನಸ್ಥಿತಿಯಿಂದ ಹೊರಬರಲಿ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹೇಳಿದ್ದಾರೆ.
ಹು-ಧಾ ಸಮಸ್ಯೆಗಳ ಕುರಿತು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ ಬಗ್ಗೆ ಅದೇ ರಾಗ ಅದೇ ಹಾಡನ್ನೇ ಹೊರಟ್ಟಿ ಅವರು ಸದನದಲ್ಲೂ ಹಾಡುತ್ತಿದ್ದಾರೆ. ಅವರಿಬ್ಬರ ಸತತ ಪ್ರಯತ್ನದಿಂದಲೇ ನಗರದಲ್ಲಿ ಯುಜಿಡಿ, ಕುಡಿಯುವ ನೀರಿನ 24/7 ವ್ಯವಸ್ಥೆ ಯೋಜನೆಗಳಿಗೆ ಚಾಲನೆ ದೊರೆತು ಪ್ರಸ್ತುತ ನಗರದ 26 ವಾರ್ಡ್‌ಗಳಲ್ಲಿ ನಿರಂತರ ನೀರಿನ ವ್ಯವಸ್ಥೆ ಕಾರ್ಯಗತವಾಗುತ್ತಿದೆ.
ಅಲ್ಲದೇ ಜೋಶಿ ಅವರ ವಿಶೇಷ ಪ್ರಯತ್ನದಿಂದ ಅವಳಿ ನಗರಗಳ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರಕಾರದಿಂದ ಸಿಆರ್‌ಎಫ್ ನಿಧಿಯಡಿ 442 ಕೋಟಿ ರೂ. ಅನುದಾನ ದೊರೆತಿದೆ. ಇದು ಬಂದು 2 ವರ್ಷಗಳಾದರೂ ರಾಜ್ಯ ಸರಕಾರ ಮಂಜೂರಾದ ರಸ್ತೆಗಳ ಸುಧಾರಣಾ ಕಾಮಗಾರಿಗಳಿಗೆ ಟೆಂಡರ್ ಕರೆಯುತ್ತಿಲ್ಲ.
ಜೊತೆಗೆ ಜಿಲ್ಲಾ ಉಸ್ತುವಾರ ಸಚಿವ ವಿನಯ ಕುಲಕರ್ಣಿ ಪಾಲಿಕೆಗೆ ಬೇರೆ ಬೇರೆ ಯೋಜನೆಗಳಿಗಾಗಿ ನೆಲ ಹಾಗೂ ರಸ್ತೆ ಅಗೆದು ಗುಂಡಿ ಮುಚ್ಚಲು ಇರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ಹೇಳುವ ಮೂಲಕ ತಮ್ಮ ಅಸಾಮರ್ಥ್ಯ ತೋರಿಸಿದ್ದಾರೆ ಎಂದರು.
ಕಳೆದ 4 ವರ್ಷಗಳಿಂದ ಪಾಲಿಕೆಯ ನಿವೃತ್ತ ನೌಕರರ 150 ಕೋಟಿ ರೂ. ಮಂಜೂರು ಆಗಿಲ್ಲ. ಹೀಗಾಗಿ ನಿವೃತ್ತ ನೌಕರರ ಜೀವನಾಂಶವಾದ ಪಿಂಚಣಿಯನ್ನು ಅನಿವಾರ್ಯವಾಗಿ ಬೇರೆ ಮೂಲಗಳಿಂದ ಪಾವತಿ ಮಾಡಲಾಗುತ್ತಿದೆ. ಈ ವಿಷಯ ಗೊತ್ತಿದ್ದರೂ ಹೊರಟ್ಟಿ ಹಾಗೂ ಸಚಿವ ಕುಲಕರ್ಣಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸರಕಾರದಿಂದ ಆ ಹಣ ತರುವ ಕಾರ್ಯವೇಕೆ ಮಾಡಿಲ್ಲವೆಂಬ ಬಗ್ಗೆ ಜನರಿಗೆ ಸಮಜಾಯಿಷಿ ನೀಡಲಿ.
ಇವರಿಬ್ಬರು ಸಿಎಂ ಬಳಿ ಕುಳಿತು ಪಿಂಚಣಿ ಹಣ ಮಂಜೂರು ಮಾಡಿಸಲಿ. ಆನಂತರವಷ್ಟೇ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ ಬಗ್ಗೆ ಮಾತನಾಡುವ ನೈತಿಕತೆ ಪಡೆಯಲಿ ಎಂದು ಪ್ರದೀಪ ಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.