ಗಡಿನಾಡಿಗರ ಕಾಳಜಿ ಇರಲಿ

Team Udayavani, Mar 26, 2017, 2:25 PM IST

hub6.jpg

ಧಾರವಾಡ: (ಡಾ|ಎಂ.ಎಂ.ಕಲಬುರ್ಗಿ ವೇದಿಕೆ)ನಡುನಾಡಿಗರು ಗಡಿನಾಡ ಕನ್ನಡಿಗರ ಕಾಳಜಿ ಮಾಡದೇ ಹೋದರೆ ಕನ್ನಡದ ಉಳಿವು ಕಷ್ಟವಾಗುತ್ತದೆ ಎಂದು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕವಿ ವಿ.ಸಿ.ಐರಸಂಗ ಸಲಹೆ ನೀಡಿದರು. ನಗರದ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಶನಿವಾರ ನಾಡೋಜ ಡಾ|ಎಂ.ಎಂ.ಕಲಬುರ್ಗಿ ಮಹಾವೇದಿಕೆಯಲ್ಲಿ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷತೆಯ ಭಾಷಣ ಮಾಡಿದರು.

ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ನಾಡು-ನುಡಿಗಾಗಿ ಸಾಕಷ್ಟು ಮಹನೀಯರು ಶ್ರಮಿಸಿದ್ದು, ಆದರೆ ಈಗ ಗಡಿಭಾಗದಲ್ಲಿ ಕನ್ನಡ ಮಂಕಾಗುತ್ತಿದೆ. ಕನ್ನಡಿಗರು ಬಡವಾಗುತ್ತಿದ್ದರೂ ಸರಕಾರದ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ. ಒಳನಾಡಿನಲ್ಲಿರುವ ನಾವು ಗಡಿನಾಡಿಗರ ಕಡೆ ಗಮನ ಹರಿಸಬೇಕಿದೆ. ಅವರ ಭಾವನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.

ಅಂದಾಗ ಮಾತ್ರ ಅವರನ್ನು ಕನ್ನಡ  ನಾಡು ನುಡಿಯ ಮುಖ್ಯವಾಹಿನಿಗೆ ತಂದಂತಾಗುತ್ತದೆ. ಅದರಿಂದ ಅವರ ಆತ್ಮಸ್ಥೈರ್ಯ ಹೆಚ್ಚಾಗುವ ಮೂಲಕ ನಾಡು ನುಡಿಯ ಬಗ್ಗೆ ಅಪಾರ ಗೌರವ ತನ್ನಿಂದ ತಾನೇ ಮೂಡಲಿದೆ ಎಂದರು. ಸಮ್ಮೇಳನದ ಮೂಲಕ ಆಳುವ ಸರ್ಕಾರಗಳಿಗೆ ಮಾತೃಭಾಷೆ ಉಳಿವಿಗೆ ಒತ್ತಡ ಹೇರುವ ಪ್ರಾಮಾಣಿಕ ಕೆಲಸಗಳು ನಡೆಯಬೇಕು. ಅಂದಾಗ ಕನ್ನಡ ಬೆಳೆಯಲಿದೆ ಎಂದರು. 

ಶರಣರು ಕವಿಗಳಲ್ಲವೇ?: ಗದ್ಯದ ಸಾಲುಗಳನ್ನೇ ಸ್ವೇಚ್ಛೆಯಿಂದ ತುಂಡರಿಸಿ ಆ ತುಂಡುಗಳನ್ನು ಒಂದರ ಕೆಳಗೆ ಒಂದರಂತೆ ಬರೆದುದೆಲ್ಲ ಕಾವ್ಯ ಎನಿಸಿಹ ಕಾಲವಿದು. ಅವನ್ನು ಬರೆದವರೆಲ್ಲಾ ಕವಿಗಳೆನಿಸಿ ಪದವಿ ಪ್ರಶಸ್ತಿಗಳನ್ನೂ ಪಡೆದರು. ಇದೊಂದು ವಿಪರ್ಯಾಸ. ಹಾಗೇ ನೋಡಿದರೆ ಶರಣರು ಬರೆದ ಸಾಹಿತ್ಯವನ್ನು ವಚನಗಳೆನ್ನದೆ ಕಾವ್ಯ ಎಂದು ಏಕೆ ಅನ್ನಲಿಲ್ಲ? ಶರಣರಿಗೆಲ್ಲರಿಗೆ ಕವಿಗಳೆಂದು ಏಕೆ ಅನ್ನಲಿಲ್ಲ? ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಬೇಕಿದೆ.

ಲಯಬದ್ಧವಾದ ಪದ್ಯಗಳನ್ನು ಬರೆಯವ ಹವ್ಯಾಸವನ್ನು ಉಳಿಸಿಕೊಂಡು ಹೋಗುವ ಕವಿಗಳ ಅವಶ್ಯಕತೆ ಇದೆ ಎಂದರು. ಭ್ರಷ್ಟಾಚಾರ ಪಿಡುಗು ಇಂದೂ ಜೀವಂತವಾಗಿದೆ. ಆರ್‌ಟಿಐ  ಯೋಜನೆಗಳು, ಲೋಕಾಯುಕ್ತ ನೇಮಕಾತಿ ಕೆಲವು ಹಂತದವರೆಗೆ ಸಹಕಾರಿ ಎನಿಸಿವೆ.

ಆದರೆ, ಈ ಪಿಡುಗುಗಳ ಉನ್ಮೂಲನೆ ಸಾಧ್ಯವಾಗದಿರುವುದು ಶೋಚನೀಯ. ನ್ಯಾಯಾಂಗದ ವ್ಯವಸ್ಥೆ ಪರಾಕಾಷ್ಟೆ ತಲುಪಿದೆ. ಸಾವಿರ-ಲಕ್ಷ ಪ್ರಕರಣಗಳು ನ್ಯಾಯ ಕಾಣದೆ ತೀಪುದಾರರು ಇಂದಿಗೂ ಕೋರ್ಟ್‌ಗೆ ಎಡತಾಕುವುದು ತಪ್ಪಿಲ್ಲ. ಪ್ರಕರಣಗಳಿಗೆ ಕಟ್ಟುನಿಟ್ಟಾದ ಪರಿಮಿತಿ ಹಾಕುವುದು ಅವಶ್ಯ ಎಂದರು. 

ಬರಕ್ಕೆ ಸ್ಪಂದಿಸಿ: ರಾಜ್ಯದಲ್ಲಿ ಬರ ಆವರಿಸಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರಜ್ಞಾವಂತರ ಗುಂಪು ಆ ಕಡೆ ಕೆರೆ-ಕಟ್ಟೆಗಳನ್ನು ಹೂಳೆತ್ತುವ ಮತ್ತು ಅವುಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿದೆ. ಇದಲ್ಲದೇ ಬರದ ಹೊಡೆತ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿರುವ ಅನ್ನದಾತರ ಸಹಾಯಕ್ಕೆ ನಿಲ್ಲುವುದು ನೆಮ್ಮಲ್ಲರ ಧರ್ಮವಾಗಬೇಕು.

ಇದರೊಂದಿಗೆ ಸಮಾಜದಲ್ಲಿ ಅಸಂಬದ್ಧ ಘಟನೆಗಳು ನಡೆದಾಗ ಅವುಗಳನ್ನು ಪ್ರತಿಭಟಿಸುವ, ನೊಂದ ಮಹಿಳೆಯರಿಗೆ ಸಹಾಯ ಹಸ್ತ ನೀಡುವ ಅನುಕಂಪ ಅಲೆಗಳು ನಮ್ಮ ಹೃದಯದಿಂದ ಹೊರ ಹೊಮ್ಮಬೇಕಿದೆ ಎಂದರು. ಸಾಹಿತ್ಯವೂ ಸಾಮಾಜಿಕ, ವೈಜ್ಞಾನಿಕ, ಆಧ್ಯಾತ್ಮಿಕ ಹೀಗೆ ಹಲವು ವಿಷಯಗಳಲ್ಲಿ ಜನತೆ ಎದುರಿಸುವ ಆತಂಕಗಳಿಗೆ ಪರಿಹಾರದ ಕ್ಷಮತೆ ಒದಗಿಸಬೇಕು.

ಸ್ತ್ರೀ ಸಬಲೀಕಣ, ಗಡಿ ವಿವಾದ, ರೈತರ ಗೋಳು, ಭ್ರಷ್ಟಾಚಾರ ನಿರ್ಮೂಲನೆ, ನ್ಯಾಯಾಂಗದ ಅವನತಿ, ಬಾಲಕಾರ್ಮಿಕರ ಸಮಸ್ಯೆಗಳು, ಬಾಲ್ಯವಿವಾಹದಂಥ ಅನೇಕ ಪಿಡುಗು ಗ್ರಾಮೀಣ ಭಾಗದಲ್ಲಿ ಹಾಗೆಯೇ ಉಳಿದಿವೆ. ಸರ್ಕಾರ ಈ ದಿಸೆಯಲ್ಲಿ ಪರಿಣಾಮಕಾರಿ ಯೋಜನೆ ಜಾರಿಗೆ ತರುವುದು ಅಗತ್ಯವಿದೆ ಎಂದರು. 

ನ್ಯಾಯ ಬಗೆಹರಿಸಿ: ನ್ಯಾಯಾಲಯಗಳಲ್ಲಿ ಸಾವಿರ ಸಾವಿರ ಲಕ್ಷಗಟ್ಟಲೆ ಕೇಸುಗಳು ನ್ಯಾಯ ಕಾಣದೇ ತೀರ್ಪು ದೊರೆಯದೇ ಪಕ್ಷಗಾರರು ಕೋರ್ಟುಗಳಿಗೆ ಎಡತಾಕಿ ವಕೀಲರಿಗೆ ಪ್ರತಿ ಮುಂದೂಡುವಿಕೆಗೆ ಸಾವಿರಾರು ಹಣ ಸುರಿದು ಸೋತಿದ್ದಾರೆ. ನ್ಯಾಯ ಸಿಗುವ ಮುಂಚೆಯೇ ಸಾಕಷ್ಟು ಜನ ಸತ್ತು ಹೋಗಿದ್ದಾರೆ.

ಹೀಗಾಗಿ ಬುದ್ಧಿ ಜೀವಿಗಳು ತಮ್ಮ ಲಕ್ಷವನ್ನು ಇತ್ತ ಹೊರಳಿಸಿ ಕೇಸುಗಳ ಮುಂದೂಡಿಕೆಗೆ ಲಗಾಮು ಹಾಕುವ ವಿಧಾನ, ಸತ್ಯಾಗ್ರಹಗಳ ಮೂಲಕ ಸಂವಿಧಾನದಲ್ಲಿ ಕಾಯ್ದೆ ಮಾಡಿ ಒಂದೊಂದು ಕೇಸಿಗೆ ಕಟ್ಟು ನಿಟ್ಟಾದ ಅವಧಿಯ ಪರಿಮಿತಿ ಹಾಕುವುದು ಅವಶ್ಯವಿದೆ ಎಂದರು.

ಟಾಪ್ ನ್ಯೂಸ್

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-alnavar

Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.