ನಾದಮಯ ಗ್ರೂಪ್ ಸದಸ್ಯರ ‘ಸ್ನೇಹಮಿಲನ’
ವಾಟ್ಸ್‌ಆ್ಯಪ್ ಗ್ರೂಪ್‌ನ ಉತ್ತರ ಕರ್ನಾಟಕ ಗೆಳೆಯರ ತಂಡ ಕೆಎಲ್ಇ ವಿವಿ ಆವರಣದಲ್ಲಿ ಅಪರೂಪದ ಕಾರ್ಯಕ್ರಮ
Team Udayavani, Jul 15, 2019, 1:09 PM IST
ಹುಬ್ಬಳ್ಳಿ: ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರವಿವಾರ 'ನಾದಮಯ ಈ ಲೋಕವೆಲ್ಲಾ' ವ್ಯಾಟ್ಸ್ ಆ್ಯಪ್ ಗ್ರೂಪ್ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ನಡೆಯಿತು.
ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ವಿಶ್ವವಿದ್ಯಾಲಯದ ಸಪ್ತರ್ಷಿ ಹಾಲ್ ನಲ್ಲಿ ರವಿವಾರ ನಾದಮಯ ಈ ಲೋಕವೆಲ್ಲಾ ವಾಟ್ಸ್ ಆ್ಯಪ್ ಗ್ರೂಪ್ ನ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು.
ಗ್ರೂಪ್ ಅಡ್ಮಿನ್‌ಗಳಾದ ಸ್ವೀಡನ್‌ದ ಮಂಜುಳಾ ದೇಶಪಾಂಡೆ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ನರಸಿಂಹ ರಾಯಚೂರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಆರಂಭದಲ್ಲಿ ಕುಮಾರಿ ಸುರಬಿ ಮಳಗಿ ಓಂ ಗಣನಾಥ ಗೌರಿ ವದನ ಹಾಡಿನೊಂದಿಗೆ ಸಂಗೀತ ಕಾರ್ಯಕ್ರಮ ಆರಂಭವಾಯಿತು. ನಂತರ ಕುಮಾರಿ ದಿಶಾ ತೊಗರಿ ಐಯಾ ಕೆ ಗಜರಿ ಯಾ, ಗಜಮುಖನೆ ಗಣನಾಥನೆ ಹಾಡಿದಳು. ಅಂಜಲಿನಾ ಅವರು ತುಂತುರು ಮಳೆ ನೀರು ಹಾಡಿದರೆ, ಸಂಜನಾ ಪದಕಿ ಘರಿಯಾ ಭರಣವೇ ಹಾಡಿದರು.
ಡಾ| ಶಿವಯೋಗಿ ಬಳಿಗಾರ ರಾಗ ಬಹಾರದಲ್ಲಿ ಬಸವಣ್ಣನವರ ವಚನ ಮೇಲುಗುಣವನರಸುವರೇ ನಂತರ ರಾಗ ಭೀಮಪ್ಲಾಸ್‌ದಲ್ಲಿ ಪುರಂದರದಾಸರ ನಾ ನಿನ್ನ ಧ್ಯಾನದೊಳಿರಲು ಹಾಡಿದರು.
ಕುಮಾರಿ ಅರ್ಪಿತಾ ಬುರಲಿ ಓಂನಮಃ ಶಿವಾಯ ಹಾಡಿದರೆ, ಶ್ರೀದೇವಿ ಪಾಟೀಲ ಅವರು ಏಕೆ ವೃಂದಾವನದಲ್ಲಿ ನೆಲೆಸಿರುವೆ ಭೂದೇವಿ ಹಾಡಿದರು. ಪ್ರಕಾಶ ಪದಕಿ ಅವರು ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡಿದರೆ, ಪ್ರತಿಮಾ ಜೋಶಿಯವರು ಕಂಡು ಕಂಡು ನೀ ಎನ್ನ ಕೈ ಬಿಡುವೆನೆ ಕೃಷ್ಣಾ ಹಾಡಿ ನಂತರ ಸತತ ಪಾಲಿಸು ಎನ್ನ ಯತಿ ರಾಘವೇಂದ್ರ ಗೀತೆ ಹಾಡಿದರು.
ಹೊಂಡಗಾಸಿಯ ರೇಖಾ ಹೆಗಡೆ ದಕ್ಷಿಣಾದಿ ರಾಗ ಅಮೃತವರ್ಷಿಣಿಯಲ್ಲಿ ಶರಣ್ಯೆ ವರಣ್ಯೆ ಸುಖಾರುಣ್ಯ ಮೂರ್ತೇ ಹಾಡಿದರೆ, ಹಾವೇರಿಯ ವಾಣಿ ಕಣೇಕಲ್ ಅವರು ಒಂದೇ ಬೆಳ್ಳಿ ಮುಗಿಲನ್ನು ಮಡಿಲಲ್ಲಿ ಹಿಡಿದಿರುವ ಹಾಡು ನಂತರ ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಲ ಮೂರ್ತಿಯಾ ಹಾಡಿದರು.
ಹೇಮಾ ಜೋಶಿ ಅವರು ಜಾನಿ ಜವಾನಿ ಚಲ್ ಜಮಖಂಡಿ ಎಂಬ ಜನಪದ ಗೀತೆ ಹಾಡಿದರೆ, ಮಳಗಿ ಕುಟುಂಬದವರು ಎಚ್ಚರ..ಎಚ್ಚರ..ಗಡಿ ಕಾಯುವ ಯೋಧರೇ ನಂತರ ಸ್ವಾಮಿ ನಿನ್ನ ದ್ಯಾವರ ಎಂಬ ಜಾನಪದ ಗೀತೆ ಹಾಡಿದರು.
ರವೀಂದ್ರ ಮಳಗಿಯವರು ರಾಗ ಜೋಗದಲ್ಲಿ ವಾಯಲಿನ್ ನುಡಿಸಿದರೆ, ತುಷಾರ್ ಮಳಗಿ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡಿದರು. ಪ್ರತಿಮಾ ಜೋಶಿಯವರ ಭೈರವಿ ರಾಗದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಆರಂಭದಲ್ಲಿ ನಾದಮಯ ಗ್ರುಪ್ ನ ಸದಸ್ಯರ ಪರಿಚಯ ಕಾರ್ಯಕ್ರಮ ನಡೆಯಿತು. ಅಜಿತ್ ಕಾರೇಕರ್ ಸ್ವಾಗತಿಸಿ, ನಿರೂಪಿಸಿದರು. ನರಸಿಂಹ ರಾಯಚೂರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.