ಹೆಚ್ಚಿದ ಮತ ಪ್ರಮಾಣ ಯಾರ ಗೆಲುವಿಗೆ ಬುತ್ತಿ?
Team Udayavani, May 20, 2019, 11:08 AM IST
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಸಮರದಲ್ಲಿ ಬಿರುಬಿಸಿಲಿಗೂ ಸವಾಲೊಡ್ಡುವ ರೀತಿಯಲ್ಲಿ ದಾಖಲೆ ಮತದಾನವಾಗಿದೆ. ಮತಪ್ರಮಾಣ ಹೆಚ್ಚಳವನ್ನು ಮೈತ್ರಿಕೂಟ ಹಾಗೂ ಬಿಜೆಪಿ ಕಡೆಯವರು ತಮ್ಮ ಅಭ್ಯರ್ಥಿ ಗೆಲುವಿಗೆ ಅನುಕೂಲವಿದು ಎಂದು ವ್ಯಾಖ್ಯಾನಿಸತೊಡಗಿದ್ದಾರೆ.
ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಎದುರಾದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಸ್ಪರ್ಧಿಸಿದ್ದು, ರವಿವಾರ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಮತ ಪ್ರಮಾಣ ಹೆಚ್ಚಳವಾಗಬೇಕೆಂದು ಲೋಕಸಭೆ ಚುನಾವಣೆ ಹಾಗೂ ಮತಜಾಗೃತಿ ಬಗ್ಗೆ ಜಿಲ್ಲಾ ಚುನಾವಣಾ ವಿಭಾಗ ಹಾಗೂ ಸ್ವೀಪ್ ಕೈಗೊಂಡ ಪ್ರಚಾರ ಕಾರ್ಯಕ್ಕೆ ಉತ್ತಮ ಸ್ಪಂದನೆ ಎನ್ನುವಂತೆ ಶೇ.82.42 ದಾಖಲೆ ಮತದಾನವಾಗಿದೆ.
2018ರ ವಿಧಾನಸಭೆ ಚುನಾವಣೆ ಮತದಾನಕ್ಕೆ ಹೋಲಿಸಿದರೆ ಉಪ ಚುನಾವಣೆಯಲ್ಲಿ ಶೇ.3.75 ಮತದಾನ ಹೆಚ್ಚಳವಾಗಿದೆ. ಒಂದು ಕಡೆ ಉರಿಬಿಸಿಲು, ಮತ್ತೂಂದು ಕಡೆ ಕೆಲ ದಿನಗಳ ಹಿಂದೆಯಷ್ಟೇ ಲೋಕಸಭೆ ಚುನಾವಣೆಗೆ ಮತದಾನ ಮಾಡಲಾಗಿದ್ದು, ಉಪ ಚುನಾವಣೆಯಲ್ಲಿ ಹೆಚ್ಚಿನ ಜನ ಮತದಾನಕ್ಕೆ ಮುಂದಾಗಲಾರರು ಎಂಬ ಕೆಲವರ ನಿರೀಕ್ಷೆ ಹುಸಿಗೊಳಿಸಿ ಕುಂದಗೋಳ ಮತದಾರರು ಉತ್ತಮ ಸ್ಪಂದನೆ ತೋರಿದ್ದಾರೆ.
ಜಿದ್ದಾಜಿದ್ದಿಯ ಕಣ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ಜಿದ್ದಾಜಿದ್ದಿ ವೇದಿಕೆಯಾಗಿತ್ತು. ಸ್ಥಾನ ಉಳಿಸಿಕೊಳ್ಳಲು ಮೈತ್ರಿಕೂಟ, ಸ್ಥಾನ ಕಿತ್ತುಕೊಳ್ಳಲು ಬಿಜೆಪಿ ಸಾಕಷ್ಟು ಸರ್ಕಸ್‌ಗಿಳಿದಿದ್ದವು.
ಉಪ ಚುನಾವಣೆ ಫಲಿತಾಂಶ ರಾಜ್ಯ ಸಮ್ಮಿಶ್ರ ಸರಕಾರದ ಮೇಲೆ ತನ್ನದೇ ಪರಿಣಾಮ ಬೀರಬಹುದಾಗಿದೆ ಎಂಬ ಅನಿಸಿಕೆ ಹಿನ್ನೆಲೆಯಲ್ಲಿ ಕ್ಷೇತ್ರದ ಗೆಲುವು ಎರಡು ಕಡೆಯವರಿಗೂ ತೀವ್ರತೆ ಸೃಷ್ಟಿಸಿತ್ತು. ಗೆಲುವು ತಮ್ಮದಾಗಲೇಬೇಕೆಂಬ ಜಿದ್ದಿನೊಂದಿಗೆ ಎರಡು ಕಡೆಯ ನಾಯಕರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಪೈಪೋಟಿ ರೂಪದಲ್ಲಿ ಪ್ರಚಾರ, ಮತದಾರರ ಮನವೊಲಿಕೆ ಕಾರ್ಯ ಕೈಗೊಂಡಿದ್ದರು.
ಗೆಲುವಿನ ವ್ಯಾಖ್ಯಾನ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಮತ ಸಮರ ಮುಗಿದಿದೆ. ಮತದಾರರ ತೀರ್ಪು ಮತಯಂತ್ರಗಳನ್ನು ಸೇರಿಯಾಗಿದೆ. ಇನ್ನೇನಿದ್ದರೂ ಫಲಿತಾಂಶ ಏನೆಂಬುದನ್ನು ಎದುರು ನೋಡುವುದಷ್ಟೆ.
ಎರಡು ಕಡೆಯವರು ಗೆಲುವು ತಮ್ಮದೇ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ಅನುಕಂಪ ದೊಡ್ಡ ಮಟ್ಟದಲ್ಲಿ ಕೈ ಹಿಡಿಯಲಿದೆ. ಸಿ.ಎಸ್. ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಎಲ್ಲ ಜಾತಿಯ ಬಡವರ ಸಮಸ್ಯೆ, ನೋವುಗಳಿಗೆ ಸ್ಪಂದಿಸಿದ್ದು, ಕುಟುಂಬ ಸದಸ್ಯನ ರೀತಿಯಲ್ಲಿ ನೆರವು ನೀಡಿದ್ದು ಸಹ ಜನರ ಮನಸ್ಸಿನಲ್ಲಿದ್ದು, ಅದು ಪಕ್ಷದ ಅಭ್ಯರ್ಥಿ ಗೆಲುವನ್ನು ಸುಲಭವಾಗಲಿದೆ ಎಂಬುದಾಗಿದೆ.
ದಾಖಲೆ ಮತದಾನವೂ ನಮಗೆ ವರವಾಗಲಿದೆ ಎಂಬುದು ಮೈತ್ರಿಕೂಟ ಮುಖಂಡರ ಅನಿಸಿಕೆ. ಶಿವಳ್ಳಿ ಅವರ ಮೇಲಿನ ಅನುಕಂಪವೇ ಹೆಚ್ಚು ಹೆಚ್ಚು ಜನರನ್ನು ಮತಕೇಂದ್ರಗಳಿಗೆ ಕರೆತಂದಿದ್ದು, ದಾಖಲೆ ಮತದಾನಕ್ಕೆ ಕಾರಣವಾಗಿದೆ. ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂಬುದು ಹಲವು ಮುಖಂಡರ ವಾದವಾದರೆ, ಇನ್ನು ಕೆಲವರು ಮತದಾನ ಹೆಚ್ಚಳ ಯಾರಿಗೆ ಲಾಭ ಎಂಬ ಗೊಂದಲ ಕಾಡುತ್ತಿದೆ ಎನ್ನುತ್ತಿದ್ದಾರೆ.
ಬಿಜೆಪಿಯವರು ಸಹ ನಮ್ಮ ಅಭ್ಯರ್ಥಿ ಎರಡು ಬಾರಿ ಸೋತ ಅನುಕಂಪ ನಮ್ಮ ಕೈ ಹಿಡಿಯಲಿದೆ. ಬಿಜೆಪಿ ನಾಯಕರ ಸಂಘಟಿತ ಪ್ರಯತ್ನ, ಪ್ರಚಾರ ನಮಗೆ ಲಾಭವಾಗಲಿದ್ದು, ಗೆಲುವು ತಂದು ಕೊಡುವುದು ಖಚಿತ. ವಿಶೇಷವಾಗಿ ಮತದಾನ ಪ್ರಮಾಣ ಶೇ.82 ಆಗಿರುವುದು ಸಹಜವಾಗಿಯೇ ಬಿಜೆಪಿಗೆ ಲಾಭವಾಗಲಿದೆ. ಹೆಚ್ಚು ಮತದಾನವಾದರೆ ಅದು ಬಿಜೆಪಿಗೆ ಲಾಭ ಎಂಬುದು ಹಿಂದಿನ ಬೇರೆ ಬೇರೆ ಕಡೆಯ ಅನೇಕ ಚುನಾವಣೆಗಳಲ್ಲಿ ಸಾಬೀತಾಗಿದೆ. ಕುಂದಗೋಳದಲ್ಲೂ ಅದು ಮುಂದುವರಿಯಲಿದ್ದು, ನಮ್ಮ ಅಭ್ಯರ್ಥಿ ಗೆಲುವು ಖಚಿತ. ಅನುಮಾನವೇ ಬೇಡ ಎಂಬುದು ಬಿಜೆಪಿಯವರ ಅನಿಸಿಕೆ.
ಎರಡು ಕಡೆಯವರು ಮತದಾನ ಹೆಚ್ಚಳ ತಮ್ಮ ಪರ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಮತದಾರನ ಅನಿಸಿಕೆ ಏನಾಗಿದೆ ಎಂಬುದು ಮೇ 23ರಂದು ಬಯಲುಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.