ನೈಋತ್ಯ ರೈಲ್ವೆ 278 ನಿಲ್ದಾಣಗಳಲ್ಲಿ ವೈಫೈ
Team Udayavani, Aug 25, 2019, 10:05 AM IST
ಹುಬ್ಬಳ್ಳಿ: ಭಾರತೀಯ ರೈಲ್ವೆಯಲ್ಲಿ ನೈಋತ್ಯ ವಲಯವು ರೈಲ್ವೆ ಹಾಲ್ ನಿಲ್ದಾಣ ಹೊರತು ಪಡಿಸಿ ಎಲ್ಲ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಹೊಂದಿದ ಮೊದಲ ರೈಲ್ವೆ ವಲಯ ಎಂಬ ಖ್ಯಾತಿ ಹೊಂದಿದ್ದು, ಹುಬ್ಬಳ್ಳಿ ವಿಭಾಗದ 98 ನಿಲ್ದಾಣಗಳಲ್ಲಿ ಈ ಸೌಲಭ್ಯ ಒದಗಿಸಿದೆ.
ವಲಯದ ಮೈಸೂರು ವಿಭಾಗ ಮೊದಲಿಗೆ ತನ್ನ ವ್ಯಾಪ್ತಿಯ ಎಲ್ಲ 85 ಗ್ರಾಮೀಣ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಿದೆ. ನೂರು ದಿನಗಳಲ್ಲಿ ಈ ಕೆಲಸ ಮುಗಿಸಲು ಅವಧಿ ನಿಗದಿಪಡಿಸಲಾಗಿತ್ತು. ಆದರೆ ಕೇವಲ 75 ದಿನಗಳಲ್ಲಿ ಪೂರ್ಣಗೊಳಿಸಿದೆ.
ಮೈಸೂರು ವಿಭಾಗ ನಂತರ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದ ಎಲ್ಲ ನಿಲ್ದಾಣಗಳಲ್ಲಿ ವೈಫೈ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರು ವಿಭಾಗದ 95 ನಿಲ್ದಾಣಗಳಲ್ಲಿ ಹಾಗೂ ಹುಬ್ಬಳ್ಳಿ ವಿಭಾಗದ 98 ನಿಲ್ದಾಣಗಳಲ್ಲಿ ಉಚಿತ ವೈಫೈ ಸಂಪರ್ಕ ಕಲ್ಪಿಸಲಾಗಿದೆ. ಹುಬ್ಬಳ್ಳಿ ವಿಭಾಗದ ಕೊನೆಯ ನಿಲ್ದಾಣವಾದ ಪಶ್ಚಿಮ ಘಟ್ಟದ ದೂಧ್‌ಸಾಗರ ನಿಲ್ದಾಣಕ್ಕೂ ವೈಫೈ ಸಂಪರ್ಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಎಟಿ ಸ್ಟಾರ್ಟ್ ಅಪ್ ಅವಾರ್ಡ್ಸ್-2019 ಪ್ರಶಸ್ತಿ ಪ್ರದಾನದಲ್ಲಿ ಹೇಳಿದ್ದಾರೆ.
2016-17 ಮತ್ತು 2017-18ರ ಮೊದಲ ಹಂತದಲ್ಲಿ 153 ನಿಲ್ದಾಣಗಳಲ್ಲಿ ಹೈಸ್ಪೀಡ್ ವೈಫೈ ಕಲ್ಪಿಸಲಾಗಿತ್ತು. 2ನೇ ಹಂತದಲ್ಲಿ ವಲಯ ವ್ಯಾಪ್ತಿಯ ಹಾಲ್r ನಿಲ್ದಾಣ ಹೊರತುಪಡಿಸಿ ಇನ್ನುಳಿದ ಎಲ್ಲ 125 ನಿಲ್ದಾಣಗಳಲ್ಲಿ ವೈಫೈ ಹಾಟ್ಸ್ಪಾಟ್ ಕಲ್ಪಿಸಲು ಗುರಿ ಹೊಂದಲಾಗಿತ್ತು. ಈಗ ನೈಋತ್ಯ ರೈಲ್ವೆಯು ಭಾರತೀಯ ರೈಲ್ವೆಯಲ್ಲಿಯೇ ವೈಫೈ ಸೌಲಭ್ಯ ಹೊಂದಿದ ಮೊದಲ ವಲಯವಾಗಿದೆ. ವಲಯದ ಎಲ್ಲ 278 ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲಾಗಿದೆ.
ಹುಬ್ಬಳ್ಳಿ ವಿಭಾಗದಲ್ಲಿ ಎಲ್ಲೆಲ್ಲಿ?: ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಧಾರವಾಡ, ಹೊಸಪೇಟೆ, ವಾಸ್ಕೋ- ಡಾ-ಗಾಮಾ, ಲೋಂಡಾ, ಗದಗ, ಕೊಪ್ಪಳ, ಘಟಪ್ರಭಾ, ಅಳ್ನಾವರ, ತೋರಣಗಲ್ಲ, ಬಾಗಲಕೋಟೆ, ಕ್ಯಾಸಲರಾಕ್, ರಾಯದುರ್ಗ, ಗುಂಜಿ, ದೇಸೂರ, ಖಾನಾಪುರ, ಚಿಕ್ಕೋಡಿ ರಸ್ತೆ, ಶೇಡಬಾಳ, ಉಣಕಲ್ಲ, ಅಮರಗೋಳ, ನವಲೂರ, ಕ್ಯಾರಕೊಪ್ಪ, ಮುಗದ, ಕಂಬಾರಗಣವಿ, ಕಾಶನಟ್ಟಿ, ನಾಗರಹಳ್ಳಿ, ದೇವರಾಯಿ, ಹೊಳೆಆಲೂರು, ಬಾದಾಮಿ, ತವರಗಟ್ಟಿ, ಶಿವಥಾನ, ಕುಡಚಿ, ಪಾಚಾಪುರ, ತಿನೈಘಾಟ, ಗೋಕಾಕ ರಸ್ತೆ, ರಾಯಬಾಗ, ಸುಳಧಾಳ, ಹುಬ್ಬಳ್ಳಿ ಸೌಥ್ ಕ್ಯಾಬಿನ್, ವಿಜಯಪುರ, ಆಲಮಟ್ಟಿ, ಮುನಿರಾಬಾದ್, ಇಂಡಿ ರಸ್ತೆ, ಅಣ್ಣಿಗೇರಿ, ಬಳಗಾನೂರ, ಬನ್ನಿಕೊಪ್ಪ, ಬಸವನ ಬಾಗೇವಾಡಿ ರಸ್ತೆ, ಬೆನ್ನೆಹಳ್ಳಿ, ಭಾನಾಪುರ, ಮಿಂಚಿನಾಳ, ಮುಗಳೊಳ್ಳಿ, ಮುಲವಾಡ, ಚಿಂಚಿಲಿ, ದಾರೋಜಿ, ಗಡಿಗನೂರ, ಗಿಣಿಗೇರಾ, ಗುಳೇದಗುಡ್ಡ ರಸ್ತೆ, ವಿಜಯನಗರ, ವಂದಾಲ, ಹರಪನಹಳ್ಳಿ, ಹರ್ಲಾಪೂರ, ಹೆಬಸೂರ, ಹೊಂಬಳ, ಹುಲಕೋಟಿ, ಜಡ್ರಮಕುಂಟಿ, ಜುಮನಾಳ, ಕಣಗಿನಹಾಳ, ಕೊಟ್ಟೂರು, ಕುಡತಿನಿ, ಲಚ್ಯಾಣ, ಲಖಮಾಪುರ, ಮಲ್ಲಾಪುರ, ಕುಸುಗಲ್ಲ, ಸೋಮ್ಲಾಪುರಂ, ಸೋಮಾಪುರ ರಸ್ತೆ, ಸುಳೇಭಾವಿ, ತಡವಾಲ, ತೆಲಗಿ, ನಿಂಬಾಳ, ಓಬಳಾಪುರಂ, ಸಾಂಬ್ರೆ, ಕಂಸೌಲಿಂ, ಚಂದ್ರಗಾಂವ, ಕಲೇಂ, ಕುಲೇಂ, ಸಂಕವಾಲ, ಸಂವೇರ್ದಂ ಕುರಚೋರೆಂ, ಕಾರಂಜೋಳ, ದೂಧಸಾಗರ, ಸೋನಾಲಿಯಂ, ಬಳ್ಳಾರಿ ಕಂಟೋನ್ಮೆಂಟ್, ಚಿಕ್ಕಬೆನಕಾಳ, ಗಂಗಾವತಿ, ಕಲ್ಯಾಣದುರ್ಗ, ಕದ್ರಿದೇವರಪಲ್ಲಿ, ಬಿಂಕದಕಟ್ಟಿ, ನವಲಗುಂದ ರಸ್ತೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.
ಹುಬ್ಬಳ್ಳಿ ವಿಭಾಗದ 98 ಬೆಂಗಳೂರು ವಿಭಾಗದ 95 ಮೈಸೂರು ವಿಭಾಗದ 85 ನಿಲ್ದಾಣಗಳಲ್ಲಿ ವೈಫೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.