ರೈಸಿಂಗ್ ಸ್ಟಾರ್-ಟ್ವಿನ್ ಸಿಟಿಗೆ ಜಯ
Team Udayavani, May 27, 2017, 3:00 PM IST
ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಸ್ವರ್ಣ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜ್ಯೂನಿಯರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೈಸಿಂಗ್ ಸ್ಟಾರ್ ಹುಬ್ಬಳ್ಳಿ ಹಾಗೂ ಟ್ವಿನ್ ಸಿಟಿ ಚಾಲೆಂಜರ್ ತಂಡ ಜಯಗಳಿಸಿವೆ.
ಮೊದಲ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ವಾರಿಯರ್ ತಂಡದ ಮಧ್ಯ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಪಡೆದ ಹುಬ್ಬಳ್ಳಿ ವಾರಿಯರ್ ತಂಡ, ನಿಗದಿತ 30 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿತು.
ತಂಡದ ಪರ ಕಮೇಲ ಬಾಂಬೇವಾಲ್(69), ತೇಜಸ್ ಮುರಡೇಶ್ವರ(18), ಶ್ಯಾಮ್ ಲದ್ದಡ್ (14) ರನ್ ಪೇರಿಸಿದರು. ರೇಸಿಂಗ್ ಸ್ಟಾರ್ ಪರ ಆದಿತ್ಯಾ ಹಿರೇಮಠ 3 ವಿಕೆಟ್, ತನಿಷ್ಕ ನಾಯ್ಕ 2 ವಿಕೆಟ್, ಕುನಾಲ ಶಾನಭಾಗ 1 ವಿಕೆಟ್ ಪಡೆದರು.
ಹುಬ್ಬಳ್ಳಿ ವಾರಿಯರ್ ತಂಡ ನೀಡಿದ 144 ರನ್ ಗುರಿ ಬೆನ್ನಟ್ಟಿದ ರೈಸಿಂಗ್ ಸ್ಟಾರ್ ಹುಬ್ಬಳ್ಳಿ ತಂಡ 26.2 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 146 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು. ತಂಡದ ಪರ ರೋಹನ ಯರೇಸಿಮಿ (ಅಜೇಯ 70), ತನಿಷ್ಕ ನಾಯ್ಕ (37) ರನ್ ಗಳಿಸಿದರು.
ಹುಬ್ಬಳ್ಳಿ ವಾರಿಯರ್ ಪರ ಭರತ ದೇವಿಹೊಸೂರ 2 ವಿಕೆಟ್, ಸುಜಲ್ ಪಾಟೀಲ ಹಾಗೂ ದೃವ ಸೋಳಂಕೆ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ರೈಸಿಂಗ್ ಸ್ಟಾರ್ ಹುಬ್ಬಳ್ಳಿ ತಂಡ 6 ವಿಕೆಟ್ ಗಳಿಂದ ಜಯ ತನ್ನದಾಗಿಸಿಕೊಂಡಿತು. ರೋಹನ ಯರೇಸಿಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಇನ್ನೊಂದು ಪಂದ್ಯದಲ್ಲಿ ಟ್ವಿನ್ ಸಿಟಿ ಚಾಲೆಂಜರ್ ಮತ್ತು ಹುಬ್ಬಳ್ಳಿ ಟರ್ಮಿನೇಟರ್ ಮಧ್ಯ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಪಡೆದ ಟ್ವಿನ್ ಸಿಟಿ ಚಾಲೆಂಜರ್ ತಂಡ 30 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 166 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು.
ತಂಡದ ಪರ ಮಾಧವ ಧಾರವಾಡಕರ (ಅಜೇಯ 99), ಅನೀಸ್ ಭೂಸದ (ಅಜೇಯ 40) ರನ್‌ಗಳಿಸಿದರು. ಹುಬ್ಬಳ್ಳಿ ಟರ್ಮಿನೇಟರ್ ಪರ ರಾಜೇಂದ್ರ ಹಾಗೂ ಅಕ್ಷಯ ತಲಾ 1 ವಿಕೆಟ್ ಪಡೆದರು. ಟ್ವಿನ್‌ಸಿಟಿ ಚಾಲೆಂಜರ್ ತಂಡ ನೀಡಿದ 166 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹುಬ್ಬಳ್ಳಿ ಟರ್ಮಿನೇಟರ್ ತಂಡ 23.2 ಓವರ್‌ಗಳಲ್ಲಿ ಕೇವಲ 102 ರನ್ ಪೇರಿಸಿ ಸರ್ವಪತನ ಕಂಡಿತು.
ತಂಡದ ಪರ ರಾಜೇಂದ್ರ ಡಂಗನವರ (ಅಜೇಯ 58) ರನ್ ಬಿಟ್ಟರೆ ಮತ್ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಟ್ವಿನ್ ಸಿಟಿ ಚಾಲೆಂಜರ್ ಪರ ಅನೀಸ ಭೂಸದ, ರಮೇಶ ತಲಾ 3 ವಿಕೆಟ್, ರೋಣಕ್ ಠಕ್ಕರ ಹಾಗೂ ವಿಜಯ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ಟ್ವಿನ್ ಸಿಟಿ ಚಾಲೆಂಜರ್ ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮಾಧವ ಧಾರವಾಡಕರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ
Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ
Bengaluru: ಟ್ರಕ್ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು
Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.