ಚಳಿಗಾಲ ಎಫೆಕ್ಟ್; ಚಿಕನ್‌ ತುಟ್ಟಿ


Team Udayavani, Nov 30, 2019, 12:27 PM IST

huballi-tdy-1

ಹುಬ್ಬಳ್ಳಿ: ಚಿಕನ್‌ ದರ ಒಮ್ಮಿಲೇ ಹೆಚ್ಚಳವಾಗಿದೆ. ರಿಟೇಲ್‌ ಮಾರುಕಟ್ಟೆಯಲ್ಲಿ ಸುಮಾರು 150 ರೂ. ಪ್ರತಿ ಕೆಜಿಯಂತೆ ಬಿಕರಿಯಾಗುತ್ತಿದೆ. ಚಳಿಯಂತೆ ಚಿಕನ್‌ ದರವೂ ಹೆಚ್ಚಾಗಿರುವುದು ಚಿಕನ್‌ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.

ಚಿಕನ್‌ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಏಕಾಏಕಿ ಹೆಚ್ಚಳವಾಗಿದ್ದರೂ ಪೌಲ್ಟಿ ಉದ್ಯಮಿಗಳಿಗೆ ಇದರಿಂದ ಲಾಭ ಸಿಗುತ್ತಿಲ್ಲ. ಕಳೆದ 4 ವರ್ಷಗಳಿಂದ ಬರದಿಂದ ಕೋಳಿ ಆಹಾರ ದರ ಹೆಚ್ಚಾಗಿತ್ತು, ಆದರೆ ಈ ವರ್ಷ ಅತಿವೃಷ್ಟಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೆಕ್ಕೆಜೋಳ ಮಾರುಕಟ್ಟೆಗೆ ಬಾರದ್ದರಿಂದ ಕೋಳಿ ಆಹಾರ ದರದಲ್ಲಿ ಹೆಚ್ಚಳವಾಗಿದ್ದರಿಂದ ಸದ್ಯ ರಿಟೇಲ್‌ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದರೂ ಪೌಲ್ಟಿ ಉದ್ಯಮ ಅವಲಂಬಿಸಿದವರು ನಷ್ಟದಿಂದ ಹೊರ ಬರಲು ಒದ್ದಾಡುತ್ತಿದ್ದಾರೆ.

ಕೋಳಿ ಆಹಾರದಲ್ಲಿ ಶೇ.50 ಬಳಕೆಯಾಗುವುದು ಗೋವಿನಜೋಳ. ಇದರಿಂದ ಸಹಜವಾಗಿಯೇ ಕೋಳಿಗಳ ಆಹಾರ ಗೋವಿನಜೋಳದ ದರ ಅವಲಂಬಿಸಿದೆ. ಗೋವಿನಜೋಳದ ದರ ಕಡಿಮೆಯಾಗುತ್ತಿಲ್ಲ. ಇದರಿಂದ ಪೌಲ್ಟಿ ಉದ್ಯಮಿಗಳು ಗೋವಿನಜೋಳ ಸಂಗ್ರಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗೋವಿನಜೋಳದ ಬೆಲೆ ಕ್ವಿಂಟಲ್‌ಗೆ 2500 ರೂ.ವರೆಗೂ ಹೆಚ್ಚಾಗಿತ್ತು. ಸದ್ಯ 1700-1800ರೂ. ಪ್ರತಿ ಕ್ವಿಂಟಲ್‌ ದರವಿದೆ. ಅಲ್ಲದೇ ರಾಜ್ಯ ಸರಕಾರ ಪ್ರತಿ ಕ್ವಿಂಟಲ್‌ಗೆ 1900 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ ಅದಕ್ಕಿಂತ ಕಡಿಮೆದರದಲ್ಲಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದು ಕುಕ್ಕುಟೋದ್ಯಮಿಗಳಿಗೆ ಸಮಸ್ಯೆ ತಂದೊಡ್ಡಿದೆ. ಸದ್ಯ ಬ್ರಾಯ್ಲರ್‌ ಚಿಕನ್‌ ಹೋಲ್‌ಸೇಲ್‌ನಲ್ಲಿ 70ರೂ. ಪ್ರತಿ ಕೆಜಿಯಂತೆ ಬಿಕರಿಯಾಗುತ್ತಿದೆ. ಆದರೆ ಹುಬ್ಬಳ್ಳಿ ರಿಟೇಲ್‌ ಮಾರುಕಟ್ಟೆಯಲ್ಲಿ 140ರಿಂದ 150 ಪ್ರತಿ ಕೆ.ಜಿ.ವರೆಗೆ ಮಾರಾಟವಾಗುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಚಿಕನ್‌ಹಾಗೂ ಮೊಟ್ಟೆಗಳ ಬೇಡಿಕೆ ಹೆಚ್ಚಾಗುತ್ತದೆ.

ಮೊಟ್ಟೆಗಳ ಉತ್ಪಾದನೆ ಕಡಿಮೆಯಾಗುತ್ತದೆ ಇದರಿಂದ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ದರವೂ ಹೆಚ್ಚಳವಾಗುತ್ತದೆ. ಚಿಕನ್‌ ಹಾಗೂ ಮೊಟ್ಟೆಯ ದರ ಪ್ರತಿದಿನದ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದರೆ ಚಳಿಗಾಲ ಬರುತ್ತಿದ್ದಂತೆಯೇ ಒಮ್ಮಿಲೇ ಚಿಕನ್‌ ದರದಲ್ಲಿ ಹೆಚ್ಚಳ ಕಂಡುಬರುತ್ತದೆ. ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾಗುವುದೇ ಇದಕ್ಕೆ ಕಾರಣವಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಹೆಚ್ಚಾಗಿ ಹೊಸಪೇಟೆ, ಬಳ್ಳಾರಿ, ಕೊಪ್ಪಳ ಕಡೆಯಿಂದ ಮೊಟ್ಟೆಗಳು ಬರುತ್ತವೆ.

ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯ ಫಾರ್ಮ್ಗಳು ಆರಂಭಗೊಂಡಿರುವುದರಿಂದ ಇಲ್ಲಿ ಕೂಡ ಉತ್ಪಾದನೆ ಹೆಚ್ಚಾಗುತ್ತಿದೆ. ವೆಂಕಟೇಶ್ವರ ಹ್ಯಾಚರಿಸ್‌ (ವೆಂಕಿಸ್‌) ಹಾಗೂ ಸುಗುಣ ಹ್ಯಾಚರೀಸ್‌ ಮೊದಲಾದ ಸಂಸ್ಥೆಗಳು ಕೂಡ ಗುತ್ತಿಗೆ ಪೌಲ್ಟಿ ಮಾಡುತ್ತಿರುವುದರಿಂದ ಅನೇಕ ಕೃಷಿಕರು ಕೋಳಿ ಬೆಳೆದು ಕಂಪನಿಗಳಿಗೆ ಕೊಡುತ್ತಿದ್ದಾರೆ. ಅಲ್ಲದೇ ದೇಶಿ ಕೋಳಿಗಳ ಫಾರ್ಮ್ಗಳು ಕೂಡ ಹೆಚ್ಚಾಗುತ್ತಿವೆ. ಕಡಕನಾಥ ಎಂಬ ದೇಶಿ ತಳಿ ಕಪ್ಪು ಕೋಳಿ ಉತ್ಪಾದಿಸುವಲ್ಲಿಯೂ ಕೆಲ ಕೆಲ ರೈತರು ಮುಂದಾಗಿದ್ದಾರೆ. ಆದರೆ ಬ್ರಾಯ್ಲರ್‌ ಉದ್ಯಮ ಅಗಾಧವಾಗಿ ಪಸರಿಸಿದೆ. ಚಿಕನ್‌ ಮಾತ್ರವಲ್ಲ ಮೊಟ್ಟೆಯ ದರದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಪ್ರತಿ ನೂರು ಮೊಟ್ಟೆಗಳಿಗೆಅಂದಾಜು 100ರೂ. ಹೆಚ್ಚಳವಾಗಿದೆ.

ಹುಬ್ಬಳ್ಳಿ ರಿಟೇಲ್‌ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಹೋಲ್‌ಸೇಲ್‌ನಲ್ಲಿ 100 ಮೊಟ್ಟೆಗಳ ಬೆಲೆ 418ರೂ.ಗಳಿಗೆ ಏರಿಕೆಯಾಗಿದೆ. ಕಳೆದ 4 ದಿನಗಳಹಿಂದೆ ಏರಿಕೆಯಾಗಿದ್ದು, ನವಂಬರ್‌ 24ರವರೆಗೂ ಮೊಟ್ಟೆಯ ದರ 100 ಮೊಟ್ಟೆಗಳಿಗೆ 380 ರೂ. ಇತ್ತು. ರಿಟೇಲ್‌ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 5 ರೂ. ಗಳಿಂದ 6 ರೂ.ವರೆಗೆ ಮಾರಾಟವಾಗುತ್ತಿದೆ. ಚಳಿಗಾಲದ ಲಾಭ ಪಡೆಯಲು ಚಿಕನ್‌ ಹಾಗೂ ಮೊಟ್ಟೆ ರಿಟೇಲ್‌ ವ್ಯಾಪಾರಿಗಳು ಸಜ್ಜಾಗಿದ್ದಾರೆ. ಗ್ರಾಹಕರು ಮಾತ್ರ ಚಳಿಗಾಲ ಮುಗಿಯುವವರೆಗೂ ಹೆಚ್ಚು ದರ ತೆತ್ತು ಚಿಕನ್‌, ಮೊಟ್ಟೆ ಖರೀದಿಸಬೇಕಾಗಿದೆ.

 

-ವಿಶ್ವನಾಥ ಕೋಟಿ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.