ಅಪಘಾತದಲ್ಲಿ ಮಡಿದ ಮಹಿಳೆಯರ ಸಾಮೂಹಿಕ ಪುಣ್ಯತಿಥಿ
Team Udayavani, Jan 24, 2021, 12:03 PM IST
ಧಾರವಾಡ: ಹು-ಧಾ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಜ. 15ರಂದು ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 11 ಜನರಿಗೆ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ಶನಿವಾರ ಸಾಮೂಹಿಕ ಪುಣ್ಯತಿಥಿ ಆಚರಿಸಿ ಗಮನ ಸೆಳೆದರು.
ಅಪಘಾತ ಸಂಭವಿಸಿ ಶನಿವಾರಕ್ಕೆ ಒಂಬತ್ತು ದಿನ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪುಣ್ಯತಿಥಿ ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕೆಲಗೇರಿ ಬೈಪಾಸ್ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೇದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.
ಇದನ್ನೂ ಓದಿ:ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್ ಸೇರಿ 5 ಮಂದಿ ವಿರುದ್ಧ ಕೇಸ್
ಈ ರಸ್ತೆಯಲ್ಲಿ ಮುಂದೆ ಅಪಘಾತಗಳು ಆಗದಂತೆ ಶಾಂತಿ ಮಾಡಲಾಗಿದೆ. ಜೊತೆಗೆ ಸರ್ಕಾರ ಎಚ್ಚೆತ್ತುಕೊಂಡು ಇನ್ನಾದರೂ ಈ ರಸ್ತೆ ಅಗಲೀಕರಣ ಕಾರ್ಯ ಮಾಡಲಿ ಎನ್ನುವುದು ನಮ್ಮ ಉದ್ದೇಶ ಎಂದು ಕೆಲಗೇರಿಯ ಗ್ರಾಮಸ್ಥ ಮಂಜುನಾಥ ಹೇಳಿದರು. ಬಸವರಾಜ ಕೊರವರ, ರುದ್ರಯ್ಯ ಕಲ್ಮಠ, ನಾಗೇಶ ತಲವಾಯಿ, ಬಸಯ್ಯ ಹಿರೇಮಠ, ಗಿರೀಶ ಪೂಜಾರ, ಮಲ್ಲಯ್ಯ ಹೊಂಗಲಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.