ಅವನತಿ ಹಾದಿ ಹಿಡಿದ ವೃತಿ ರಂಗಭೂಮಿ: ಶ್ರೀಧರ

ಪತ್ರಿಕೆಗಳು ಸಿಂಗಲ್‌ ಕಾಲಂ ಸುದ್ದಿಗೆ ರಂಗಭೂಮಿ ಸೀಮಿತ ಮಾಡಿವೆ, ಧೋರಣೆ ಬದಲಾಗಬೇಕು: ಡಾ| ಬಂಡು

Team Udayavani, Mar 22, 2022, 11:12 AM IST

4

ಧಾರವಾಡ: ಸಿನಿಮಾಗೆ ಸಿಕ್ಕ ಪ್ರಚಾರದ ಪ್ರಾಶಸ್ತ್ಯವು ಓರೆ ಕೋರೆ ತಿದ್ದುವ ರಂಗಭೂಮಿಗೆ ಸಿಗುತ್ತಿಲ್ಲ. ಇದಲ್ಲದೇ ಯುವ ಕಲಾವಿದರ ಕೊರತೆಯಿಂದಲೂ ಪ್ರಸ್ತುತ ವೃತ್ತಿ ರಂಗಭೂಮಿ ಅವನತಿ ಹಾದಿ ಹಿಡಿದಿದೆ ಎಂದು ರಂಗ ಸಮಾಜದ ಸದಸ್ಯ ಶ್ರೀಧರ ಹೆಗಡೆ ಹೇಳಿದರು.

ಧಾರವಾಡದ ರಂಗಾಯಣ ವತಿಯಿಂದ ಖಾಸಗಿ ರೆಸಾರ್ಟ್‌ವೊಂದರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳಿಲ್ಲ ಕಾಲದಲ್ಲಿ ರಂಗಭೂಮಿ ಅತ್ಯಂತ ಪ್ರಭಾವಿ ಮಾಧ್ಯಮವಾಗಿತ್ತು. ಆದರೆ ಇದೀಗ ಅಂತರ್ಜಾಲ ಸೇರಿ ಸಮೂಹ ಮಾಧ್ಯಮಗಳ ಅಬ್ಬರದ ಮಧ್ಯೆ ರಂಗಭೂಮಿ ನಶಿಸುತ್ತಿದೆ. ಹೀಗಾಗಿ ಸಿನಿಮಾಗೆ ನೀಡಿದ ಪ್ರಚಾರದ ಪ್ರಾಶಸ್ತ್ಯವನ್ನು ಮಾಧ್ಯಮಗಳು ರಂಗಭೂಮಿಗೂ ನೀಡಿದಾಗ ಮಾತ್ರ ರಂಗಭೂಮಿ ಉಳಿದು, ಬೆಳೆದು ಬರಲು ಸಾಧ್ಯವಿದೆ ಎಂದರು.

ವಿಜಯ ಕರ್ನಾಟಕದ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಡಾ|ಬಂಡು ಕುಲಕರ್ಣಿ ಮಾತನಾಡಿ, 80-90ರ ದಶಕದಲ್ಲಿ ಪತ್ರಿಗಳಲ್ಲಿ ರಂಗಭೂಮಿಗೆ ವಿಶೇಷ ಸ್ಥಾನಮಾನ ನೀಡಿದ್ದವು. ಅಂದಿನ ಪತ್ರಕರ್ತರು ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿಯ ಜತೆ ರಂಗಭೂಮಿಯಲ್ಲಿ ನಂಟು ಹೊಂದಿದ್ದರು. ಅಂದು ರಂಗಭೂಮಿ, ನಾಟಕಗಳು, ಉತ್ತಮ ನಟ-ನಟಿಯರ ಬಗ್ಗೆ ವಿಮರ್ಶೆ ಲೇಖನ ಬರುತ್ತಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗಳು ಸಿಂಗಲ್‌ ಕಾಲಂ ಸುದ್ದಿಗೆ ರಂಗಭೂಮಿ ಸೀಮಿತ ಮಾಡಿವೆ. ಈ ಧೋರಣೆ ಬದಲಾಗಬೇಕು ಎಂದರು.

ಹಿರಿಯ ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಮಾತನಾಡಿ, ಆಂಗ್ಲ ಪತ್ರಿಕೆಗಳಲ್ಲಿ ಜಾಗದ ಕೊರತೆಯಿಂದ ರಂಗಭೂಮಿ ಕುರಿತು ಹೆಚ್ಚಿನ ಪ್ರಚಾರ ಸಿಗುತ್ತಿಲ್ಲ. ಇದು ಈಚೆಗೆ ಕನ್ನಡ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಪ್ರಸ್ತುತ ರಂಗಭೂಮಿ ವ್ಯಾಖ್ಯಾನವೇ ಬದಲಾಗುತ್ತ ಸಾಗಿದೆ ಎಂದರು.

ರಂಗ ವಿಮರ್ಶಕ ತ್ಯಾಗಟೂರ ಸಿದ್ಧೇಶ ಮಾತನಾಡಿ, ರಂಗಭೂಮಿ ಜಗತ್ತಿನ ಎಲ್ಲ ಕ್ರಾಂತಿಗಳ ಕುರಿತು ಜನಜಾಗೃತಿ ಮೂಡಿಸಿದ ಮಾಧ್ಯಮ. ಇಂತಹ ಮಾಧ್ಯಮ ಆಧುನಿಕ ಮಾಧ್ಯಮಗಳ ಸುಳಿಗೆ ಸಿಲುಕಿ ಅವಸಾನದತ್ತ ಸಾಗುತ್ತಿದ್ದು, ಉಳಿಸುವ ಕೈಂಕರ್ಯ ನಡೆಯಬೇಕು ಎಂದರು. ಈ ಹಿಂದೆ ರಂಗಭೂಮಿ, ಸಾಂಸ್ಕೃತಿಕ ಕಲೆಗೆ ಪತ್ರಿಕೆಗಳು ಒಂದೊಂದು ಪುಟ ಮೀಸಲಿಡುತ್ತಿದ್ದವು. ಆದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ವರದಿಗೆ ಮನ್ನಣೆ ನೀಡುತ್ತಿಲ್ಲ. ಕಲಾವಿದರಿಗೆ ಉತ್ತೇಜಿಸಲು ಪ್ರಚಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ, ಧಾರವಾಡ ರಂಗಾಯಣ ಏಳು ಜಿಲ್ಲೆಗಳ ಆಸ್ತಿ. ಇದನ್ನು ಬೆಳೆಸುವಂತಹ ಕೈಂಕರ್ಯ ಮಾಡಿದ್ದು, ಮುಂದೆಯೂ ಉತ್ತಮ ಚಟುವಟಿಕೆ ಆಯೋಜಿಸುವ ಬಗ್ಗೆ ತಿಳಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ರಂಗಭೂಮಿ ಗೃಹಿಕೆ-ಅವಲೋಕನ-ವಿಮರ್ಶೆ ಮತ್ತು ಮಾಧ್ಯಮ ಬಗ್ಗೆ ಪತ್ರಕರ್ತ ಡಾ| ಬಂಡು ಕುಲಕರ್ಣಿ, ರಂಗಭೂಮಿ ಮತ್ತು ಮಾಧ್ಯಮ-ಸಮಕಾಲಿನ ಸವಾಲುಗಳು ಬಗ್ಗೆ ತ್ಯಾಗಟೂರ ಸಿದ್ಧೇಶ ವಿಷಯ ಮಂಡಿಸಿದರು. ರವಿ ಕುಲಕರ್ಣಿ ನಿರ್ದೇಶನದಲ್ಲಿ “ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನಗೊಂಡಿತು.

ಟಾಪ್ ನ್ಯೂಸ್

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

1-shaa

Success ನಿಮ್ಮನ್ನು ಪ್ರತ್ಯೇಕಿಸಲು ಮತ್ತು ವೈಫಲ್ಯಕ್ಕೆ ಕಾರಣವಾಗಬಹುದು: ಶಾರುಖ್ ಖಾನ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

8

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ

1-mag-1

Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್

de

Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.