ಶೋಕ ಸಾಗರದಲ್ಲಿ ಕುಸ್ತಿಪಟು ಅಂತ್ಯಕ್ರಿಯೆ
Team Udayavani, Feb 15, 2017, 1:27 PM IST
ಧಾರವಾಡ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮೃತಪಟ್ಟ ಪೈಲ್ವಾನ್ ಸಂತೋಷ ಹೊಸಮನಿ ಅವರ ಅಂತ್ಯಕ್ರಿಯೆ ತಾಲೂಕಿನ ಚಿಕ್ಕ ಮಲ್ಲಿಗವಾಡ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆಯಿತು. ಸಂತೋಷ ಅವರ ಪಾರ್ಥಿವ ಶರೀರವನ್ನು ವಾಹನದಲ್ಲಿರಿಸಿ, ಅವರು ಕಲಿತಿದ್ದ ಭಾರತ ಹೈಸ್ಕೂಲ್, ಕುಸ್ತಿ ಅಭ್ಯಾಸ ಮಾಡುತ್ತಿದ್ದ ಜ್ಯೋತಿ ತಾಲೀಮ್ ವರೆಗೂ ಒಯ್ದು ಅಂತಿಮ ದರ್ಶನಕ್ಕೆ ಇರಿಸಲಾಯಿತು.
ಬಳಿಕ ಪೈಲ್ವಾನರು ಹಾಗೂ ವಿದ್ಯಾರ್ಥಿಗಳು ಚಿಕ್ಕಮಲ್ಲಿಗವಾಡದ ವರೆಗೂ ಪಾರ್ಥಿವ ಶರೀರದ ಮೆರವಣಿಗೆ ಮಾಡಿದರು. ಮಂಗಳವಾರ ಸಂಜೆ 6:30ಕ್ಕೆ ಲಿಂಗಾಯತ ಸಂಪ್ರದಾಯದಂತೆ ಚಿಕ್ಕಮಲ್ಲಿಗವಾಡ ಸ್ಮಶಾನದಲ್ಲಿ ಸಂತೋಷ ಹೊಸಮನಿ ಅಂತ್ಯಕ್ರಿಯೆ ನಡೆಸಲಾಯಿತು. ಧಾರವಾಡ ತಹಶೀಲ್ದಾರ ಆರ್.ವಿ. ಕಟ್ಟಿ, ಹಿರಿಯ ಅಧಿಕಾರಿಗಳಾದ ಸದಾಶಿವ ಮರ್ಜಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಕ್ರೀಡಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಸಚಿವರ ಸಂತಾಪ: ಪೈಲ್ವಾನ್ ಸಂತೋಷ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಪ್ರತಿಭಾವಂತ ಕುಸ್ತಿಪಟುವಿನ ಅಕಾಲಿಕ ಮರಣವು ಕುಸ್ತಿ ಕ್ಷೇತ್ರಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಕಿಮ್ಸ್ ಆವರಣದಲ್ಲಿ ಸಂತೋಷ್ ಸ್ನೇಹಿತರ ಆಕ್ರೋಶ-ಪ್ರತಿಭಟನೆ
ಹುಬ್ಬಳ್ಳಿ: ಕುಸ್ತಿ ಪಂದ್ಯದ ವೇಳೆ ಸಂಭವಿಸಿದ ದುರ್ಘಟನೆ ಬಳಿಕ ಅವರಿಗೆ ಜಿಲ್ಲಾಡಳಿತ, ಕ್ರೀಡಾ ಸಮಿತಿ, ಸರಕಾರಿ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷé ತೋರಿದ್ದರಿಂದಲೇ ಒಬ್ಬ ಉತ್ತಮ ಕುಸ್ತಿಪಟು ಮೃತಪಟ್ಟರೆಂದು ಸಂತೋಷ್ ಕುಟುಂಬದ ಸದಸ್ಯರು, ಸ್ನೇಹಿತರು, ಕುಸ್ತಿಪಟುಗಳು ರೋಪಿಸಿ, ಕೆಲಕಾಲ ಕಿಮ್ಸ್‌ನ ಮರಣೋತ್ತರ ಪರೀಕ್ಷೆ ಕೇಂದ್ರ ಎದುರು ಪ್ರತಿಭಟಿಸಿದರು.
ಮನೆಯಲ್ಲಿ ಬಡತನವಿದೆ. ಸಹೋದರರು ಲಾರಿ, ಟಂಟಂ ಚಾಲಕರಾಗಿದ್ದಾರೆ. ಬಿಕಾಂ ವಿದ್ಯಾರ್ಥಿಯಾಗಿದ್ದ ಸಂತೋಷ್ ಕುಸ್ತಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿದ್ದರು. ಫೆ. 20ರಿಂದ ಹರಿಯಾಣದ ರೋಹrಕ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಏಕೈಕ ಕನ್ನಡಿಗರಾಗಿ ಆಯ್ಕೆಯಾಗಿದ್ದರು. ಪದಕ ಗೆಲ್ಲುವ ಕನಸು ಕಾಣುತ್ತಿರುವುದಾಗಿ ಮಂಗಳವಾರ ತಮ್ಮಲ್ಲಿ ಹೇಳಿದ್ದರೆಂದು ಅವರ ಸ್ನೇಹಿತರು ಗದ್ಗದಿತರಾಗಿ ಹೇಳಿದರು.
ತಾಯಿ ಶಾಂತವ್ವ, “ಸಂತೋಷ ನನ್ನನ್ನು ಬಿಟ್ಟು ಹೋದಿಯಲ್ಲ. ಕೈ-ಕಾಲು ಮುರಿದುಕೊಂಡಾದರೂ ನನ್ನ ಎದುರು ಇದ್ದಿದ್ದರೆ ನಾನೇ ನಿನ್ನನ್ನು ಜೋಪಾನ ಮಾಡುತ್ತಿದ್ದೆ’ ಎಂದು ಎದೆ ಬಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ತಹಶೀಲ್ದಾರ ಶಶಿಧರ ಮಾಡ್ಯಾಳ, ಕಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಫ್. ಕಮ್ಮಾರ, ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಆಸ್ಪತ್ರೆಗೆ ಭೇಟಿ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.