ಯಲ್ಲಾಪೂರಾ ಪ್ರಗತಿ ಆಗಿಲ್ಲ ಮಾರಾಯ್ರೆ


Team Udayavani, Dec 2, 2019, 12:38 PM IST

huballi-tdy-1

ಧಾರವಾಡ: ಹಚ್ಚ ಹಸಿರಿನ ಪಚ್ಚೆ ಇದ್ದರೂ ಅದರ ಮೇಲೆ ಧೂಳಿನ ಹೊದಿಕೆ ಅಮಚಿಕೊಂಡಿದೆ. ನದಿ, ಹಳ್ಳ, ಜಲಪಾತಗಳಿದ್ದರೂ ಜನರು ಟ್ಯಾಂಕರ್‌ನೀರು ಕೊಳ್ಳುವುದು ತಪ್ಪಿಲ್ಲ. ಇನ್ನು ಕಾಡಿನ ಮಧ್ಯೆ ಇರುವ ತೋಟಮನೆಗಳ ಮಾಲೀಕರಿಗೆ ಹತ್ತೆಂಟುಸಮಸ್ಯೆಗಳು. ಒಟ್ಟಿನಲ್ಲಿ ಎಲ್ಲಾ ಇದ್ದರೂ ಜನರಿಗೆ ಏನೂ ಇಲ್ಲ ಎನ್ನುವಂತಿದೆ!

ಹೌದು, ಸುಂದರ ಪ್ರಕೃತಿ ರಮ್ಯತಾಣದ ಮಧ್ಯೆ ಇರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಸ್ಥಿತಿಗೆ ಈ ಅಂಶಗಳುಕನ್ನಡಿ ಹಿಡಿದಂತಿವೆ. ಉಪಚುನಾವಣೆ ರಂಗೇರಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಧಾರದಲ್ಲಿ ಚುನಾವಣೆನಡೆಯುತ್ತಿಲ್ಲ. ಆದರೆ ಕ್ಷೇತ್ರದಲ್ಲಿನ ಅನೇಕ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಒಂದೆಡೆಯಾದರೆ,ಶಾಶ್ವತ ಕಾಮಗಾರಿಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆ ರೂಪಿಸಿದ ಯೋಜನೆಗಳು ಪ್ರಸ್ತಾವನೆಯಲ್ಲಿಯೇ ಕುಳಿತಿವೆ.

1.72 ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ 2.3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ರಸ್ತೆ, ಕುಡಿಯುವ ನೀರು, ಬಡವರಿಗೆ ಮನೆ ನಿರ್ಮಾಣ, ಉದ್ಯೋಗ ಸೃಷ್ಟಿಸುವ ಸಣ್ಣ ಕೈಗಾರಿಕೆಗಳು ಯಾವುದೊಂದು ಸರಿಯಾಗಿ ಇಲ್ಲದಿರುವುದು ಕ್ಷೇತ್ರದಲ್ಲಿ ಸಂಚರಿಸಿದವರ ಅರಿವಿಗೆ ಬರುತ್ತದೆ.

ರಸ್ತೆ, ಸೇತುವೆ ಅಭಿವೃದ್ಧಿಯಾಗಿಲ್ಲ: ಯಲ್ಲಾಪುರ ಕ್ಷೇತ್ರ ಕಾಡಿನ ಮಧ್ಯದಲ್ಲಿ ಇದ್ದು ಸುತ್ತಲೂ ಇತರ ನಗರಗಳನ್ನುಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ಇವೆ. ನದಿ ಮತ್ತುದೊಡ್ಡ ಹಳ್ಳಗಳು ಇರುವುದರಿಂದ ಅವುಗಳಿಗೆ ದೊಡ್ಡ ದೊಡ್ಡ ಸೇತುವೆಗಳ ನಿರ್ಮಾಣ ಅಗತ್ಯವಿದೆ.ಈ ನಿಟ್ಟಿನಲ್ಲಿ ಯಲ್ಲಾಪುರಶಿರಸಿ ಮಧ್ಯೆ ಇರುವ ಬೇಡ್ತಿ ನದಿ ಸೇತುವೆ ಕೊಚ್ಚಿಕೊಂಡು ಹೋಗಿದೆ. ಈ ಮುಂಚೆಯೇ ಅದರ ದುರಸ್ತಿ ಕಾರ್ಯ ಸಾಗಿತ್ತು.

ಕಳೆದ ಎರಡು ವರ್ಷಗಳಿಂದ ಸೇತುವೆ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು ಇನ್ನೂ ಪೂರ್ಣಗೊಳ್ಳಲು ಎಷ್ಟು ವರ್ಷಬೇಕೋ ಗೊತ್ತಿಲ್ಲ.ಹಳಿಯಾಳಯಲ್ಲಾಪುರ ರಸ್ತೆ ಹದಗೆಟ್ಟಿದ್ದು, ಈ ರಸ್ತೆಗೆ ಹೊಂದಿಕೊಂಡಂತೆ ಇರುವ ಸಣ್ಣಪುಟ್ಟ ಹಳ್ಳಿಗಳಿಗೆಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಅಭಿವೃದ್ಧಿಯಾಗಿಲ್ಲ.

ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿದ್ದು, ಇದರ ಸುತ್ತಲಿನ ಹಳ್ಳಿಗಳಿಗೆ ಮಾತ್ರ ರಸ್ತೆ ಸಾರಿಗೆ ಕೊಂಚ ಸರಳ ಬಿಟ್ಟರೆ ಜಿಲ್ಲಾ ಮತ್ತು ತಾಲೂಕುರಸ್ತೆಗಳು ಹಾಗೂ ಅವುಗಳಿಂದ ಹಳ್ಳಿ ಮನೆಗಳನ್ನು ಸಂಪರ್ಕಿಸುವ ರಸ್ತೆಗಳ ಸ್ಥಿತಿ ಅಯೋಮಯವಾಗಿ ಹೋಗಿದೆ. ವಿ.ಎಸ್‌.ಪಾಟೀಲ್‌ ಶಾಸಕರಾಗಿದ್ದಾಗ ಹಳ್ಳಿ ಮನೆ ರಸ್ತೆಗಳು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ನಂತರ ಮತ್ತೆ ಹಳ್ಳಿ ಮನೆ ರಸ್ತೆಗಳನ್ನು ಸರ್ಕಾರ ತಿರುಗಿ ನೋಡಿಲ್ಲಎನ್ನುತ್ತಾರೆ ದರ್ಬೆಮನೆ ನಿವಾಸಿ ಶಶಿಧರ್‌ ಹೆಗಡೆ.ನದಿ ಇದ್ದರೂ ಟ್ಯಾಂಕರ್‌ ನೀರು: ಯಲ್ಲಾಪುರ ಕ್ಷೇತ್ರದಲ್ಲಿ ಬೇಡ್ತಿ ನದಿಯಾಗಿ ಹರಿಯುತ್ತದೆ. ಕಾಳಿ ನದಿಯ ಉಪಹಳ್ಳಗಳು ಹರಿಯುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿವರ್ಷ ಧೋ ಎಂದು ಮಳೆ ಸುರಿಯುತ್ತದೆ.

ಈ ಕ್ಷೇತ್ರದಿಂದಲೇ ಟಿಎಂಸಿಗಟ್ಟಲೇ ನೀರು ಸುಖಾ ಸುಮ್ಮನೆ ಹರಿದು ಮುಂದೆ ಸಾಗುತ್ತದೆ. ಆದರೆ ಈ ನೀರನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕ್ಷೇತ್ರದ ಸವಣಗಿರಿ, ಮಂಚಿಕೇರಿ, ಗಂಗೆಮನೆ, ಇಟ್ಟದ ಮನೆ, ಉತ್ಕಂಡ, ಕಾಳಿಮನೆ, ಕೊಣ್ಣಗೇರಿ, ಮೊಟ್ಟೆಗದ್ದೆ ಸೇರಿದಂತೆ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಬಾವಿಗಳು ಬತ್ತಿ ಹೋಗುತ್ತಿದ್ದು,ಅವರೆಲ್ಲ ಕುಡಿಯುವುದಕ್ಕೆ ಟ್ಯಾಂಕರ್‌ ನೀರನ್ನು ಕೊಂಡು ತರಬೇಕಿದೆ. ಕಾಡಿನ ಮಧ್ಯದ ಊರಿನಲ್ಲಿ ಜನರು ಟ್ಯಾಂಕರ್‌ ನೀರು ಕೊಳ್ಳುವ ಸ್ಥಿತಿ ಇರುವುದು ಕ್ಷೇತ್ರದ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ.

ಪ್ರವಾಸಿ ತಾಣಗಳಾಗಿಲ್ಲ ಅಭಿವೃದ್ಧಿ: ಯಲ್ಲಾಪುರ ಅಂದಾಕ್ಷಣ ನೆನಪಿಗೆ ಬರುವುದು ಮಾಗೋಡು ಮತ್ತು ಸಾತೋಡಿ ಜಲಪಾತಗಳು. ಈ ಎರಡೂ ಜಲಪಾತಗಳಿಗೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರುಭೇಟಿ ನೀಡುತ್ತಾರೆ. ಆದರೆ ಈ ಜಲಪಾತಕ್ಕೆ ಸಂಪರ್ಕಕಲ್ಪಿಸುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳದ್ದು ದೊಡ್ಡ ಪುರಾಣವೇ ಆಗುತ್ತದೆ. ರಸ್ತೆ ತಿರುವುಗಳಲ್ಲಿಸೂಚನಾ ಫಲಕಗಳಿಲ್ಲ, ರಸ್ತೆಬದಿ ಚಾಚಿಕೊಂಡಿರುವ ಗಿಡಗಂಟೆಗಳು ಪ್ರವಾಸಿಗರಿಗೆ ಕಿರಿಕಿರಿಯನ್ನುಂಟುಮಾಡುತ್ತವೆ. ಮಾಗೋಡು ಜಲಪಾತದ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳಲ್ಲಿ ಸಾಗುವವರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ. ಜೇನುಕಲ್ಲಗುಡ್ಡದ ರಸ್ತೆಯೂ ಇದಕ್ಕೆ ಹೊರತಾಗಿಲ್ಲ, ಇಲ್ಲಿಯೂ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.

 

-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.