ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸೇವೆ ನಾಳೆಯಿಂದ ಪುನಾರಂಭ
Team Udayavani, Oct 11, 2018, 6:25 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಸಕಲೇಶಪುರ-ಸುಬ್ರಮಣ್ಯ ಮಾರ್ಗದ ಘಾಟ್ ವಲಯದಲ್ಲಿ ಭೂಕುಸಿತದ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲುಗಳ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (16512/16514) ರೈಲು ಸೇವೆ ಪುನಾರಂಭಗೊಳ್ಳಲಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ (16515) ರೈಲು ಸೇವೆ ಅ.12ರಿಂದ, ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516) ರೈಲು ಅ.13ರಿಂದ, ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ (16575) ರೈಲು ಅ.11ರಿಂದ ಮತ್ತು ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ (16576) ರೈಲು ಅ.14ರಿಂದ ಪುನಾರಂಭವಾಗಲಿದೆ. ಬೆಂಗಳೂರು ನಗರ-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ (16517/16523) ರೈಲು ಅ.14ರಿಂದ ಹಾಗೂ ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (16518/16524) ರೈಲು ಅ.11ರಿಂದ ಸೇವೆ ಆರಂಭಿಸಲಿದೆ.
ಸಮಯ ಪರಿಷ್ಕರಣೆ: ಬೆಂಗಳೂರು-ಮೈಸೂರು ಟಿಪ್ಪು ಎಕ್ಸ್‌ಪ್ರೆಸ್ (12614) ರೈಲಿನ ಸಮಯವನ್ನು ಅ.13ರಿಂದ ಪರಿಷ್ಕರಿಸಲಾಗಿದೆ. ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ (ಮುಂಚೆ 3:00) ಹೊರಡಲಿದ್ದು, ಮೈಸೂರಿಗೆ ಸಂಜೆ 5:45ಕ್ಕೆ (ಮುಂಚೆ ಸಂಜೆ 5:30) ಬಂದು ಸೇರಲಿದೆ.
ರೈಲು ಸಂಚಾರ ರದ್ದು: ಕೇಂದ್ರೀಯ ರೈಲ್ವೆಯ ಸೊಲ್ಲಾಪುರ-ವಾಡಿ ವಲಯಗಳ ಮಧ್ಯೆ ನಾಗನ್ಸೂರ-ಬರೋಟಿ ನಿಲ್ದಾಣಗಳ ಮಧ್ಯೆ ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ಪ್ರಯುಕ್ತ ಕೆಲ ರೈಲುಗಳ ಸೇವೆ ರದ್ದುಪಡಿಸಲಾಗಿದೆ. ಅ.11ರಂದು ಹೈದರಾಬಾದ್-ವಿಜಯಪುರ ಪ್ಯಾಸೆಂಜರ್ (57130), ಅ.11 ಹಾಗೂ 12ರಂದು ವಿಜಯಪುರ-ಹೈದರಾಬಾದ್ ಪ್ಯಾಸೆಂಜರ್ (57129), ಅ.11ರಿಂದ 15ರವರೆಗೆ ರಾಯಚೂರು-ಹೈದರಾಬಾದ್ ಪ್ಯಾಸೆಂಜರ್ (57134), ಅ.11ರಿಂದ 15ರವರೆಗೆ ವಿಜಯಪುರ-ರಾಯಚೂರ ಪ್ಯಾಸೆಂಜರ್ (57133) ರೈಲುಗಳ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.