ಯೋಗಕ್ಕೆ ಬೇಕಿರುವುದು ಪೂರಕ ವಾತಾವರಣ; ಪ್ರಚಾರವಲ್ಲ


Team Udayavani, Jun 20, 2017, 3:09 PM IST

hub3.jpg

ಹುಬ್ಬಳ್ಳಿ: ವಿಶ್ವಕ್ಕೆ ಯೋಗದ ಕೊಡುಗೆ ನೀಡಿದ್ದೇ ಭಾರತ. ಯೋಗಕ್ಕೆ ಬೇಕಾಗಿರುವುದು ಪ್ರಚಾರವಲ್ಲ, ಪೂರಕ ವಾತಾವರಣ. ದೇಶದಲ್ಲಿ ಯೋಗ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ನಾವು ವಿಫ‌ಲರಾಗಿದ್ದೇವೆ. ಅಂತಾರಾಷ್ಟ್ರೀಯ ಯೋಗ ದಿನ ಮಾತ್ರ ಯೋಗಮಯವಾದರೆ ಸಾಲದು, ಪ್ರತಿದಿನವೂ ಯೋಗ ಮಾಡುವ ಪರಿಪಾಠ ಬೆಳೆಯಬೇಕು. 

ಭಾರತದ ಮೂಲ ಯೋಗವನ್ನಿಟ್ಟುಕೊಂಡು ಪಾಶ್ಚಾತ್ಯರು ಸಂಶೋಧನೆ ಮೂಲಕ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ಯೋಗವನ್ನು ಬೆಳೆಸುತ್ತಿದ್ದಾರೆ, ಬಳಸುತ್ತಿದ್ದಾರೆ. ಬಾಲ್‌ ಯೋಗ,  ಯೋಗ ವಿತ್‌ ಸ್ಟಿಕ್‌, ಕಾರ್ಡಿಯೋ ಯೋಗ, ಥಾಯ್‌ ಯೋಗ ಮಸಾಜ್‌, ಫ್ಲೈಯಿಂಗ್‌ ಯೋಗ, ಹೂಪ್‌ ಹಾಗೂ ರೋಪ್‌ ಯೋಗ ಈ ರೀತಿ ಯೋಗಕ್ಕೆ ವಿವಿಧ ರೂಪಗಳನ್ನು ನೀಡಿ ದೇಹ ದಂಡನೆಗೆ ಮನಸು ನಿಯಂತ್ರಣಕ್ಕೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ.

ನಮ್ಮಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯೋಗದಲ್ಲಿ ಸಂಶೋಧನೆ ನಡೆಯುತ್ತಿಲ್ಲ. ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಯೋಗವನ್ನು ವೃತ್ತಿಯಾಗಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಯೋಗ ಮತ್ತು ನ್ಯಾಚುರೋಪಥಿ ಕಲಿಯಲು ಆಸಕ್ತಿಯಿಲ್ಲ. ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಯೋಗಕ್ಕೆ ಸ್ನಾತಕೋತ್ತರದಲ್ಲಿ ಅವಕಾಶವಿಲ್ಲ. ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಅವಕಾಶವಿದ್ದು, ಕೆಲವು ವಿಶ್ವವಿದ್ಯಾಲಯಗಳು ಕೇವಲ ಡಿಪ್ಲೋಮಾ ಕೋರ್ಸ್‌ಗೆ ಮಾತ್ರ ಯೋಗವನ್ನು ಸೀಮಿತಗೊಳಿಸಿವೆ.

ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಯೋಗ ಅಧ್ಯಯನ ಪೀಠ ಆರಂಭಿಸಬೇಕು. ಶಾಲೆಗಳ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ನೀಡುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಸ್ನಾತಕೋತ್ತರ, ಪಿಎಚ್‌ಡಿ ಪಡೆದ ತಜ್ಞ ಯೋಗಗುರುಗಳನ್ನು ನೇಮಕ ಮಾಡಿ ಶಾಲೆಗಳ ದೈಹಿಕ ಶಿಕ್ಷಕರಿಗೆ ತರಬೇತಿ ಕೊಡಿಸಲು ಸರ್ಕಾರ ಮುಂದಾಗಬೇಕಿದೆ.  

ಸಿಬ್ಬಂದಿಗೆ ಯೋಗಾಭ್ಯಾಸ: ಕೇವಲ ಗಿನ್ನಿಸ್‌ ದಾಖಲೆಗಾಗಿ ಕೆಲ ನಿಮಿಷ ಯೋಗಾಸನ ಮಾಡಿಸಿದರೆ ಯೋಗ ಪ್ರಚಾರವಾಗುವುದಿಲ್ಲ. ಇದು ಸಂಸ್ಥೆಗಳ ಪ್ರಚಾರಕ್ಕೆ ಮಾಡುವ ಗಿಮಿಕ್‌ ಅಷ್ಟೇ. ಪ್ರತಿ ನಿತ್ಯ ಜನರು ಯೋಗ ಮಾಡುವಂತಾಗಬೇಕು. ವಿದೇಶಗಳಲ್ಲಿ ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಿಬ್ಬಂದಿಗಳ ಒಳಿತಿಗಾಗಿ ಯೋಗಗುರುಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

ಯೋಗಾಭ್ಯಾಸದಿಂದ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚುತ್ತಿರುವುದನ್ನು ಕಂಪನಿಗಳು ಮನಗಂಡಿವೆ. ಇತ್ತೀಚಿಗೆ ನಮ್ಮ ದೇಶದ ಕೆಲ ಕಂಪನಿಗಳು ಎಚ್ಚೆತ್ತುಕೊಂಡು ಪಾಶ್ಚಾತ್ಯರನ್ನು ಅನುಕರಿಸುತ್ತಿವೆ. ವಿದೇಶಗಳಲ್ಲಿ ಯಾರೇ ಹೊಸ ಯೋಗ ಗುರುಗಳು ಬಂದರೂ ಅವರಿಂದ ಕಲಿಯುತ್ತಾರೆ. 

ಹೊಸದನ್ನು ಕಲಿಸುತ್ತಾರೆಂಬ ಕುತೂಹಲಕ್ಕಾಗಿ ಹಣ ವ್ಯಯಿಸುತ್ತಾರೆ. ಭಾರತದಲ್ಲಿ ಯೋಗದ ನೆಪ ಮಾಡಿಕೊಂಡು ವ್ಯಾಪಕ ಪ್ರಚಾರ ಪಡೆದು ಹಣ ಗಳಿಸುತ್ತಿರುವವರ ಬಗ್ಗೆ ಪಾಶ್ಚಾತ್ಯರು ಜಾಗರೂಕರಾಗಿದ್ದಾರೆ. ಶೇ.100 ಯೋಗದಲ್ಲಿ ತೊಡಗಿಸಿಕೊಂಡವರಿಂದ, ತಜ್ಞರಿಂದ ಕಲಿಯಲು ಅವರು ಬಯಸುತ್ತಾರೆ. 

ಹಾಟ್‌ ಯೋಗ ಪ್ರಸಿದ್ಧಿ: 6-8 ತಿಂಗಳು ವಿಪರೀತ ಚಳಿಯಿರುವ ಪಾಶ್ಚಾತ್ಯ ದೇಶಗಳಲ್ಲಿ ಹಾಟ್‌ ಯೋಗ ಪ್ರಸಿದ್ಧಿ ಪಡೆದಿದೆ. ವಿಕ್ರಮ್‌ ಚೌಧರಿ ಸಂಶೋಧನೆ ಮಾಡಿ, ಇದನ್ನು ವಿನ್ಯಾಸಗೊಳಿಸಿ ಪೇಟೆಂಟ್‌ ಪಡೆದುಕೊಂಡಿದ್ದಾರೆ. ವಿಪರೀತ ಚಳಿ ಸಂದರ್ಭದಲ್ಲಿ ಯೋಗ ಮಾಡುವುದು ಕಷ್ಟ. 

ಇದೇ ಕಾರಣಕ್ಕಾಗಿ ಹೀಟರ್‌ಗಳನ್ನಿಟ್ಟುಕೊಂಡು ಅಂಥ ವಾತಾವರಣದಲ್ಲಿ ದೇಹದ ಉಷ್ಣತೆ ಕಾಪಾಡಿಕೊಳ್ಳುವ, ಉಸಿರಾಟ ಸರಾಗಗೊಳ್ಳುವ ದಿಸೆಯಲ್ಲಿ ಯೋಗ ಮಾಡಲಾಗುತ್ತದೆ. ನೂತನ ಯೋಗ ತರಬೇತಿಯಿಂದ ವಿಕ್ರಮ್‌ ಚೌಧರಿ ಕೋಟ್ಯಾಧೀಶರಾಗಿದ್ದಾರೆ. 

ಕರ್ನಾಟಕದ ಯೋಗ ಪಟು ಬಿ.ಕೆ.ಎಸ್‌. ಅಯ್ಯಂಗಾರ್‌ ಹಾಗೂ ಪಟ್ಟಾಭಿ ಜೋಯಿಸ್‌ ಅವರು ಹೇಳಿಕೊಟ್ಟ ಯೋಗ ಭಂಗಿಗಳನ್ನೇ ಹೆಚ್ಚಾಗಿ ಪಾಶ್ಚಾತ್ಯ ದೇಶಗಳಲ್ಲಿ ಇಂದಿಗೂ ಅನುಕರಿಸಲಾಗುತ್ತದೆ. ಯೋಗ ಜ್ಞಾನಕ್ಕಾಗಿ ಅವರ ಪುಸ್ತಕಗಳನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಯೋಗಕ್ಕೆ ಪೂರಕ ವಾತಾವರಣವಿಲ್ಲ.

ಯೋಗವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಯೋಗ ಉತ್ತೇಜನಕ್ಕಾಗಿ ಅನುಷ್ಠಾನಗೊಳಿಸಿದ ಯೋಜನೆಗಳು ಜನರಿಗೆ ತಲುಪಬೇಕು. ಪ್ರಧಾನಮಂತ್ರಿ ಕೌಶಲ್‌ ಯೋಜನೆಯಲ್ಲಿ ಯೋಗ ಉತ್ತೇಜನಕ್ಕೂ ಆದ್ಯತೆ ನೀಡಲಾಗಿದೆ. ಇದರ ಸಮರ್ಪಕ ಅನುಷ್ಠಾನವಾಗಬೇಕಿದೆ. 

* ವಿಶ್ವನಾಥ ಕೋಟಿ 

ಟಾಪ್ ನ್ಯೂಸ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.