ಯುವಕರು ಬದಲಾವಣೆ ಹರಿಕಾರರಾಗಲಿ: ಡಾ| ಗುರುರಾಜ
Team Udayavani, Jul 1, 2017, 3:16 PM IST
ಹುಬ್ಬಳ್ಳಿ: ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದು, ಉತ್ತರ ಕರ್ನಾಟಕದ ಯುವಕರಿಗೆ ಕೌಶಲ ಅಭಿವೃದ್ಧಿಗೆ ಅತ್ಯುತ್ತಮ ಅವಕಾಶವನ್ನು ಇದು ಒದಗಿಸಿಕೊಡಲಿದೆ ಎಂದು ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅಭಿಪ್ರಾಯಪಟ್ಟರು.
ದೇಶಪಾಂಡೆ ಪ್ರತಿಷ್ಠಾನ ಇಲ್ಲಿನ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ನಿರ್ಮಿಸಿರುವ ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರದ ಪೂಜಾ ಕಾರ್ಯಕ್ರಮದ ಅನಂತರ ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಕೇವಲ ಇಟ್ಟಿಗೆ, ಕಬ್ಬಿಣ, ಸಿಮೆಂಟ್‌ನಿಂದ ನಿರ್ಮಾಗೊಂಡಿದ್ದಲ್ಲ, ಇದರ ಹಿಂದೆ ಅನೇಕರ ಚಿಂತನೆ, ಶ್ರಮ ಇದೆ.
ಇಲ್ಲಿ ಕೌಶಲ ಅಭಿವೃದ್ಧಿ ಪಡೆಯುವವರು ಉತ್ತಮ ಸಾಧನೆ ತೋರುವುದೇ ಪರಿಶ್ರಮಕ್ಕೆ ಸಲ್ಲಿಸುವ ಗೌರವವಾಗಿದೆ ಎಂದರು. ಸಮಾಜದಲ್ಲಿ ಕೆಲವರು ಕೇವಲ ಸಮಸ್ಯೆಗಳನ್ನು ಹೇಳುವವರಿದ್ದಾರೆ. ಇನ್ನು ಕೆಲವರು ತಮ್ಮದೇ ವಿಚಾರಗಳನ್ನು ಹೇಳುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳಿಗೆ ಪರಿಹಾರ ರೂಪಿಸುವ, ಬದಲಾವಣೆ ತರುವ ಕಾರ್ಯ ಮಾಡುತ್ತಾರೆ.
ಯುವಕರು ಪರಿಹಾರ ಹಾಗೂ ಬದಲಾವಣೆ ಹರಿಕಾರರಾಗಬೇಕು. ಕೌಶಲ ಅಭಿವೃದ್ಧಿ ಕೇಂದ್ರ ಕೌಶಲ ತರಬೇತಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಪರಿಶ್ರಮ, ಶ್ರದ್ಧೆಯೊಂದಿಗೆ ತರಬೇತಿ ಹೊಂದುವ ಮೂಲ ಅತ್ಯುತ್ತಮ ಮಾನವಸಂಪನ್ಮೂಲವಾಗಿ ಹೊರಹೊಮ್ಮಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಮಹಾಪೌರ ಡಿ.ಕೆ.ಚವ್ಹಾಣ ಮಾತನಾಡಿ, ಅನೇಕ ಪದವೀಧರರು, ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ, ವಾಸ್ತವಿಕತೆ ಅರಿವಿರುವುದಿಲ್ಲ. ಇಲ್ಲಿನ ಶಿಬಿರಾರ್ಥಿಗಳು ಅನುಭವದ ಜತೆಗೆ ವಾಸ್ತವಿಕತೆ ಮಾಹಿತಿ ಪಡೆಯಬೇಕು. ದೇಶಪಾಂಡೆ ಪ್ರತಿಷ್ಠಾನದ ಈ ಕೌಶಲ ಅಭಿವೃದ್ಧಿ ಕೇಂದ್ರದ ಆಶಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ತಂದೆ- ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದರು.
ದೇಶಪಾಂಡೆ ಪ್ರತಿಷ್ಠಾನದ ಸ್ಥಾಪನೆಗೆ ಪ್ರೇರಕರಾದ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ನಮ್ಮ ಭಾಗದ ಯುವಕರು ಸಂದರ್ಶನಕ್ಕೆ ಹಾಜರಾದರೆ ಅದನ್ನು ಎದುರಿಸುವ ಸಾಮರ್ಥ್ಯದ ಕೊರತೆ ಮಾತುಗಳು ಕೇಳಿ ಬರುತ್ತಿದ್ದವು. ಕೌಶಲ ಅಭಿವೃದ್ಧಿ ತರಬೇತಿ ಇದಕ್ಕೆ ಮಹತ್ವದ ಸಹಕಾರಿ ಆಗಲಿದೆ.
ಕೇಂದ್ರ ಸರಕಾರ ಸಹ ಕೌಶಲ ಅಭಿವೃದ್ದಿಗೆ ಒತ್ತು ನೀಡಿದ್ದು, ಯುವಕರು ತರಬೇತಿಯಲ್ಲಿ ಶ್ರದ್ಧೆ ವಹಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಕೆನ್ ಅಗ್ರೋಟೆಕ್ ಸಂಸ್ಥಾಪಕ ವಿವೇಕ ನಾಯಕ ಮಾತನಾಡಿ, ಇಂದಿನ ಯುವಕರ ಕಣ್ಣಲ್ಲಿ ಚೈತನ್ಯವಿದೆ, ಅವಕಾಶಗಳಿವೆ ಆದರೆ ಅವುಗಳ ಸದುಪಯೋಗದ ಚಿಂತನೆಯ ಅಗತ್ಯವಿದೆ.
ಈ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ಕೌಶಲ ಅಭಿವೃದ್ಧಿ ಕೇಂದ್ರ ಯುವಕರ ನೆರವಿಗೆ ಧಾವಿಸಿದೆ ಎಂದರು. ಕೃಷಿ ಕುಟುಂಬದಲ್ಲಿ ಜನಿಸಿದ ತಾವು ಪದವಿ ಪಡೆದು ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದು, ಸ್ವಂತ ಉದ್ಯಮ ಸ್ಥಾಪನೆಗೆ ಮುಂದಾಗಿ ಹುಬ್ಬಳ್ಳಿಗೆ ಬಂದಾಗ ಸಣ್ಣ ಶೆಡ್‌ನಲ್ಲಿ ಮಿಡಿ ಸೌತೇಕಾಯಿ ರಫ್ತು ವಹಿವಾಟು ಆರಂಭಿಸಿದ್ದೆ. ಇಂದು ಸುಮಾರು 15ಸಾವಿರ ಟನ್‌ನಷ್ಟು ಮಿಡಿ ಸೌತೇಕಾಯಿ ರಫ್ತು ಆಗುತ್ತಿದೆ.
ಯುವಕರು ಮೊದಲು ಕೀಳರಿಮೆ ತೊರೆದು ಇದ್ದ ಅವಕಾಶಕಗಳನ್ನು ಸಾಧನೆಯಾಗಿ ಪರಿವರ್ತನೆಗೆ ಮುಂದಾಗಬೇಕು ಎಂದರು. ನ್ಯಾನೋμಕ್ಸ್‌ನ ಸುಚಿತ್ರಾ ಮಾತನಾಡಿ, 24/7 ಸೇಫ್ಹ್ಯಾಂಡ್‌ನ ಶ್ರಾವಣಿ, ದೇಶಪಾಂಡೆ ಪ್ರತಿಷ್ಠಾನದ ಸಿಇಒ ನವೀನ ಝಾ, ನವೋದ್ಯಮಿಯ ಡಾ| ನೀಲಂ ಮಹೇಶ್ವರಿ, ಗುರನಗೌಡ, ರವಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.