ಯಾರೋ ಹೇಳಿದ ತಕ್ಷಣ ಹಲಾಲ್ ಖರೀದಿ ಮಾಡುವುದು ಬಿಡಲ್ಲ: ಜಮೀರ್ ಅಹಮದ್ ಖಾನ್
Team Udayavani, Oct 21, 2022, 3:03 PM IST
ಹುಬ್ಬಳ್ಳಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಹೇಳಲಿಕ್ಕೆ ಅವರು ಯಾರು? ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿ ಮಾಡುವುದು ಬಿಡಲ್ಲ. ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಹಲಾಲ್ ನಿಷೇಧ ಕುರಿತು ಹೇಳಿದ ತಕ್ಷಣ ಯಾರು ಖರೀದಿ ಮಾಡುವುದು ಬಿಡುವುದಿಲ್ಲ. ಎಲ್ಲಿಯೂ ಹಲಾಲ್ ಹಾಗೂ ಮುಸ್ಲಿಂರು ಮಾರುವ ವಸ್ತುಗಳನ್ನು ಖರೀದಿಸುವುದನ್ನು ಬಿಟ್ಟಿಲ್ಲ. ಇದು ಇವತ್ತಿನಿಂದ ನಡೆದಿದ್ದಲ್ಲ. ಮೊದಲಿನಿಂದಲೂ ನಡೆದಿದೆ. ಹಲಾಲ್ ಹೇಳಿಕೆ ಮೂಲಕ ಸಾಮಾಜಿಕ ಸಾಮರಸ್ಯ ಕದಡುವು ಕೆಲಸ ಮಾಡುತ್ತಿದ್ದಾರೆ ಎಂದರು.
ಜೋಡೋ ಯಾತ್ರೆಗೆ ಹೆದರಿ ಸಂಕಲ್ಪ ಯಾತ್ರೆ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆ ಯಶಸ್ವಿಯಾಗುತ್ತಿರುವ ಭಯದಿಂದಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದೆ. ರಾಹುಲ್ ಅವರ ಐತಿಹಾಸಿಕ ಪಾದಯಾತ್ರೆಯಿಂದ ಪಕ್ಷದ ಸಂಘಟನೆ ಬಲಗೊಳ್ಳುತ್ತಿದೆ. ಇದು ಬಿಜೆಪಿಗರಿಗೆ ಭಯ ಹುಟ್ಟಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಹ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಅವರು ಯಾತ್ರೆ ಮಾಡುವುದಾಗಿದ್ದರೆ ಭಾರತ ಜೋಡೋ ಮೊದಲೇ ಮಾಡಬಹುದಿತ್ತಲ್ಲ ಎಂದರು.
ಇದನ್ನೂ ಓದಿ:ಲಕ್ನೋ: ಪ್ಲಾಸ್ಮಾ ಬದಲು ಮೂಸಂಬಿ ರಸದ ಡ್ರಿಪ್ಸ್ ಕೊಟ್ಟ ವೈದ್ಯರು- ಡೆಂಗ್ಯೂ ರೋಗಿ ನಿಧನ!
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರೊಬ್ಬ ಹಿರಿಯ ಅನುಭವಿ ರಾಜಕಾರಣಿ. ಅವರ ಆಯ್ಕೆ ಸಂತಸ ತಂದಿದೆ. ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿತ್ತು. ಹೀಗಾಗಿ ಖರ್ಗೆ ಆಯ್ಕೆಯನ್ನು ಸ್ವಾಗತ ಮಾಡುತ್ತೇನೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ. ರಾಜ್ಯಕ್ಕೆ ಒಳ್ಳೆದಾಗುವ ದೃಷ್ಠಿಯಿಂದ ನಾನು ನನ್ನ ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.