ಗಿರಿಯಾಪುರ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರ
ಗ್ರಾಮವನ್ನು ಅಜ್ಜಂಪುರ ತಾಲೂಕಿಗೆ ಸೇರ್ಪಡೆ ಮಾಡಿದ್ದಕ್ಕೆ ಆಕ್ರೋಶ
Team Udayavani, Apr 8, 2019, 5:24 PM IST
ಕಡೂರು: ಅಜ್ಜಂಪುರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿ ಸಿ ಗಿರಿಯಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಭಾನುವಾರ ಶ್ರೀ
ವೃಷಭೇಂದ್ರಸ್ವಾಮಿ ಗ್ರಾಮ ಸಮಿತಿ ಅಧ್ಯಕ್ಷ ಜಿ.ಸಿ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಗ್ರಾಮಸ್ಥರು, ಸಮಸ್ಯೆ ಇತ್ಯರ್ಥವಾಗುವವರೆಗೆ ಹೋರಾಟ ಮುಂದುವರೆಸಲಾಗುವುದು.
ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಣಯ ಕೈಗೊಂಡರು. ಸಮಿತಿ ಅಧ್ಯಕ್ಷ ಜಿ.ಸಿ. ಬಸವರಾಜು ಮಾತನಾಡಿ, ಅಜ್ಜಂಪುರ ತಾಲೂಕು ಕೇಂದ್ರ ರಚನೆಯಾದಾಗ ಹಿರೇನಲ್ಲೂರು ನಾಡಕಚೇರಿ ವ್ಯಾಪ್ತಿಗೆ ಸೇರಿದ್ದ
ಗಿರಿಯಾಪುರ ಗ್ರಾಮವನ್ನು ಅಜ್ಜಂಪುರ ತಾಲೂಕಿಗೆ ಸೇರ್ಪಡೆ ಮಾಡಿದ್ದರಿಂದ ಕೇವಲ 1 ಕಿ.ಮೀ ದೂರ ಕ್ರಮಿಸಿ ಕಚೇರಿ ಕೆಲಸ ಮಾಡಿಕೊಳ್ಳುತ್ತಿದ್ದ ಜನರು 10 ಕಿ.ಮೀ ದೂರ ಹೋಗಬೇಕಾಗಿದೆ ಎಂದರು.
ಗಿರಿಯಾಪುರ ಗ್ರಾಮದ ಜನರ ಶೇ.70 ಭಾಗ ಕೃಷಿ ಭೂಮಿ ಹಿರೇನಲ್ಲೂರು, ಕೇದಿಗೆರೆ, ಎಂ. ಚೋಮನಹಳ್ಳಿ, ಮೇಲನಹಲ್ಳಿ,
ಆಡಿಗೆರೆ ಬಾಸೂರು, ಅರೇಹಳ್ಳಿ ಗ್ರಾಮಗಳಲ್ಲಿ ಹರಡಿಕೊಂಡಿದೆ. ಜಮೀನು ಪ್ರದೇಶವೆಲ್ಲಾ ಕಡೂರು ತಾಲೂಕಿಗೆ ಸೇರಿದ್ದರೆ, ಕಚೇರಿ ಕೆಲಸಕ್ಕಷ್ಟೇ ಅಜ್ಜಂಪುರಕ್ಕೆ ತೆರಳಬೇಕಾಗಿದೆ ಎಂದರು.
ಈ ಬದಲಾವಣೆಯಿಂದಾಗಿ ಗ್ರಾಮದ 876 ಮತದಾರರು ಹಾಗೂ ಒಟ್ಟಾರೆ 1200 ಜನರ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರಚೀಟಿ ಮತ್ತಿತರ ಸರಕಾರಿ ದಾಖಲೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ವಿದ್ಯುತ್, ಬ್ಯಾಂಕುಗಳು ಮುಂತಾದ ಪ್ರತಿಯೊಂದು ಸೌಲಭ್ಯಕ್ಕೂ ಅಜ್ಜಂಪುರ
ತಾಲೂಕು ಕೇಂದ್ರವನ್ನು ನೋಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಬಹಳಷ್ಟು ಕಂದಾಯ ಇಲಾಖೆಗೆ ಸೇರಿದ ವ್ಯಾಜ್ಯಗಳು ಈಗಲೂ ಕಡೂರು ನ್ಯಾಯಾಲಯದಲ್ಲಿ ಇವೆ ಎಂದು ಹೇಳಿದರು.
ಗಿರಿಯಾಪುರ ಮತ್ತು ಹಿರೇನಲ್ಲೂರು ಅವಳಿ ಗ್ರಾಮಗಳಾಗಿದ್ದು, ಕೇವಲ 1 ಕಿ.ಮೀ ದೂರದಲ್ಲಿದ್ದು, ಪ್ರತಿಯೊಂದಕ್ಕೂ ಹಿರೇನಲ್ಲೂರು ಗ್ರಾಮದ ಜತೆ ತಮ್ಮ ಸಂಪರ್ಕ ಹೊಂದಿದ್ದ
ಗಿರಿಯಾಪುರದ ಜನರನ್ನು ಏಕಾಏಕಿ ತಾಲೂಕು ಕೇಂದ್ರ ರಚನೆ ನೆಪದಲ್ಲಿ ಒಕ್ಕಲೆಬ್ಬಿಸಿ ಅವರ ಹಕ್ಕನ್ನು ಮೊಟಕು ಮಾಡಲಾಗಿದೆ ಎಂದರು.
ಈ ಬಗ್ಗೆ ಈ ಹಿಂದಿನ ಶಾಸಕರು, ಮುಖ್ಯಮಂತ್ರಿಗಳು, ಸರಕಾರದ ಸಂಬಂಧಪಟ್ಟ ಸಚಿವರು ಹಾಗೂ ಅಧಿ ಕಾರಿಗಳು ಸೇರಿದಂತೆ
ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಹಿಂದಿನ ಜಿಲ್ಲಾ ಧಿಕಾರಿಗಳೂ ಕೂಡ ಈ ಬಗ್ಗೆ ಯಾವ ಸ್ಪಂದನೆಯನ್ನೂ ಮಾಡಿಲ್ಲ ಎಂದು ದೂರಿದರು.
ಯುವಜನಕೂಟದ ಅಧ್ಯಕ್ಷ ಶಿವಲಿಂಗಸ್ವಾಮಿ, ಅರುಣಕುಮಾರ್, ಗುರುಕೃಪಾ ಪ್ರೌಢಶಾಲೆಯ ಕಾರ್ಯದರ್ಶಿ ಮಹೇಶ್, ಗ್ರಾಮದ ಹಿರಿಯ ಮುಖಂಡ ಜಿ.ಪಿ.ಪ್ರಭುಕುಮಾರ್ ಗ್ರಾಪಂ ಮಾಜಿ ಸದಸ್ಯ ಉಮಾಮಹೇಶ್ ಸೇರಿದಂತೆ ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.