ಜಿಗಜೇವಣಿಯಲ್ಲಿ ನೀರಿಗಾಗಿ ಗ್ರಾಮಸ್ಥರ ಹರಸಾಹಸ

7 ಕೈ ಪಂಪ್‌ ಗಳಲ್ಲಿ 4 ರಿಪೇರಿಗೆ ಬಂದಿದ್ದು 3ರಲ್ಲಿ ಅಲ್ಪಸ್ವಲ್ಪ ನೀರು

Team Udayavani, May 5, 2019, 12:03 PM IST

5-MAY-16

ಇಂಚಗೇರಿ: ಜಿಗಜೇವಣಿ ಗ್ರಾಮದ ದಲಿತ ಕಾಲೋನಿ ನಿವಾಸಿಗಳು ನೀರಿಗಾಗಿ ಖಾಲಿ ಕೊಡದೊಂದಿಗೆ ನಿಂತಿರುವುದು.

ಇಂಚಗೇರಿ: ಜಿಗಜೇವಣಿ ಗ್ರಾಮದಲ್ಲಿ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹರಸಾಹಸ ಪಡುತ್ತಿದ್ದಾರೆ. ದಲಿತ ಓಣಿಯಲ್ಲಿ 3 ಕೈ ಪಂಪು ಇದ್ದು, ಅವು ರಿಪೇರಿಗಾಗಿ ಕಾಯುತ್ತಿದ್ದು ಅಲ್ಪ ಸ್ವಲ್ಪ ನೀರು ಬರುತ್ತಿವೆ. ನೀರಿಗಾಗಿ ಹಗಲಿರುಳು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದರಿಂದ ರಿಪೇರಿಗೆ ಬಂದ ಕೈ ಪಂಪುಗಳಿಗೆ ಪೈಪ್‌ ಅಳವಡಿಸಿದರೆ ಬೇಸಿಗೆಯಿಂದ ಪಾರಾಗಬಹುದು ಎಂಬುದು ಗ್ರಾಮಸ್ಥರ ಅನಿಸಿಕೆ.

ಕೈ ಪಂಪುಗಳ ರಿಪೇರಿಗಾಗಿ ಗ್ರಾಮದ ನಾಗರಿಕರು ಗ್ರಾಪಂಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕೆಂದು ದಲಿತ ಓಣಿಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.

ನೀರಿನ ಘಟಕ ಆರಂಭಿಸಿ: ದಲಿತರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಪ್ರಾರಂಭವಾಗಿ ಸುಮಾರು ವರ್ಷಗಳೇ ಗತಿಸಿವೆ. ಆದರೂ ಇನ್ನೂವರೆಗೂ ಕಾರ್ಯ ಪ್ರಾರಂಭವಾಗಿಲ್ಲ. ಅದರ ಪಕ್ಕದಲ್ಲಿಯೇ ಒಂದು ಬೋರ್‌ವೆಲ್ ಇದ್ದು ಅದಕ್ಕೆ ಸಂಪೂರ್ಣ ನೀರು ಇರುತ್ತದೆ. ಅದಕ್ಕೆ ವಿದ್ಯುತ್‌ ಸಂಪರ್ಕ ಕೊಟ್ಟರೆ ಗ್ರಾಮಸ್ಥರ ನೀರಿನ ತೊಂದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದನ್ನು ಹಲವಾರು ಬಾರಿ ಪಿಡಿಒಗೆ ತಿಳಿಸಿದರೂ ಸ್ಪಂದಿಸಿಲ್ಲ. ಇದರಿಂದ ಶಾಲೆ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮನೆಗೆ ನೀರು ಕುಡಿಯಲು ಹೋಗುವ ಪ್ರಸಂಗ ಬಂದಿದೆ.

ಜಿಗಜೇವಣಿ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿಯೂ ಸಹ ಸುತ್ತಾಡಿದರೂ ಹನಿ ನೀರು ಸಿಗದಂತಾಗಿದೆ. ಸುಮಾರು 3-4 ಕಿ.ಮೀ. ನೀರನ್ನು ಹುಡುಕುತ್ತ ಹೊಗುವ ಸಂದರ್ಭ ಬಂದಿದೆ. ನೀರಿಗಾಗಿ ದಿನಂಪ್ರತಿ ಕಚ್ಚಾಟ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ನೀಡಬೇಕೆಂದು ದಾನಮ್ಮ ಧನ್ಯಾಳ, ಸಾಗರ ಶಿವಶರಣ, ದುಂಡಪ್ಪ ವಾಲೀಕಾರ, ಮಲ್ಲಪ್ಪ ಡೋಣಿ, ಆನಂದ ಶಿವಶರಣ, ಜಯವ್ವ ಶಿವಶರಣ, ರೇವುಬಾಯಿ ಶಿವಶರಣ, ಸಂಗವ್ವ ಡೋಣಿ, ಮಲ್ಲವ್ವ ಶಿವಶರಣ, ಲಕ್ಷ್ಮೀಬಾಯಿ ಡೋಣಿ, ಸುನೀಲ ಧನ್ಯಾಳ, ಉಮೇಶ ಕಡ್ಡೆ, ಆಕಾಶ ಧನ್ಯಾಳ, ವಿಲಾಸ ಶಿವಶರಣ, ಲಾಯವ್ವ ಘೋಣಸಗಿ, ಸರದಾರ ಧನ್ಯಾಳ ಆಗ್ರಹಿಸಿದ್ದಾರೆ.

ಹಲವಾರು ಬಾರಿ ಗ್ರಾಪಂಗೆ ನಮ್ಮ ಕೇರಿಯ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನಮ್ಮ ದಲಿತರ ಕಾಲೋನಿಯಲ್ಲಿ ಶೀಘ್ರದಲ್ಲಿಯೇ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ನೀರಿನ ಬವಣೆ ತಪ್ಪಿದಂತಾಗುತ್ತದೆ.
ಸಾಗರ ಶಿವಶರಣ, ಗ್ರಾಮಸ್ಥ

ನಮಗ ಏನೂ ಬ್ಯಾಡ್ರಿ ಮೊದಲ ಕುಡ್ಯಾಕ ನೀರ ಕೊಡ್ರಿ. ನಮ್ಮ ಮನಿ ಕೆಲಸ ಬಿಟ್ಟು ನೀರಿಗಾಗಿ ಸುತ್ತಾಡೋದು ಬಂದೈತಿ. ಈ ತಾಪತ್ರಯದಿಂದ ನಮ್ಮನ್ನ ಪಾರು ಮಾಡಿರಿ. ಬೇಸಿಗೆಯಲ್ಲಿ ಇದರ ಖಾಯಂ ಯೋಜನೆ ಮಾಡಿ ನಮ್ಮ ಸಮಸ್ಯೆ ಬಗೆಹರಿಸಿರಿ. ಇನ್ನೂ 1 ತಿಂಗಳು ಹೇಗೆ ಕಳೆಯುವದು ತಿಳಿದಂಗಾಗೇತಿ. •ದಾನಮ್ಮ ಧನ್ಯಾಳ, ಗ್ರಾಮದ ಮಹಿಳೆ

ಟಾಪ್ ನ್ಯೂಸ್

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.