2020ಕ್ಕೆ 24×7 ಕುಡಿವ ನೀರು
•90.40 ಲಕ್ಷ ರೂ. ವೆಚ್ಚದ ಯೋಜನೆ ಕಾರ್ಯಾರಂಭ•15 ಸಾವಿರ ಮನೆಗಳಿಗೆ ಪೂರೈಕೆ
Team Udayavani, Jul 13, 2019, 10:55 AM IST
ಇಂಡಿ : ಧೂಳಖೇಡದಿಂದ ಇಂಡಿ ಪಟ್ಟಣಕ್ಕೆ 24x07 ಕುಡಿಯುವ ನೀರಿನ ಯೋಜನೆಗೆ ಪೈಪ್‌ಲೈನ್ ಮಾಡಲಾಗುತ್ತಿದೆ.
ಇಂಡಿ: ಸುಮಾರು ದಶಕಗಳಿಂದ ಬೇಸಿಗೆಯಲ್ಲಿ ಇಂಡಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು ನೀರಿನ ಸಮಸ್ಯೆ ಪರಿಹರಿಸಲು ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಪಣ ತೊಟ್ಟಿದ್ದು ಮಹಾರಾಷ್ಟ್ರ ಮಾದರಿಯಲ್ಲಿ ಧೂಳಖೇಡ ಬಳಿ ಹರಿದಿರುವ ಭೀಮಾ ನದಿಯಿಂದ ಇಂಡಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ 90.40 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದು 2020ರ ಜನವರಿ ತಿಂಗಳಲ್ಲಿ ನೀರು ಪೂರೈಕೆ ಆರಂಭಿಸಲು ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ನಗರಕ್ಕೆ ಟಾಕಳಿ ಬಳಿ ಭೀಮಾ ನದಿಯಿಂದ ಕುಡಿಯುವ ನೀರನ್ನು ಶುದ್ಧೀಕರಿಸಿ ಯಾವ ರೀತಿ ನೀರು ನೀಡಲಾಗುತ್ತಿದೆಯೋ, ಅದೇ ಮಾದರಿಯಲ್ಲಿ ಇಂಡಿ ಪಟ್ಟಣಕ್ಕೆ ದಿನದ 24 ಘಂಟೆ ಕುಡಿಯುವ ನೀರು ಪೂರೈಸಬೇಕು ಎಂದು ಶಾಶ್ವತ ಯೋಜನೆಯೊಂದನ್ನು ಶಾಸಕರು ಕೈಗೆತ್ತಿಕೊಂಡಿದ್ದು ಅತೀ ಶೀಘ್ರದಲ್ಲಿಯೇ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಪಟ್ಟಣದ ಮಧ್ಯವರ್ತಿ ಸ್ಥಳದಲಿರುವ ಗ್ರಂಥಾಲಯದ ಪಕ್ಕದ ಕುಂಬಾರ ಓಣಿಯಲ್ಲಿ ನೀರಿನ ಸಂಗ್ರಹಾಲಯದ ತೊಟ್ಟಿಗೆ ನೀರನ್ನು ಹರಿಸಿ ಇದರಿಂದ ಕೆಲವು ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಿ ನಂತರದಲ್ಲಿ 2ನೇ ಹಂತದಲ್ಲಿ ಜನೇವರಿ ತಿಂಗಳಲ್ಲಿ ವಿಜಯಪುರ ರಸ್ತೆಯ ಸುರಪುರ ಬಡಾವಣೆ ಸಮೀಪ ನೂತನವಾಗಿ ನಿರ್ಮಾಣ ಹಂತದ ಜಲ ಸಂಗ್ರಹಾಲಯದ ತೊಟ್ಟಿಗೆ ನೀರು ತುಂಬಿಸಿ ಇದರಿಂದ 15 ಸಾವಿರ ಮನೆಗಳಿಗೆ 24×7 ಕುಡಿಯುವ ನೀರು ಪೂರೈಸಲು ನಿರ್ಧರಿಸಲಾಗಿದೆ.
ಈಗಾಗಲೇ ಪಟ್ಟಣದಲ್ಲಿ 8 ಸಾವಿರ ಮನೆಗಳಿಗೆ ಉಚಿತ ಒಳಚರಂಡಿ ಜೋಡಣಾ ಕಾರ್ಯ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.