ಹೊಲ ಹದಮಾಡಿ ಮಳೆ ನಿರೀಕ್ಷೆಯಲ್ಲಿ ರೈತರು
ಬಸವಕಲ್ಯಾಣ: 73,247 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ •ಸೋಯಾಬಿನ್ ಬೀಜಕ್ಕೆ ಹೆಚ್ಚು ಬೇಡಿಕೆ
Team Udayavani, Jun 8, 2019, 10:43 AM IST
ಬಸವಕಲ್ಯಾಣ: ನಾರಾಯಣಪೂರ ವ್ಯಾಪ್ತಿಯ ಹೊಲದಲ್ಲಿ ರೈತನೊಬ್ಬ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು
ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹೈರಾಣು ಆಗಿರುವ ರೈತರು ಈ ವರ್ಷವಾದರೂ ಉತ್ತಮ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಹೊಲ ಹದಮಾಡಿ ಮಳೆಗಾಗಿ ಆಕಾಶದತ್ತ ಮುಖಮಾಡಿ ಕುಳಿತ್ತಿದ್ದಾರೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ತಾಲೂಕಿನ ಒಟ್ಟು 73.247 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ರೈತರು ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡು ಮಳೆ ನಿರೀಕ್ಷೆಯಲ್ಲಿದ್ದಾರೆ.
ಪ್ರಸಕ್ತ ಜನವರಿಯಿಂದ ಜೂನ್‌ವರೆಗೆ ತಾಲೂಕಿನಲ್ಲಿ ಸರಾಸರಿ 100.80 ಎಂಎಂನಷ್ಟು ಬೀಳಬೇಕಾದ ಮಳೆಯಲ್ಲಿ ಕೇವಲ 51.85 ಎಂಎಂ ಮಾತ್ರ ಮಳೆಯಾಗಿದೆ. ಹೋಬಳಿ ಗ್ರಾಮಗಳಾದ ಹುಲಸೂರಿನಲ್ಲಿ 102.6 ಎಂಎಂ ನಷ್ಟು ಬೀಳಬೇಕಾದ ಮಳೆ 58.76ರಷ್ಟು ಬಿದ್ದಿದೆ. ಮಂಠಾಳ 103.6 ಎಂಎಂ ಬಿಳಬೇಕಾದಲ್ಲಿ 38.21 ಎಂಎಂ ಮಾತ್ರ ಸುರಿದಿದೆ. ಮುಡಬಿಯಲ್ಲಿ 102.50 ಎಂಎಂ ಪೈಕಿ 60.50ರಷ್ಟು ಮಳೆ ಬಿದ್ದಿದೆ. ರಾಜೇಶ್ವರ ಹೋಬಳಿಯಲ್ಲಿ 101.70 ಎಂಎಂನಷ್ಟು ಬೀಳಬೇಕಾದ ಮಳೆಯಲ್ಲಿ ಕೇವಲ 58.4.0 ಮಾತ್ರ ಮಳೆ ಬಂದಿರುವ ವರದಿಯಾಗಿದೆ. ಇದರಿಂದ ಬಿತ್ತನೆಯಿಂದ ದೂರ ಉಳಿದಿದ್ದೇವೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಾದ ಸೋಯಾಬಿನ್, ತೊಗರಿ, ಉದ್ದು, ಹೆಸರು, ಜೋಳ ಬೀಜಗಳನ್ನು ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಮಾಡಲಾಗಿದ್ದು, ಬೀಜ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ತಿಳಿಸಿದ್ದಾರೆ.
ನಿರೀಕ್ಷೆಯಂತೆ ಮಳೆ ಬಂದರೆ ರಸ ಗೊಬ್ಬರ ಹಾಗೂ ಬೀಜ ಸಂಗ್ರಹ ಕಾರ್ಯ ಜೋರಾಗಿ ನಡೆಯಲಿದೆ.
ಸೋಯಾ ಬೀಜಕ್ಕೆ ಬೇಡಿಕೆ ಹೆಚ್ಚು: ತಾಲೂಕಿನ ಒಟ್ಟು 73.247 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗುತ್ತಿದ್ದು, ಉಳಿದ ಪ್ರದೇಶದಲ್ಲಿ ಹೆಸರು, ತೊಗರಿ, ಉದ್ದು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅತಿಸಣ್ಣ ಮತ್ತು ಸಣ್ಣ ರೈತರಿಗೆ ಪ್ರತಿ ಕೆ.ಜಿಗೆ 25 ರೂ. ರಿಯಾಯಿತಿ ಹಾಗೂ ಪ.ಜಾ.-ಪ.ಪಂ. ರೈತರಿಗೆ ಪ್ರತಿ ಕೆಜಿಗೆ 37.50 ರೂ. ನಷ್ಟು ರಿಯಾಯಿತಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದು ಕೊಳ್ಳಲು ಮೊದಲು ನೋಂದಣಿ ಮಾಡಿಕೊಳ್ಳಬೇಕು. ಮತ್ತು ಅಗತ್ಯ ದಾಖಲೆಗಳಾದ ಹೋಲ್ಡಿಂಗ್, ಆಧಾರ್ ಕಾರ್ಡ್ ನೀಡಬೇಕು.
ರೈತ ಸಂಪರ್ಕ ಕೇಂದ್ರದ ಮಾಹಿತಿ: ಕೋಹಿನೂರ: 9964243135, ಮಂಠಾಳ: 9663753448, ಮುಡಬಿ: 8277930535, ರಾಜೇಶ್ವರ: 9686398777, ಬಸವಕಲ್ಯಾಣ: 9590571466, ಹುಲಸೂರ: 8792926557.
ತಾಲೂಕಿನ ರೈತರ ಅಗತ್ಯಕ್ಕೆ ತಕ್ಕಂತೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಹೀಗಾಗಿ ಬಿತ್ತನೆಗೆ ಸಂಬಂಧ ಪಟ್ಟಂತೆ ರೈತರು ಆಯಾ ರೈತ ಸಂಪರ್ಕ ಕ್ಷೆಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು.
•ವೀರಶೆಟ್ಟಿ ರಾಠೊಡ,
ಸಹಾಯಕ ಕೃಷಿ ನಿರ್ದೇಶಕ, ಬಸವಕಲ್ಯಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.