ಜಿಲ್ಲೆಗೆ ಪ್ರಥಮ; ರಾಮ್‌-ರಾಜ್‌ ಕಾಲೇಜು ಸಾಧನೆ

•ಪಿಯು ಫಲಿತಾಂಶದಲ್ಲಿ 3 ವರ್ಷದಿಂದ ಸಾಧನೆ •ಸತತ ಪರಿಶ್ರಮ-ಶ್ರದ್ಧೆಯ ಬೋಧನೆಯೇ ಯಶಸ್ಸಿಗೆ ಕಾರಣ

Team Udayavani, Apr 28, 2019, 10:17 AM IST

28-April-3

ಹುಮನಾಬಾದ: ವಿವೇಕಾನಂದ ಶಿಕ್ಷಣ ಸಂಸ್ಥೆಯ ರಾಮ್‌ ಮತ್ತು ರಾಜ್‌ ಪದವಿಪೂರ್ವ ಕಾಲೇಜು

ಹುಮನಾಬಾದ: ಉನ್ನತ ಗುರಿ, ಉತ್ತಮ ಗುರು ಇದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಲು ಸಾಧ್ಯ ಎಂಬಂತೆ ಉತ್ತಮ ಆಡಳಿತ ಮಂಡಳಿ, ಪ್ರತಿಭಾವಂತ ಉಪನ್ಯಾಸಕರಿದ್ದರೆ ಪರೀಕ್ಷೆಯಲ್ಲಿ ಸರಳವಾಗಿ ಉತ್ತಮ ಫಲಿತಾಂಶ ತರಬಹುದು ಎಂಬ ಮಾತು, ಅನುದಾನಿತ ವಿವೇಕಾನಂದ ಶಿಕ್ಷಣ ಸಂಸ್ಥೆಯ ರಾಮ್‌ ಮತ್ತು ರಾಜ್‌ ಪದವಿಪೂರ್ವ ಕಾಲೇಜಿಗೆ ಅನ್ವಯವಾಗುವಂತಹದು.

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ರಾಮ್‌ ಮತ್ತು ರಾಜ್‌ ಹೆಸರಿನಲ್ಲಿ 1988-89ನೇ ಸಾಲಲ್ಲಿ ಅತ್ಯಲ್ಪ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಪದವಿಪೂರ್ವ ಕಾಲೇಜು ಈಗ 3 ದಶಕ ಪೂರೈಸಿದೆ. ಈ ಹಂತದಲ್ಲಿ 2016, 2018 ಮತ್ತು 2019ನೇ ಸಾಲಿನಲ್ಲಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳ ನಿದ್ದೆಗೆಡಿಸಿದೆ. 2019ನೇ ಸಾಲಿನಲ್ಲಿ ಈ ಸಂಸ್ಥೆ ಶೇ.85.02 ಫಲಿತಾಂಶ ಪಡೆದಿದೆ.

ಇತರೆ ಶಿಕ್ಷಣ ಸಂಸ್ಥೆಗಳಂತೆ ಬೆಳಗ್ಗೆ 10 ಗಂಟೆಗೆ ವರ್ಗ ಆರಂಭಿಸದೇ 8 ಗಂಟೆಗೆ ಆರಂಭಿಸಿ, ಸಂಜೆ 5:30ರ ವರೆಗೆ ವರ್ಗಗಳನ್ನು ನಡೆಸುತ್ತದೆ. ವರ್ಗ ಕೋಣೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಉಪನ್ಯಾಸಕರು ಬೋಧಿಸುತ್ತಾರೆ. ಆ ಬಳಿಕವೂ ಸುಧಾರಣೆ ಕಾಣದೇ ಇದ್ದಾಗ ತಕ್ಷಣ ಅರ್ಥ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ಅವರ ಮನಸ್ಥಿತಿ ಗಮನದಲ್ಲಿ ಇರಿಸಿಕೊಂಡು ಮಧ್ಯಮ ಮತ್ತು ಸಾಮಾನ್ಯ ಗ್ರಹಿಕೆಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತ್ಯೇಕ ವರ್ಗಗಳನ್ನು ನಡೆಸಿ ಫಲಿತಾಂಶ ಸುಧಾರಣೆಗೆ ಯತ್ನಿಸುತ್ತಾರೆ.

ಪ್ರತೀ ಪಾಠ ಪೂರ್ಣಗೊಂಡ ಬೆನ್ನಲ್ಲೇ ಟೆಸ್ಟ್‌ ಕಡ್ಡಾಯವಾಗಿ ನಡೆಸುತ್ತಾರೆ. ಪ್ರತೀ ತಿಂಗಳಿಗೊಂದು ವಿಷಯವಾರು ಪ್ರತ್ಯೇಕ ಟೆಸ್ಟ್‌ ತೆಗೆದುಕೊಂಡು ಪಡೆಯವ ಅಂಕಗಳನ್ನು ಅಧಾರವಾಗಿ ಇಟ್ಟುಕೊಂಡು ಜಾಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಮಧ್ಯ ಗುಂಪು ಚರ್ಚೆ ಆಯೋಜಿಸಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ವಾಹಿನಿಗೆ ತರಲು ಯತ್ನಿಸುತ್ತಾರೆ. ಇದರಿಂದ ಅನುತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಕನಿಷ್ಟ 40-45 ಅಂಕ ಪಡೆಯುವ ಮಟ್ಟಕ್ಕೆ ತಂದು ನಿಲ್ಲಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸುತ್ತಾರೆ.

ಕಾಲೇಜು ಕಟ್ಟಡಕ್ಕಿಂತ ಗುಣಮಟ್ಟದ ಶಿಕ್ಷಣ ಮುಖ್ಯ. ಸೂಟು ಬೂಟಿಗಿಂತ ಅಧ್ಯಯನಪರ ಉಪನ್ಯಾಸಕರು ಮುಖ್ಯ. ನಾವು ಪ್ರಚಾರಕ್ಕೆ ಯಾವತ್ತೂ ವಿಶೇಷ ಮಹತ್ವ ನೀಡಿಲ್ಲ. ಗುಣಮಟ್ಟಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ. ಪ್ರಚಾರದ ಸಿಹಿ ಕ್ಷಣಿಕ, ಗುಣಮಟ್ಟವೇ ಶಾಶ್ವತ. ಪ್ರಚಾರ ಬೇಕು. ಆದರೆ ಸಾಧನೆಗೆ ಅದೊಂದೇ ಕಾರಣವಲ್ಲ ಎಂದು ನಂಬಿದವರು ನಾವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಮ್ಮ ಮಹಾವಿದ್ಯಾಲಯದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳು ದೊಡ್ಡ ನಗರಳಲ್ಲಿನ ಕಾಲೇಜಿನಲ್ಲಿ ಪ್ರವೇಶ ಪಡೆದು ಶೇ.70-75 ಫಲಿತಾಂಶ ಪಡೆದಿದ್ದಾರೆ. ನೀವೇ ವಿವೇಚಿಸಿ, ಸ್ಥಳೀಯ ಸಂಸ್ಥೆ ಉತ್ತಮವೋ, ಮಹಾನಗರಗಳಲ್ಲಿನ ಶಿಕ್ಷಣ ಉತ್ತಮವೋ ಎಂಬುದನ್ನು.
• ಮಾಣಿಕಪ್ಪ ಗಾದಾ,
 ಅಧ್ಯಕ್ಷರು, ವಿವೇಕಾನಂದ ಶಿಕ್ಷಣ ಸಂಸ್ಥೆ

ಹಿತ್ತಲಗಿಡ ಮದ್ದಲ್ಲ ಎಂಬಂತೆ ಸ್ಥಳೀಯವಾಗಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಪಾಲಕರಿಗೆ ಅದೆಲ್ಲ ಗೌಣವಾಗುತ್ತಿದೆ. ದೂರದ ಊರು, ಹೆಚ್ಚು ಶುಲ್ಕ ಇರುವಲ್ಲೇ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎನ್ನುವ ತಪ್ಪುಕಲ್ಪನೆ ಪಾಲಕರಲ್ಲಿ ಮನೆ ಮಾಡಿದೆ. ಇದೆಲ್ಲದರ ಜೊತೆಗೆ ಪಾಲಕರು ಪತ್ರಿಕೆ, ಟಿವಿಗಳಲ್ಲಿ ನೀಡುವ ಪ್ರಚಾರಕ್ಕೆ ಮರುಳಾಗಿ ಲಕ್ಷಾಂತರ ಶುಲ್ಕ ಪಾವತಿಸುತ್ತಾರೆ. ಆದರೆ ಸ್ಥಳೀಯ ಕಾಲೇಜುಗಳಲ್ಲಿ ಅದರ ಶೇ.25 ಶುಲ್ಕ ಪಾವತಿಸಲು 10 ಬಾರಿ ವಿಚಾರಿಸುತ್ತಾರೆ. ಪರಿಸ್ಥಿತಿ ಹೀಗಿರಬೇಕಾದರೆ ಕನಿಷ್ಟ ಶುಲ್ಕದಲ್ಲಿ ಈ ವಿದ್ಯಾರ್ಥಿಗಳಿಗೆ ಗುಣಮಟ್ದ ಶಿಕ್ಷಣ ಶಿಕ್ಷಣ ಹೇಗೆ ನೀಡಲು ಸಾಧ್ಯ? ಆದರೂ ನಮ್ಮಲ್ಲಿನ ಸಂಪನ್ಮೂಲ ಬಳಕೆ ಮಾಡಿಕೊಂಡು ಮುಂದಿನ ವರ್ಷ ಶೇ.90ಕ್ಕೂ ಹೆಚ್ಚು ಫಲಿತಾಂಶ ತರಲು ಶಕ್ತಿಮೀರಿ ಯತ್ನಿಸುತ್ತಿದ್ದೇವೆ.• ಮಲ್ಲಿನಾಥ ಚಿಂಚೋಳಿ,
ರಾಮ್‌ ಮತ್ತು ರಾಜ್‌ ಪಪೂ ಕಾಲೇಜು ಪ್ರಾಚಾರ್ಯ

ಶಶಿಕಾಂತ ಕೆ.ಭಗೋಜಿ

ಟಾಪ್ ನ್ಯೂಸ್

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.