ಬೆಂಗಳೂರು-ಜಪಾನ್ ನಡುವೆ ವಿಮಾನ ಸೇವೆ
Team Udayavani, Mar 25, 2019, 12:14 PM IST
ಬೆಂಗಳೂರು: ಜಪಾನ್ ಏರ್‌ಲೈನ್ಸ್ ವತಿಯಿಂದ 2020ರ ಮಾರ್ಚ್‌ನಿಂದ ಬೆಂಗಳೂರು-ಟೋಕಿಯೊ ನಡುವೆ ನೇರ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಜಪಾನ್ ರಾಯಭಾರಿ ಟಕಯೂಕಿ ಕಿಟಗವಾ ಪ್ರಕಟಿಸಿದರು.
ನಗರದಲ್ಲಿ ಭಾನುವಾರ ಜಪಾನ್ ತಂಡದಿಂದ “ಕಾಸ್‌ಪ್ಲೇ ವಾಕ್-2019′ ಎರಡನೇ ಆವೃತ್ತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಪಾನ್ ಮತ್ತು ಭಾರತದ ನಡುವೆ ಸಾಕಷ್ಟು ಕೊಡು-ಕೊಳ್ಳುವಿಕೆಗಳು ನಡೆಯುತ್ತಿವೆ. ಈಗ ಬೆಂಗಳೂರಿನಿಂದ ನೇರವಾಗಿ ಟೋಕಿಯೊಗೆ ವಿಮಾನ ಸೇವೆ ಕಲ್ಪಿಸುವುದರಿಂದ ಎರಡೂ ದೇಶಗಳಲ್ಲಿನ ಪ್ರವಾಸೋದ್ಯಮ ವೃದ್ಧಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಬೆಂಗಳೂರಿನಿಂದ ಚೆನ್ನೈ ಅಥವಾ ದೆಹಲಿ ಮೂಲಕ ಜಪಾನ್‌ಗೆ ತೆರಳುತ್ತಿದ್ದಾರೆ. ಇದಕ್ಕೆ 12ರಿಂದ 14 ತಾಸು ಸಮಯ ಹಿಡಿಯುತ್ತದೆ. ನೇರ ಸೇವೆಯಿಂದ 9 ತಾಸುಗಳಲ್ಲಿ ಜಪಾನ್ ತಲುಪಬಹುದು. ನಗರದಲ್ಲೇ ವಾಸವಿರುವ ಎರಡು ಸಾವಿರಕ್ಕೂ ಅಧಿಕ ಜಪಾನ್ ನಿವಾಸಿಗಳಿಗೂ ಇದರಿಂದ ಅನುಕೂಲ ಆಗಲಿದೆ ಎಂದರು.
ಜಪಾನ್ ಕಾಸ್‌ಪ್ಲೇ ವಾಕ್‌ನಿಂದ ಸಂಸ್ಕೃತಿಗಳ ವಿನಿಮಯಕ್ಕೆ ವೇದಿಕೆ ಆಗಿದೆ. ಕಾಸ್ಮಿಕ್ಸ್ ಉಪಕರಣಗಳನ್ನು ಇಲ್ಲಿನ ಯುವಕರು ತಯಾರಿಸಿದಲ್ಲಿ, ಅದಕ್ಕೆ ಜಪಾನ್ ಸೂಕ್ತ ಮಾರುಕಟ್ಟೆ ಕಲ್ಪಿಸಲಿದೆ ಎಂದೂ ಹೇಳಿದರು. ಇದೇ ವೇಳೆ ಸೇಂಟ್ ಮಾರ್ಕ್ಸ್ ಹೋಟೆಲ್‌ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೃತ್ತದವರೆಗೆ ಕಾಸ್‌ಪ್ಲೇ ವಾಕ್ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.