ಜಿಲ್ಲೆಯಲ್ಲಿ 10 ಜನರಿಗೆ ಸೋಂಕು ದೃಢ ; 8759 ಜನರು ನಿಗಾದಲ್ಲಿ
Team Udayavani, Jun 26, 2020, 1:14 PM IST
ಗದಗ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 10 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಪರಿಣಾಮ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಗುರುವಾರದ 10 ಸೇರಿದಂತೆ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 104 ಜನರಲ್ಲಿ ಸೋಂಕು ದೃಢಪಟ್ಟಿದೆ. ಅವುಗಳಲ್ಲಿ ಇಬ್ಬರು ಮೃತಪಟ್ಟಿದ್ದು 47 ಜನ ಗುಣಮುಖರಾಗಿದ್ದಾರೆ. 55 ಪ್ರಕರಣಗಳು ಸಕ್ರಿಯವಾಗಿವೆ. ಈ ಪೈಕಿ ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಸೋಂಕಿತ ವ್ಯಕ್ತಿ(ಪಿ.9407) ಸೂಪರ್ ಸ್ಪ್ರೆಡರ್ ಎನಿಸಿಕೊಂಡಿದ್ದಾನೆ. ಈತನಿಂದ ಗುರುವಾರ ಜಿಲ್ಲೆಯಲ್ಲಿ 8 ಜನರಿಗೆ ಕೋವಿಡ್ ಸೋಂಕು ಹರಡಿರುವುದು ಖಚಿತವಾಗಿದೆ. ಪಿ. 9407 ವ್ಯಕ್ತಿಯೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಾಗಿ ಇಟಗಿ ಗ್ರಾಮದ 3 ವರ್ಷದ ಹೆಣ್ಣು ಮಗು(ಪಿ.10154) ಹಾಗೂ 37 ವರ್ಷದ ವ್ಯಕ್ತಿ(ಪಿ.10155)ಗೆ ಸೋಂಕು ದೃಢವಾಗಿದೆ. ಜೊತೆಗೆ ಮುಂಡರಗಿ ಪಟ್ಟಣದ ವಿದ್ಯಾನಗರ ನಿವಾಸಿ 58 ವರ್ಷದ ಪುರುಷ (ಪಿ.10147), ಹುಡ್ಕೊ ಕಾಲೋನಿಯ 66 ವರ್ಷದ ವ್ಯಕ್ತಿ(ಪಿ.10149), 34 ವರ್ಷದ ವ್ಯಕ್ತಿ (ಪಿ.10150) ಹಾಗೂ 44 ವರ್ಷದ ವ್ಯಕ್ತಿ(ಪಿ.10151), ಗದಗಿನ ಸಿದ್ದರಾಮೇಶ್ವರ ನಗರದ 30 ವರ್ಷದ ಪುರುಷ (ಪಿ.10148) ಹಾಗೂ ಲಕ್ಷ ¾ಣಸಾ ನಗರದ 31 ವರ್ಷದ ಪುರುಷ ಪಿ-10152 ಸೋಂಕು ದೃಢವಾಗಿದೆ.
ಇನ್ನುಳಿದಂತೆ ವಿಜಯಪುರ ಜಿಲ್ಲಾ ಪ್ರವಾಸದಿಂದಾಗಿ 16 ವರ್ಷದ ಬಾಲಕ(ಪಿ.10146) ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ 9 ವರ್ಷದ ಬಾಲಕಿ (ಪಿ-10153)ಗೆ ಸೋಂಕು ಇರುವುದು ದೃಢವಾಗಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿನ ಶಂಕೆ ಕಂಡು ಬಂದವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ಸಹೋದ್ಯೋಗಿಗಳಲ್ಲಿ ಢವಢವ: ಸೋಂಕಿತ ವ್ಯಕ್ತಿ(ಪಿ.9407)ಯು ನೀರಾವರಿ ಇಲಾಖೆ ನೌಕರನಾಗಿದ್ದು, ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಆತನ ಸಂಪರ್ಕದಿಂದ 7 ಜನ ಸಹ ಸಿಬ್ಬಂದಿಗೆ ಗುರುವಾರ ಕೊರೊನಾ ಸೋಂಕು
ದೃಢಪಟ್ಟಿದೆ. ಇನ್ನುಳಿದಂತೆ 3 ವರ್ಷದ ಮಗು ಸೋಂಕಿತನ ಪುತ್ರಿ. ಹೀಗಾಗಿ ಸಂಬಂ ಧಿಕರು ಹಾಗೂ ಸಹ ಸಿಬ್ಬಂದಿಗಳಲ್ಲಿ ಕೊರೊನಾ ಆತಂಕ ಹೆಚ್ಚಿದೆ.
413 ಜನರ ವರದಿ ಬಾಕಿ: ಕೊರೊನಾ ಸೋಂಕಿನ ಪರೀಕ್ಷೆಗಾಗಿ 9330 ಜನರ ಗಂಟಲಿನ ಮಾದರಿ ಸಂಗ್ರಹಿಸಿದ್ದು, 104 (ಇಂದಿನ 10 ಸೇರಿ) ಪ್ರಕರಣಗಳು ದೃಢ ಪಟ್ಟಿವೆ. 8813 ವರದಿಗಳು ನಕಾರಾತ್ಮಕವಾಗಿವೆ. 55 ಪ್ರಕರಣಗಳು ಸಕ್ರಿಯವಾಗಿದ್ದು, 413 ಜನರ ವರದಿ ಬರಬೇಕಿದೆ. ಈವರೆಗೆ 8759 ಜನರು ನಿಗಾದಲ್ಲಿದ್ದು, 80 ಜನರು ವೈದ್ಯಕೀಯ ಸೌಲಭ್ಯಗಳೊಂದಿಗೆ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ. ಜೊತೆಗೆ ಜೂ. 25ರ ವರೆಗೆ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1048 ಪ್ರಯಾಣಿಕರು ಆಗಮಿಸಿದ್ದಾರೆ. 385 ಜನ ಗದಗ ಜಿಲ್ಲೆಗೆ ಸಂಬಂಧಿಸಿದ್ದಾರೆ. ಅವರರಲ್ಲಿ 334 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 51 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 334 ಜನರ ಪೈಕಿ 15 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. 663 ಜನರು ಬೇರೆ
ಜಿಲ್ಲೆಯವರಾಗಿದ್ದು, ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.
ವೈಯಕ್ತಿಕ ಸುರಕ್ಷತೆಗೂ ಒತ್ತು ನೀಡಿ: ಎಸ್‌ಪಿ
ಗದಗ: ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಜಿಲ್ಲೆಯ ಪೊಲೀಸ್ ಪಡೆ ಶ್ರಮಿಸಿರುವುದು ಶ್ಲಾಘನೀಯ. ತಮ್ಮ ಕರ್ತವ್ಯದೊಂದಿಗೆ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಯತೀಶ್ ಎನ್. ಸಲಹೆ ನೀಡಿದ್ದಾರೆ. ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಜಿಲ್ಲಾ ಗಡಿಯ ಚೆಕ್ ಪೋಸ್ಟ್‌ಗಳಲ್ಲಿ ವೈಯಕ್ತಿಕ ಶುಚಿತ್ವ, ಸುರಕ್ಷತೆ ಜೊತೆಗೆ ಸಾರ್ವಜನಿಕರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸುವಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣದ ಮುಂದುವರಿದ ಕಾರ್ಯಾಚರಣೆಯಲ್ಲಿ ಈಗ ಲಾಕ್‌ಡೌನ್ ತೆರವಿನ ಸ್ಥಿತಿಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ವೈಯಕ್ತಿಕ ಸುರಕ್ಷತೆಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಿದೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕೊವಿಡ್-19 ಸೋಂಕು ತಡೆಗೆ ಇಲಾಖೆಯಿಂದ ಪೂರೈಸಲಾದ ಸುರಕ್ಷತಾ ಸಾಮಗ್ರಿಗಳಾದ ಮುಖಕ್ಕೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಹೆಡ್‌ಶೀಲ್ಡ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಜೊತೆಗೆ ತಮ್ಮ ಕುಟುಂಬಗಳ ಸುರಕ್ಷತೆ ಕುರಿತು ಎಚ್ಚರವಹಿಸಬೇಕು ಎಂದು ಸಲಹೆ ನೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.